108 ಕರ್ಣಾಟಕ ಕವಿಚರಿತೆ. [16 ನೆಯ ರನು ಹುಲಗೊಂಡದಲ್ಲಿಕ್ಕದೆ ಬಿಡುವನೆ ನಮ್ಮ ದೇವರಾಯ ಸೊಡ್ಡಳ, (2) ಗಂಗಾನದಿಯಲ್ಲಿ ಮಿಂದು ಗಂಜಳದಲ್ಲಿ ಹೊರಳುವರೆ ? ಚಂದನವಿದ್ದಂತೆ ದುರ್ಗಂಧವ ಮೈಯಲ್ಲಿ ಪೂಸುವರೆ ? ಸುರಭಿ ಮನೆಯಲ್ಲಿ ಕಳೆಯುತ್ತಿರೆ ಹರಿವರೆ ಸೊಣಗನ ಹಾಲಿಂಗೆ? ಬಯಸಿದಮೃತವಿದ್ದಂತೆ ಅಂಬಿಲವನೆದುಂಬ ಭ್ರಮಿತಮಾನವ ನೀನು ಕೇಳಾ ! ಪರಮಪದವಿಯನೀವ ಚೆನ್ನ ಸೊಡ್ನಳನಿದ್ದಂತೆ ಸಾವ ದೈವವ ನೋಂ ತಡೆ ಕಾವುದೇ ನಿನ್ನ ? 6 ಸಿದ್ದ ರಾಮ, 1 ಈತನ ವಚನಗಳಲ್ಲಿ ಕಪಿಲಸಿದ್ದ ಮಲ್ಲಿಕಾರ್ಜುನದೇವರ ಅಂಕಿತವಿದೆ. ವಚನಗಳು, (1) ಸಂಸಾರವೆಂಬ ಸರ್ಪನ ಅಣಲೊಳಗಿಹೆನಯ್ಯಾ, ಆವಾಗ ನುಂಗಿತೆಂ ದಯೆ , ಆವಾಗ ಉಗುಟಿತೆಂದಿಯೆನಯ್ಯಾ, ಅದ ಬಾಯಿಂದೆನ್ನ ತೆಗೆದು ಕಾಯಯ್ಯಾ ಕಪಿಲಸಿದ್ದ ಮಲ್ಲಿಕಾರ್ಜುನ (2) ಧರೆಯ ದೆಸೆವಳಯವೆಲ್ಲಾ ತನಗಾದಡಂ ನಿಲ್ಲಳು ; ಎನಿತು ತ್ರಿಭುವನ ರಾಜ್ಯ ಪದಂಗಳು ತನಗಾದಡಂ ನಿಲ್ಲಳು , ಅನಿತಳಂ ತೃಪ್ತಿವಡೆಯಳು. ಈಯಾಶೆ ಯೆಂಬವಳಿಂದಲೆ ನಿಮ್ಮೆಡೆಗಾಣದಿರ್ಪೆ ಇಯಾಶೆಯೆಂಬ ಪಾತಕಿಯನೆಂದಿಂಗೆ ನೀಗಿ ನಿಮ್ಮನೊಡಗೂಡಿ ಬೇಡಾಗದೆಂದಿರ್ಪೆನೋ ಕಪಿಲಸಿದ್ದ ಮಲ್ಲಿಕಾರ್ಜುನ, 7 ಮಹಾದೇವಿಯಕ್ಕೆ ? ಈಕೆ ಚೆನ್ನಮಲ್ಲಿಕಾರ್ಜುನದೇವರ ಅಂಕಿತದಲ್ಲಿ ವಚನಗಳನ್ನು ಹೇ ಳಿದ್ದಾಳೆ. ವಚನಗಳು, (1) ಅಮೇಧ್ಯದ ಹಡಿಕೆ , ಮೂತ್ರದ ಕುಡಿಕೆ; ಎಲುವಿನ ತಡಿಕೆ ; ಕೀವಿನ ಹಡಿಕೆ ; ಸುಡಲಿ ದೇಹವ, ಒಡಲುವಿಡಿದು ಕೆಡದಿರು, ಚೆನ್ನಮಲ್ಲಿಕಾರ್ಜುನನನ ಮರುಳೆ. (2) ಒಮ್ಮೆ ಕಾಮನ ಕಾಲ ಹಿಡಿವೆ ; ಮತ್ತೊಮ್ಮೆ ಚಂದ್ರಮಂಗೆ ಸೆರ ಗೊಡ್ಡಿ ಬೇಡುವೆ, ಸುಡಲಿ ವಿರಹವ, ನಾನಾರಿಗೆ ಧೃತಿಗೆಡುವೆ ? ಚೆನ್ನ ಮಲ್ಲಿಕಾರ್ಜು ನದೇವನೆನ್ನ ನೊಲ್ಲದಕಾರಣ ಎಲ್ಲರಿಗೆ ಹಂಗುಗಿತ್ತಿಯಾದೆನವ್ವಾ. { Vol, I, 150, 2 Ibid , 154,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.