ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಶತಮಾನ? ಕಲ್ಲಮಠದಪ್ರಭುದೇವ. ತನು ನಷ್ಟ ಮನ ನಷ್ಟ ನೆನಹು ನಷ್ಟ, ಭಾವ ನಷ್ಟ, ಜ್ಞಾನ ನಷ್ಟ; ಇಂತೀ ಪಂ ಚನಷ್ಟದೊಳಗೆ ನಾನು ನಷ್ಟವಾದೆನು, ಆ ನಷ್ಟದೊಳಗೆ ನೀನು ನಷ್ಟವಾದೆ, ಕಲಿದೇವರ ದೇವಾ ಎಂಬ ನುಡಿ ನಿಶ್ಯಬ್ಬ ಬ್ರಹ್ಮಮುಚ್ಯತೇ ಎನುತಿತ್ತು. ಟೀಕೆ|| ಅಂಗಾಂಗಸಂಬಂಧಿಯಾದ ಶರಣನ ತನುಮನಭಾವಜ್ಞಾನಂಗಳೆಲ್ಲವೂ ಲಿಂಗದೊಳ್ಳೆಕ್ಯವಾಗಿ ಅವ ಅಹಹಿಸಿಕೊಂಬಿವೆರಡದು ಮಹಾಘನಲಿಂಗವೆ ತಾನಾದಲ್ಲಿ ತಾನೆಂಬಲಿಹಿನ ಉಲುಹಡಗಿ ನಿಶ್ಯಬ್ದ ಬ್ರಹ್ಮವೆ ಆಗಿರ್ದ ಶರಣನೆಂಬುದೀ ವಚನದ ತಾತ್ಪಯ್ಯಾರ್ಧ. 2. ಪ್ರಭುದೇವರ ಮಂತ್ರಗೋವ್ಯದ ಟೀಕೆ - ಪ್ರಭುದೇವನ ಮಂತ್ರಗೋಪ್ಯದಲ್ಲಿ 27 ಪದ್ಯಗಳಿವೆ, ಇದು ಅವಕ್ಕೆ ವ್ಯಾಖ್ಯಾನ, ಟೀಕೆಯ ಆರಂಭದಲ್ಲಿ ಈ ವಾಕ್ಯವಿದೆ ಅಂದಿನ ಚಿತ್ರಭು ತಾನೆ ಇಂದಿನ ಕಲ್ಲಮರದಪ್ರಭುವಿನಂಗದಲ್ಲಿ ಒಡೆದು ಮೂಡಿ ಬೆಳಗುತ್ತಿರ್ದು ತನ್ನಂದಿನ ಮಂತ್ರಗೋಪ್ಯದಿಪ್ಪತ್ತೇವಚನಗಳಿಗೆ ಅರ್ಧಮಂ ತಾನೆ ಅರ್ಥೈಸಿದನೆಲ್ಲಾ ಶಿವಗಣಂಗಳeವಂತೆ, ಇದು ಶಿವಜ್ಞಾನದರ್ಪಣಮಾಗಿರ್ದುದು ಒಂದು ಪದ್ಯವನ್ನೂ ಅದರ ಟೀಕೆಯನ್ನೂ ಬರೆಯುತ್ತೇವೆ. ಪದ್ಯ! ಎಂಟೆಗಳ ಕಮಲದಾ ನವಬ್ರಹ್ಮಪುರದೊಳಗೆ | ಎಂಟುಬೀದಿಯೊಳೆಂಟು ಕರಿಗಳುಂಟು | ಎಂಟುಕರಿಗಳ ಸುಟ್ಟು ಕಂಟಕಂಗಳ ಗೆಲಿದು | ದಾಂಟೆದೆನು ಸಂಸಾರಸಾಗರವನು|| ಟೀಕೆ|| ಬ್ರಹ್ಮಾಂಶಿಕವಪ್ಪ ಆತ್ಮನು ಪಂಚಬ್ರಹ್ಮದಿಂದೆಗೆದ ಪಾಂಚಭೌತಿಕ ದೇಹಯುಕ್ತನಾಗಿರಲು ಇಂತೆರಡುಬ್ರಹ್ಮರಿಂದೊಗೆದ ಹೊಸಕೃತ್ರಿಮದೇಹವೆಂಬುದೀಗ ನವಬ್ರಹ್ಮ ಪುರವೆಂಬ ಶಬ್ದಕ್ಕರ್ಧ; ಆದೇಹದ ಹೃದಯಕಮಲದ ಎಂಟೆಸಳು ಸಂಚಲ ಗುಣರೂಪವಾಗಿಹುವೆಂಬುದೀಗ ಎಂಟೆಗಳ ಕಮಲದಾ ಎಂಬ ಶಬ್ದಕ್ಕರ್ಧ; ಅಷ್ಟತ ನುವೀಧಿಗಳ ಅಷ್ಟಮದಂಗಳೆಂಬುದೀಗ ಎಂಟುಬೀದಿಯೊಳೆಂಟು ಕರಿಗಳುಂಟು ಎಂಬ ಶಬ್ದಕ್ಕರ್ಧ; ಅಷ್ಟದಳಗುಣವಿಡಿದು ಈಯೆಂಟುಮದದಿಂದ ದೇಹ ತಾನೆಂದು ಜೀವ ತಾನಾಗಿ ಸತ್ತು ಹುಟ್ಟುವನಾಗಿ ಅದೀಗ ಕಂಟಕವೆಂಬ ಶಬ್ದಕ್ಕರ್ಧ: ಇಂತಪ್ಪ ದೇಹ ದಲ್ಲಿ ಜ್ಞಾನೋದಯವಾದ ಶರಣನು ಆಜ್ಞಾನಾಗ್ನಿಯಿಂದ ಆ ದೇಹದ ಗುಣಂಗಳ X, Vol. I, I49.