132 ಕರ್ಣಾಟಕ ಕವಿಚರಿತೆ, - [16 ನೆಯ ಗರ್ಭಿಣಿ ಬಿಳುಪೇwತು ಮೊಗ ತೆಳುಪೇತು ಕೆನ್ನೆ / ಹೊಳಪೇಹೀ'ತು ಕುಡಿನೋಟ | ಕಳೆಯೇ ತು ಕೋಮಲಕಾಯ ಕುಂತಳ | ಬೆಳೆಯಿತು ನೀವಯೊಳು || ನೀತಿ ವರತತ್ವವೆಂಬ ಸಲಿಲದೊಳು ಹೃದಯದೊ | ಳಿರುವ ಕಲ್ಮಷವ ತೊಳೆಯದೆ | ಹರಿವ ನದಿಯ ಸ್ನಾನದಿಂ ಮೈಯ ಮಲಿನವ | ಪರಿಹರಿಸಲು ಫಲವೇನು | ಮಲ್ಲಿಕಾರ್ಜುನಕವಿ, ನ 1485 ಈತನು ಕ್ಷೇತನಸಾಂಗತ್ಯವನ್ನು ಬರೆದಿದ್ದಾನೆ. ಇವನು ವೀರಶೈ ವಕವಿ, “ಶ್ರೀಗುರುಭಕ್ತಾಗ್ರಣೇಶ್ವರನನ್ವಯಸಾಗರಚಂದ್ರಮನೆನಿಪ ಮ ಲ್ಲಾಧ್ಯನ ಕೃಪೆಯಿಂದ' ಈ ಗ್ರಂಥವನ್ನು ಬರೆದುದಾಗಿ ಹೇಳುವುದರಿಂ ದಲೂ, ಮಲ್ಲಿಕಾರರ ಕೃಪೆಯಿಂದ ಲೌಲ್ಯವೆನಿಸಿದನು ಭಕ್ತರ ಮಧ್ಯದಿ ಮಲ್ಲಿಕಾರ್ಜುಕವಿರಾಜ' ಎಂಬುದರಿಂದಲೂ ಈತನು ಗುಬ್ಬಿಯನ್ನಲ್ಲಣ್ಣನ (ಸು 1475) ಶಿಸ್ಯನೆಂದು ತೋರುತ್ತದೆ. ಇವನ ಕಾಲವು ಸುಮಾರು 1485 ಆಗಿರಬಹುದು. ಇವನ ಗ್ರಂಥ ಶ್ವೇತನನಾಂಗತ್ಯ ನಮಗೆ ದೊರೆತ ಈ ಗ್ರಂಥದ ಪ್ರತಿ ಅಸಮಗ್ರವಾದುದರಿಂದ ಸಂಧಿ, ಪದ್ಯ ಇವುಗಳ ಸಂಖ್ಯೆಯನ್ನು ಹೇಳಲಾರೆವು, ಈ ಗ್ರಂಥಕ್ಕೆ ಸಿದ್ಧ ಸಾಂ ಗತ್ಯ ಎಂಬ ಹೆಸರೂ ಇರುವಂತೆ ತೋರುತ್ತದೆ. ಇದರಲ್ಲಿ ರೈತನಿ ಗಾಗಿ ಪ್ರೇತಪತಿಯ ಸೊಕ್ಕನು ಮುಅ'ದ ಭೂತನಾಥನ ಲೀಲೆ' ಹೇಳಿದೆ. ಈ ಗ್ರಂಥವನ್ನು ನಂಜೇಶ್ವರನು - ಮಲ್ಲಿಕಾರ್ಜುನಕವಿವಲ್ಲಭ ಸಂಸ್ಕೃತ | ದಲ್ಲಿ ಸಮರ್ಧನು ನೀನು | ಇಲ್ಲಿ ಸಕಲಭಕ್ಕೆ ಜನರು ಕೇಳೊಂದದೆ | ಸೊಲ್ಲಿಸು ಕನ್ನಡಭಾಷೆಯಲಿ || ಎಂದು ಹೇಳಲು ಕವಿ ಬರೆದಂತೆ ಹೇಳುತ್ತಾನೆ. ಗ್ರಂಥಾವತಾರದಲ್ಲಿ ಶಿವ, ಬಸವ ಇವರ ಸ್ತುತಿ ಇದೆ. ಬಳಿಕ ಕವಿ ಗೂಳೂರಸಿಂಹಾಸನಾಗ್ರಣಿ ಗುರುಶಾಂತೇಶ್ವರದೇವನ ಅನುಗ್ರಹವನ್ನು ಬೇಡಿ ಗ್ರಂಥವನ್ನು ಆರಂಭಿಸಿದ್ದಾನೆ.
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.