110 ಕರ್ಣಾಟಕ ಕವಿಚರಿತೆ. [16 ನೆಯ ಪ್ರಭೆಯ ನುಂಗಿತ್ತೊ ಎಂಬುದನಕದಾಗಲೇ ಪ್ರಸಾದಿಸ್ಥಲ, ವಕ್ಕಿ ಕಾಷ್ಠ ವ ನುಂ ಗಿತ್ತೊ ಕಾಷ್ಠವು ವ ಯ ನುಂಗಿತ್ತೊ ಎಂಬುದನಅದಾಗಲೇ ಪ್ರಾಣಲಿಂಗಿಸ್ಥಲ. ಸಾರ ಬಲಿದು ಶರಧಿಯ ಕೂಡಿದಾಗಲೇ ಶರಣಸ್ಥಲ, ವಾರಿ ಬಲಿದು ವಾರಿಧಿಯ ಕೂಡಿದಾಗಲೇ ಐಕ್ಯಸ್ಥಲ, ಇಂತಲ್ಲಡೆ ಷಟ್ ಲಬ್ರಹ್ಮಗಳೆಂತಾದೀರಣ್ಣಾ ? ಕವ ಯದ ಪಶುವಿಂಗೆ ತೃಣವ ಗಟಸುವಂತೆ, ಒಲ್ಲದ ಸತಿಗೆ ರತಿಕೂಟವ ಬೆಳಸುವಂತೆ, ಗೆಲ್ಲ ಸೋಲಕ್ಕೆ ಹೋರುವನಲ್ಲಿ ಬಲ್ಲತನವನಳಿಸುವಂತೆ, ಕೊಲ್ಲಿಯಾವಿನಲ್ಲಿ ಸಲ್ಲೀಲೆಯನಳಿಸು ವಂತೆ, ಬಲಿದ ವಂಶದಲ್ಲಿ ಕಲೆಯನಸುವಂತೆ, ಬಯಿಮಾತಿಂಗೆಡೆಯಾದು ದುಂಟೆ ? ಬಯಲುಗೊಂಡ ಘನಕ್ಕೆ ಅವಧಿಗೊಡಲಿಲ್ಲ, ಉರಿಗೊಂಡ ಕರ್ಪೂರಕ್ಕೆ ರೂಪಿಗೆಡೆಯಿಲ್ಲ, ಬಯಲ ಬಡಿದವಂಗೆ ಕೈಗೆ ಮೆತ್ತಗಿಲ್ಲ. ಮನವು ಮಹದಲ್ಲಿ ನಿಂದವಂಗೆ ಆಯಿನೆಣಿಸಲಿಲ್ಲ, ಮತಿ ಮುಟ್ಟಲಿಲ್ಲ, ಮಾ ತೋಚಿದ ಘನ ವದು ತನ್ನಲ್ಲಿಯೇ ನಿರ್ಲೆಸ ನಿಷ್ಕಳಂಕಮಲ್ಲಿಕಾರ್ಜುನ. 10 ಅಂಬಿಗರ ಚೌಡಯ್ಯ 1 ಈತನ ವಚನಗಳಲ್ಲಿ ಇವನ ಹೆಸರು ವ್ಯಕ್ತವಾಗಿ ಹೇಳಿದೆ. ವಚನ ಶುಕ್ಲ ಶೋಣಿತಪಿಂಡೈಕ್ಯನ ಚಿತ್ರವಾಯು ಆಯುದಳದ ಪದ್ಮದಲ್ಲಿಹುದು, ಮೊ ಲೆ ಮೂಡಿ ಬಂದಡೆ ಆ ಪಿಂಡವನು ಹೆಣ್ಣೆಂಬರು, ಗಡ್ಡ,ಾಸೆಗಳು ಬಂದಡೆ ಆ ಪಿಂಡವನು ಗಂಡೆಂಬರು, ಆಯಿಬ್ಬರನಡುವೆ ಸುಟವ ಆತ್ಮನು ಹೆಣ್ಣ ಅಲ್ಲ ಗಂಡೂ ಅಲ್ಲ ನೋಡಾ. ಇವರಿಂತುವ ತಿಳಿದು ನೋಡಿಹೆನೆಂದಡೆ ಶ್ರುತಿಗಗೋಚರವೆಂದಾತನಂಬಿಗರಚೌಡಯ್ಯ. 11 ಅಜಗಣ್ಣ. ಈತನ ವಚನಗಳಲ್ಲಿಯೂ ಇವನ ಹೆಸರು ದೊರೆಯುತ್ತದೆ. ವಚನ ಉಟ್ಟುದ ತೊಳೆದವಂಗೆ ಊರೇನು ಕಾಡೇನು ? ನಷ್ಟ ಸಂತಾನಕ್ಕೆ ಕುಲ ವೇನು ಚಲವೇನು ? ಹುಟ್ಟು ಗೆಟ್ಟಾತಂಗೆ ಪುಣ್ಯವೇನು ಪಾಪವೇನು ? ಅದು ಕೆಟ್ಟುದು ಕೆಟ್ಟುದು; ತನ್ನ ತಾನರಿಯದೆ ಬಟ್ಟಬಯಲಲ್ಲಿ ಬಿದ್ದ ಅಜಗಣ್ಣ ತಂದೆ. 12 ಮಲ್ಲಿಕಾರ್ಜುನ ಪಂಡಿತ - ಅಮರಗುಂಡದ ಮಲ್ಲಿಕಾರ್ಜುನ ಎಂಬ ಅಂಕಿತವುಳ್ಳ ಕೆಲವು ವಚನ ಗಳಿವೆ, ಆವು ಅಮರಗುಂಡದ ಮಲ್ಲಿಕಾರ್ಜುನಪಂಡಿತನಿಂದ ರಚಿತವಾ ದುವೋ ಏನೋ ತಿಳಿಯದು. X, Vol, I, I57 2. Ibsd, Tür.
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.