ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ)

                                                           ಚಂದ್ರಕವಿ.
                                                    ಚಂದ್ರಕವಿ ಸು. 1430
ಈತನು ವಿರೂಪಾಕ್ಷಾಸ್ಥಾನ, ಗುರುಮೂರ್ತಿಶಂಕರಶತಕ ಇವು ಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ.ಇವನಿಗೆ ಚಂದ್ರಶೇಖರ ಎಂಬ ಹೆಸರೂ ಉಂಟು. ಅಷ್ಟಭಾಷೆಗಳಲ್ಲಿ ಪ್ರವೀಣನಾಗಿದ್ದನೆಂದು ಹೇಳಿದೆ; ಈ ಭಾಷೆಗಳು ಆವುವೋ ತಿಳಿಯದು.ವಿಜಯನಗರದ ದೊರೆ ಯಾದ ವಿಜಯರಾಯನ ಮಗ ಗಜವೇಂಟೆಕಾರ ಪ್ರೌಢದೇವರಾಯನ (1419-1446) ಮಹಾಪ್ರಧಾನ ಗುರುರಾಯನ ಆಜ್ಞಾನುಸಾರವಾಗಿ ಈ ಗ್ರಂಥಗಳನ್ನು ಬರೆದಂತೆ ಹೇಳುವುದರಿಂದ ಕವಿ ಸುಮಾರು 1430 ರಲ್ಲಿ ಇದ್ದಿರಬಹುದು. ತನ್ನ ಕವಿತೆಯ ಉತ್ಕೃಷ್ಟತೆಯನ್ನು ಈ ಪದ್ಯದಲ್ಲಿ ತಿಳಿಸಿದ್ದಾನೆ--

ಅಲರ್ಗಣೆಯಿಂದಿರ್ಮಡಿ ತಂ | ಬೆಲರಿಂ ಮೂವಡಿ ವಸಂತನಿಂ ನಾಲ್ವಡಿ ಕಾ | ದಲರಿಂದಯ್ವಡಿ ಮೋಹಿವು| ದೆಲೆಚಂದ್ರಕವೀಂದ್ರ ನಿನ್ನ ಕನ್ನಡಗಬ್ಬಂ || ಇವನ ಗ್ರಂಥಗಳಲ್ಲಿ |

                                              1 ವಿರೂವಾಕ್ಷಾಸ್ಥಾನ 

ಇದು ಚಂಪೂರೂಪವಾಗಿದೆ; ಪಂಪೆಯ ವಿರೂಪಾಕ್ಷನ ಆಸ್ಥಾನ ವನ್ನು ವರ್ಣಿಸುವ ಗ್ರಂಥ. ಈ ಗ್ರಂಥರಚನೆಗೆ ಕಾರಣವನ್ನು ಕವಿ ಈ ರೀತಿಯಾಗಿ ಹೇಳಿದ್ದಾನೆ-- ಕುಂತಳದೇಶಸೀಮಂತಮಣಿಯಾದ ವಿಜಯನಗರದೊಳ್ ವಿಜಯನೃಪನ ಮಗಂ ದೇವನೃಪತಿಯಾಳ್ದಂ. ಆತಂಗೆ ಪ್ರೌಢದೇವರಾಯನೆಂದುಂ ಪೆಸ‌ರ್, ಗಜ ವೇಂಟೆಕಾರಬಿರುದಪ್ರಸಿದ್ಧನಾದ ಆ ಪ್ರೌಢಪ್ರತಾಸದೇವರಾಯನ ಸಭಾಸರೋಜವಾ ಸರೇಂದ್ರನುಂ, ಅತ್ರಿಮುನಿಪವಿತ್ರಗೋತ್ರಸುಧಾರ್ಣ ವಪೂರ್ಣ ಚಂದ್ರನುಂ, ಅರಸಾ ಮಾತ್ಯ ತನೂಜನುಂ, ಸಕಲಕಲಾಕುಶಲನೂತನಭೋಜರಾಜನುಂ, ರಾಯಭಂಡಾರಿ ನಾರಾಯಣಬಿರುದಾಂಕನುಂ ಎನಿಪ ಗುರುರಾಯಮಹಾಪ್ರಧಾನಂ ಎನ್ನ೦ ನೋಡಿ ಚಂದ್ರಶೇಖರಕವೀಶ್ವರ ನೀಂ ನೆಗರ್ದು ಅಷ್ಟ ಭಾಷೆಗಳ್ಗೆ ಆಗರಮಾದೆ, ಕನ್ನಡದ ಬಿನ್ನ ಣಮಂ ಪಂಪೆಯಾಳ್ದನ ಓಲಗಮಂ ರಚಿಸಿ ತೋರುವುದು ಎನಲು ಈ ಗ್ರಂಧಮಂ ಪೇಳ್ದುಂ. ಈ ಕೃತಿರತ್ನ ಮಂ ಗುರುರಾಯನುಹಾಪ್ರಧಾನಂ ಸಂಪಾರಮಣನ ಚರ ಣಾಂಬುಜಕಪಿ೯ ಸಿದಂ 11