98 ಕರ್ಣಾಟಕ ಕವಿಚರಿತೆ. [15 ನೆಯ ಒಂದು ಶಿಲಾಶಾಸನವಿದೆ. ಇದರಲ್ಲಿ ಈತನ ಮಹಿಮೆಯನ್ನು ವಿಶೇಷವಾಗಿ ಕೊಂಡಾಡಿ ಈತನ ಶಿಷ್ಯರಲ್ಲಿ ಕೆಲವರ ಹೆಸರನ್ನು ಹೇಳಿ ಈತನಿಗೋಸ್ಕರ ಕೆಲರು ಭಕ್ತರು ಎಡೆಯೂರಲ್ಲಿ ಒಂದು ಕಲ್ಲುಮಠವನ್ನು ಕಟ್ಟಿಸಿದಂತೆ ಹೇಳಿದೆ. ಇದರಿಂದ ಸ್ವಲ್ಪ ಭಾಗವನ್ನು ತೆಗೆದು ಕೆಳಗೆ ಬರೆಯು ತೇವೆ - ಇಂತಪ್ಪ ಅನಾದಿಜಂಗಮವೇ ಜಗದ್ಧಿತಾರ್ಧವಾಗಿ ಇರಿಸಿದ ಕ್ರಮವೆಂತೆಂದಡೆಜ್ಞಾನಕ್ರಿಯಾಸ್ವರೂಪನುಂ, ಸರ್ವಾ೦ಗಲಿಂಗಿ ಪಟ್ಟ ಲಜ್ಞಾನಿ ಸರ್ವಾಚಾರಸಂಪನ್ನ ಪಾದೋದಕಪ್ರಸಾದಪ್ರತಿಷ್ಟಾಚಾರನುಂ, ಅಷ್ಟಾವರಣಾಲಂಕರಣ ದೈ ತಾ ತತಿ ಮಿರಮಾರ್ತಂಡನುಂ, ಇಂತಪ್ಪ ದಿವ್ಯಶಿವಯೋಗಿ ಸಿದ್ಧಲಿಂಗೇಶ್ವರಂಗೆ ಸಮ್ಯಗ್ಜ್ಞಾ ನೋದಯವಾಗಿ ಸಂಸಾರಹೇಯಮಂ ಮಾಡೆ ಶರಣುಹೊಕ್ಕ ಶಿಷ್ಯಜನಗಳ ನಾಮಪರಿಕ್ರ ಮಂಗಳೆಂತೆಂದಡೆ-ಸಪ್ಪೆ ದೇವರು, ಉಪ್ಪಿನಹಳ್ಳಿಯ ಸ್ವಾಮಿ ಸಿದ್ದ ದೇವರು, ನಂಜೇದೇವ ರು, ಬೋಳಬಸವರಾಜದೇವರು, ಗುಮ್ಮಳಾಪುರದ ಸಿದ್ದಲಿಂಗದೇವರು, ಪಟಣದೇವರು, ರೇವಣಸಿದ್ದ ದೇವರು, ಸೀಲವಂತದೇವರು, ಚಿಟ್ಟಿಗದೇವರು ಇಂತೆ ಇವರು ಮುಖ್ಯವಾದ ಭಕ್ತ ಮಾಹೇಶ್ವರಗ್ಗೆ ೯ ಷಟೈಲಜ್ಞಾನಲಿಂಗಾಂಗಸಂಬಂಧಸಮರಸೈಕಾರ್ಧಮಂ ಬೋ ಧಿಸಿ ಮುಕ್ತರಂ ಮಾಡಿ ಪಟ್ಟ ಲೈಕಾರ್ಧವಾಗಿ ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿ ಯಾಗಿ ಎಡೆಯ ರಲ್ಲಿ ತಮಗೆ ಕಟ್ಟಿಸಿದ ಮರದಲ್ಲಿ ಶಿವಯೋಗಸಮಾಧಿಸನ್ನದ್ದರಾ ದಲು, ತೋಂಟದಸ್ವಾಮಿಯ ಪಾದಪದ್ಮಾರಾಧಕರಾದ ದಾನಿವಾಸನಿವಾಸಿಗಳಾದ ಚೆನ್ನರಾಯಒಡೆಯರು ಚೆನ್ನ ರಾಯಒಡೆಯರ ಮಕ್ಕಳು ಲಿಂಗಪ್ಪ ಒಡೆಯರು ಲಿಂಗಪ್ಪ ಒಡೆಯರ ಮಕ್ಕಳು ಪಾದೋದಕಪ್ರಸಾದಸಂಪನ್ನರಾದ ಚೆನ್ನವೀರಪ್ಪ ಒಡೆಯರು ಚೆನ್ನವೀರಪ್ಪ ಒಡೆಯರ ಸತಿ ಪರ್ವತಮ್ಮ ದಂಪತಿಗಳು ತಮ್ಮ ಭಕ್ತಿಯಿಂದ ತೋಂಟದ ಸ್ವಾಮಿಗೆ ಕಲ್ಲುಮರವ ಕಟ್ಟಬೇಕೆಂದು ಚಿಟ್ಟೆಗದೇವರಿಗೆ ಪದಾರ್ಧಮಂ ಕೊಟ್ಟು ನಮ ಸ್ವಾರಮಂ ಮಾಡಲಾಗಿ ಭಕ್ತಿಪದಾರ್ಧಮ ಕೈಕೊಂಡು ಎಡೆಯೂರಿಗೆ ಬಿಜಯಂ ಗೆಯು ತೋಂಟದಸ್ವಾಮಿಗೆ ಕಲ್ಲುಮರವನು ಎಂಟು ಜಡೆಯ ಬಗೆಯ ಹಿರಿಯರು ಚಿಟ್ಟೆ ಗದೇವರು ಕಟ್ಟಿಸಿದರು. ಈತನು ವಿಜಯನಗರದ ರಾಜನಾದ ವಿರೂಪಾಕ್ಷನ 1467-1478) ಕಾಲದಲ್ಲಿದ್ದಂತೆ ವಿರೂಪಾಕ್ಷಪಂಡಿತನ (1584) ಚೆನ್ನಬಸವಪುರಾಣದಿಂದ? [, Kunigal 49 2, ಸಂಧಿ 63, ಸದ್ಯಗಳ 39-40,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.