114 ಕರ್ಣಾಟಕ ಕವಿಚರಿತೆ. [15 ನೆಯ 20 ಉರಿಲಿಂಗಪೆದ್ದಿ! ಈತನ ವಚನಗಳಲ್ಲಿ ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರ ಎಂಬ ಅಂಕಿತವಿದೆ. ವಚನ ಜ್ಯೋತಿಯ ಸಂಗದಿಂದ ಕರ್ಪೂರವು ಜ್ಯೋತಿಯಪ್ಪಂತೆ ಅಪ್ಪುವಿನ ಸಂಗದಿದೆ ಲವಣವು ಅಪ್ಪುವಪ್ಪಅಂತೆ, ಶ್ರೀಗುರುವಿನ ಸಂಗದಿಂದ ಶಿಷ್ಯನು ಶ್ರೀಗುರುವುದು ತಪ್ಪ ದು, “ ಯಥಾ ಬೀಜಂ ತಧಾಂಕುರಂ ” ಎಂಬುದು ತಪ್ಪದು ದಿಟ ದಿಟ ನೋಡಾ ಕಲ್ಪವೃಕ್ಷದ ಬೀಜದಿಂದಾದ ಸಸಿ ಕಲ್ಪವೃಕ್ಷವಪ್ಪುದು ತಪ್ಪದು ನೋಡಾ, ಕಾಮಧೇನುವಿನ ಶಿಶು ಕಾಮಧೇನುವಪ್ಪುದು ತಪ್ಪದು ದಿಟ ದಿಟ ನೋಡಾ, ಸದ್ಗುರುವಿಂದಾದ ಶಿಷ್ಯನು ಸದ್ಗುರು ವಪ್ಪುದು ತಪ್ಪದು ದಿಟ ದಿಟ ನೋಡಾ, ಶಿವ ಬಲ್ಲನು ಉರಿಲಿಂಗಪೆದ್ದಿ ಪ್ರಿಯವಿಶ್ವೇಶ್ವರ 21 ರಾಮನಾಧ | ರಾಮನಾಥ ಎಂಬ ಅಂಕಿತವು ಕೆಲವು ವಚನಗಳಲ್ಲಿದೆ. ಒಬ್ಬ ರಾಮನಾಥಾಚಾರ್ಯನು ಏಕೋರಾಮಿತಂದೆಯ ಶಿಷ್ಯನಾಗಿದಂತೆ ತಿಳಿಯು ತದೆ. ಸದಾಶಿವಯೋಗಿ (1554) ಒಬ್ಬ ರಾಮನಾಥಾಚಾರ್ಯನ ಚರಿತವನ್ನು ರಾಮನಾಧವಿಲಾಸ ಎಂಬ ಹೆಸರಿಂದ ಚಂಪೂರೂಪವಾಗಿ ಬರೆದಿದ್ದಾನೆ. ಈ ರಾಮನಾಧಾಚಾರನು ಹೊಯ್ಸಳ ದೇಶದ ಮುದ್ರಾಪುರದಲ್ಲಿ ರಾಮೇಶ್ವರ ಲಿಂಗಮೂರ್ತಿಯಿಂದ ವೀರಶೈವದೀಕ್ಷೆಯನ್ನು ಪಡೆದು ಅದನ್ನು ಹುಸಿಯೆಂದು ತಿಳಿದು ಶಂಕೆಮಾಡಿದ ಶೈವರಿಗೆ ಆ ರಾಮೇಶ್ವರಲಿಂಗದಿಂದಲೇ ಸಾಕ್ಷಿಯನ್ನು ನುಡಿಯಿಸಿ ಮೆರೆದು ವೀರಶೈವಮತವೇ ಉತ್ತಮಮತವೆಂಬುದನ್ನು ಪ್ರಚು ರಮಾಡಿದನೆಂದು ಈ ಗ್ರಂಥದಿಂದ ತಿಳಿಯುತ್ತದೆ. ಏಕೋರಾಮಿತಂದೆಯ ಶಿಷ್ಯನೂ ರಾಮನಾಧವಿಲಾಸದ ಕಥಾನಾಯಕನೂ ಒಬ್ಬನೇ ಎಂದು ತೋರುತ್ತದೆ, ಮೇಲೆ ಹೇಳಿದ ವಚನಗಳು ಏತತ್ಕೃತವಾಗಿರಬಹುದು. ವಚನಗಳು (1) ಕಡೆಗೀಲಿಲ್ಲದ ಬಂಡಿ ಜೊಡಗೆಡೆವುದಂ ಮಾಂಬುದೇ ? ಕಡೆಗೀಲು ಬಂಡಿ ಗಾಧಾರ, ಕಡುದರ್ಪವೇದ ಒಡಲೆಂಬ ಬಂಡಿಗೆ ಮೃಡಶರಣರ ನುಡಿಗಡಣವೇ ಕಡೆಗಿಲು ಕಾಣಾ ರಾಮನಾಧ, I, Vol. 1, 215, 2 lbrd , 163
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೯೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.