ಈ ಪುಟವನ್ನು ಪರಿಶೀಲಿಸಲಾಗಿದೆ

94 ಕರ್ಣಾಟಕ ಕವಿಚರಿತೆ. [15 ನೆಯ

ಎಂಬ ಪದ್ಯದಲ್ಲಿ ಕವಿ ಹೇಳುತ್ತಾನೆ. ಈ ಮಲ್ಲಿಕಾರ್ಜುನನು 1446 ರಿಂದ 1467ರ ವರೆಗೆ ಆಳಿದ ವಿಜಯನಗರದ ರಾಜನಾಗಿರಬೇಕೆಂದು ತೋರುತ್ತದೆ. ಆದುದರಿಂದ ಕವಿಯ ಕಾಲವು ಸುಮಾರು 1450 ಆಗಬಹುದು. ಪೂರ್ವಕವಿಗಳಲ್ಲಿ ಭೋಜನನ್ನು ಸ್ಮರಿಸಿದ್ದಾನೆ.

   ಇವನ ಗ್ರಂಥ
                          ಜನವಶ್ಯ 
   ಇದು ಭೋಗಶರಕುಸುಮಷಟ್ಪದಿಗಳಲ್ಲಿ ಬರೆದಿದೆ, ಸಂಧಿ 12. ಇದಕ್ಕೆ ಮದನತಿಲಕ, ಮಲ್ಲಿಕಾರ್ಜುನವಿಜಯ ಎಂಬ ಹೆಸರುಗಳೂ ಉಂಟು. ಕಾಮಶಾಸ್ತ್ರವನ್ನು ಪ್ರತಿಪಾದಿಸುವ ಗ್ರಂಥ. ಇದನ್ನು ಮೊದಲು “ಮಲ್ಲಿಕಾರ್ಜುನನೃಪಾಲ ಕಾಮಶಾಸ್ತ್ರದ ನೆಲೆಯನರುಹು” ಎಂದು ಹೆಂಡತಿ ಕೇಳಲು ದೊರೆ ನಿರೂಪಿಸಿದಂತೆ ಕವಿ ಹೇಳುತ್ತಾನೆ. ಈ ಗ್ರಂಥದಲ್ಲಿ ವಾತ್ಸ್ಯಾಯನ ಮುಂತಾದವರ ಮತವು ಹೇಳಿದೆ. ಇದರ ಉತ್ಕೃಷ್ಟತೆಯನ್ನು ಕವಿ ಹೀಗೆ ಹೇಳಿದ್ದಾನೆ___
   ಅಡಿಗಡಿಗೆ ಕಿವಿಗೊಡುತೆ | ನುಡಿನುಡಿಗೆ ತಲೆದೂಗು | 
   ತೆಡೆಯೆಡೆಗೆ ಹೋ ಲೇಸು ಲೇಸನುತ್ತೆ | 
   ಒಡನೊಡನೆ ರೋಮಾಂಚ | ಮಡರೆ ಮೈಯೊಳ್ ಕೇಳ್ವ |
   ರೊಡಲೊಳೀಕೃತಿರತ್ನಮೆಸೆವುದಬಲೆ ||
   ಪದಿರಿನೋವರಿಯೊಲ್ಮೆ | ಯುದಯಸ್ಥಲಂ ಸೌಖ್ಯ |
   ದುದಧಿಯರಿವಿನ ಗೊತ್ತು ಕಳೆಯಾರವೆ | 
   ಮುದದ ನೆಲೆವೀಡು ಭಾ| ವದ ಸುಗ್ಗಿಯಪ್ಪುದೆಲೆ |
   ಸುದತಿಯಾಂ ಪೇಳ್ದ ಜನವಶ್ಯಮಿಳೆಗೆ || 
   ಬಿನ್ನಣದ ನೆಲೆವೀಡು|ಕನ್ನಡದ ಪುಟ್ಟುಗಣಿ|ಚೆನ್ನ ಚೆನ್ನೆಯರಿಚ್ಚೆ ಪೆರ್ಚುವಿಕ್ಕೆ|

ಇದರಲ್ಲಿ ಪ್ರತಿಪಾದಿತವಾದ ಅಂಶಗಳನ್ನು ಈ ಪದ್ಯದಲ್ಲಿ ಸೂಚಿಸಿದ್ದಾನೆ-

   ಪುರುಷರಿಂಗಿತಮನಂ|ಬರುಹಮುಖಿಯರ ತೆಅನ|ನಿಠದವರ ಸಂಭೋಗಸರ್ವಸ್ವವ | ಪರಿಪರಿಯ ಜಾತಿಸಂ | ಕರಭೇದಮೆಂಬಿವಂ.
   ಗ್ರಂಥಾವತಾರದಲ್ಲಿ ಶಿವಸ್ತುತಿಯಿದೆ. ಬಳಿಕ ಕವಿ ವಿಷ್ಣು, ದುರ್ಗಿ, ವೀರಭದ್ರ, ಗಣೇಶ, ಸರಸ್ವತಿ, ಸ್ವಗುರು ಕ್ರಿಯಾಶಕ್ತಿ ಇವರುಗಳನ್ನು ಸ್ತುತಿಸಿದ್ದಾನೆ.