ಈ ಪುಟವನ್ನು ಪರಿಶೀಲಿಸಲಾಗಿದೆ

125 ಶತಮಾನ ಸ್ವತಂತ್ರ ಸಿದ್ಧಲಿಂಗೇಶ್ವರ. ಸ್ವತಂತ್ರಸಿದ್ಧಲಿಂಗೇಶ್ವರ, ಸು. 1480 ಈತನು ಸ್ವತಂತ್ರ ಸಿದ್ದಲಿಂಗೇಶ್ವರವಚನ, ಮುಕ್ಕಂಗನೆಯಕಂಠ ಮಾಲೆ ಇವುಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ, ವಿರೂಪಾಕ್ಷ ಪಂಡಿತನ (1584) ಚೆನ್ನಬಸವಪುರಾಣದಿಂದ ತೋಂಟದಸಿದ್ದಲಿಂಗ ಯತಿಗೆ (ಸು 1470) ಸಿದ್ದಲಿಂಗೇಶ್ವರ, ದೊಡ್ಡಲಿಂಗೇಶ್ವರ ಎಂಬ ಇಬ್ಬರು ಶಿಷ್ಯರು ಇದ್ದಂತೆ ತಿಳಿಯುತ್ತದೆ. ಕವಿ ಇವರಲ್ಲಿ ಒಬ್ಬನಾಗಿರಬಹು ದೆಂದು ತೋರುತ್ತದೆ, ಹಾಗಿದ್ದ ಪಕ್ಷದಲ್ಲಿ ಇವನ ಕಾಲವು ಸುಮಾರು 1480 ಆಗಬಹುದು. ಜಂಗಮರಗಳ ಎಂಬ ಗ್ರಂಥದ ಕೊನೆಯ ಕಂದದ “ಇಂತೀಜಂಗ ಮದಿರವಂ ಸಂತಸದಿಂ ಸಿದ್ದಲಿಂಗೇಶ್ವರಂ” ಎಂಬ ಭಾಗದಿಂದ ಆ ಗ್ರಂಥವು ಸಿದ್ಧಲಿಂಗೇಶ್ವರಕೃತವೆಂದು ತಿಳಿಯುತ್ತದೆ. ಏತಕ್ಕವಿಕೃತ ವಾಗಿದ್ದರೂ ಇರಬಹುದು. ಇವನ ಗ್ರಂಥಗಳಲ್ಲಿ 1 ಸ್ವತಂತ್ರ ಸಿದ್ದಲಿಂಗೇಶ್ವರ ವಚನ ಇದು ವೀರಶೈವಸಿದ್ಧಾಂತವನ್ನು ಬೋಧಿಸುತ್ತದೆ; ವಚನ 430. ಪ್ರ ತಿವಚನದಲ್ಲಿಯೂ 'ನಿಜಗುರುಸ್ವತಂತ್ರ ಸಿದ್ದಲಿಂಗೇಶ್ವರ” ಎಂದು ಬರುತ್ತದೆ. ಈ ಗ್ರಂಥದಿಂದ ಕೆಲವು ವಚನಗಳನ್ನು ಉದ್ಧರಿಸಿ ಬರೆಯುತ್ತೇವೆ (1) ಕಣ್ಣು ಕಾಲು ಎರಡುಳ್ಳವನು ದೂರವೆನ್ನುವನಲ್ಲದೆ ಕಣ್ಣು ಕಾಲು ಎರಡ ನೊಳಗೊಂದಿಲ್ಲದವನು ದೂರವೆಯ್ಸಲರಿಯನೆಂಬಂತೆ ಜ್ಞಾನರಹಿತವಾಗಿ ಕ್ರಿಯೆ ಯನೆಷ್ಟ ಮಾಡಿದಡೇನು ? ಅದು ಕಣ್ಣಿಲ್ಲದವನ ನಡೆಯಂತೆ, ಕ್ರಿಯೆರಹಿತವಾಗಿ ಜ್ಞಾ ನಿಯಾದಡೇನು ? ಅದು ಕಾಲಿಲ್ಲದವನ ಇರವಿನಂತೆ; ನಿಜಗುರುಸ್ವಸಂತ್ರಸಿದ್ದಲಿಂಗೇಶ್ವ ರನ ನಿಜವ ಬೆರಸುವೊಡೆ ಜ್ಞಾನವೂ ಕ್ರಿಯೆಯ ಎರಡೂ ಬೇಕು. (2) ಹಾವಡಿಗ ಹಾವನಾಡಿಸುವಲ್ಲಿ ತನ್ನ ಕಾದುಕೊಂಡು ಹಾವನಾಡಿಸುವ ನವನಂತೆ ಆವ ಮಾತನಾಡಿದಡೂ ತನ್ನ ಕಾದು ಆಡಬೇಕು. ಅದೆಂತೆಂದಡೆ ತನ್ನ ವಚನವೆ ತನಗೆ ಹಗೆಯಹುದಾಗಿ ಅನ್ನಿಗರಿಂದ ಬಂದಿತ್ತೆನಬೇಡ; ಆಲಿವುದುಉವುದು ತನ್ನ ವಚನದಲ್ಲಿಯೆ ಅದೆ. ನಿಜಗುರುಸ್ವತಂತ್ರ ಸಿದ್ದಲಿಂಗೇಶ್ವರಾ ಹಗೆಯ ಕೆಳೆಯೂ ತನ್ನ ವಚನವೇ ಬೇಅಲ್ಲ, 1, ಸಂಧಿ 63 ಸದ್ಯ 47,