ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 ಕರ್ಣಾಟಕ ಕವಿಚರಿತೆ. - [16 ನೆಯ ಈ ಶಾಸನಗಳು ಹುಟ್ಟಿವೆ. ಈ ರಾಜನಿಂದ ಪೂಜಿತನಾದ ಕವಿಯ ಕಾ ಅವು ಸುಮಾರು 1485 ಆಗಬಹುದು. “ವಿತತಕರ್ಣಾಟಲಕ್ಷಣಕಮಲಭವನೆನಿಪ ಚತುರವರ ನೀಲಕಂಠಾ ಚಾರ್” ಎಂದು ಕವಿ ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ೧ ಪೂರ್ವಕವಿಗಳಲ್ಲಿ ಕಂಸಮರ್ದ ಚಂದನದ ಸಂಕದೊಳ್ ಪರಮಳಂ | ಸೆಂಪುವಡೆದಂತೆ ರಸಭರಿತಪ್ರಬಂಧದೊಳ್ | ಸೊಂಪುದೋಚುವ ಶಬ್ದ ಸಂದರ್ಭವೆಪ್ಪುತಿರೆ ಪೊಸತಪ್ಪ ಯುಕ್ತಿಯಿಂದಂ || ಇಂಪಾಗಿ ಶಿವಗಣಪ್ರಕರಮಂ ಕೊಂಡಾಡಿ | ಸಂಸೆಯೊಳು ಪಂಪಾವಿರೂಪಾಕ್ಷನೊಳಗವಿದ | ಪಂಪೆಯ ಹರೀಶ್ವರಂ, ಪಾಲ್ಕುರಿಕೆಸೋಮೇಶ್ವರ ಇವರುಗಳನ್ನು ಸ್ತುತಿಸಿದ್ದಾನೆ. ಇವನ ಗ್ರಂಥ | ಆರಾಧ್ಯಚಾರಿತ್ರ ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ; ಪ್ರಕರಣ 5, ಸಂಧಿ 65, ಪದ್ಯ 3069. ಇದರಲ್ಲಿ ಮಲ್ಲಿಕಾರ್ಜುನಪಂಡಿತಾರಾಧ್ಯನ ಚರಿತೆ ಹೇಳಿದೆ' ಪಂಡಿತಾರಾಧ್ಯನಿಗೆ ಬಸವನಲ್ಲಿದ್ದ ವಿಶ್ವಾಸದ ವಿಷಯವಾಗಿಯೂ ಆತನ ಸಂ ತತಿಯ ವಿಷಯವಾಗಿಯೂ ಕವಿ ಹೀಗೆ ಬರೆದಿದ್ದಾನೆ ಪಂಡಿತೇಶ್ವರನು ಬಸವನ ಮಾಹಾತ್ಮವನ್ನು ಸ್ಮರಿಸುತ್ತ ಬಸವನ ಹಸ್ತದಿಂದ ಬಂದ ವಿಭೂತಿಯನ್ನು ಧರಿಸಿಕೊಂಡಕೂಡಲೆ ಅವನಿಗೆ ಕರ್ಣಾಟಭಾಷೆ ಬಂದಿತು. ಅದ ರಲ್ಲಿ ಇಷ್ಟಲಿಂಗಸ್ತೋತ್ರವನ್ನೂ ಬಸವಮಾಹಾತ್ಮ ಗೀತಗಳನ್ನೂ ಮಾಡಿ ಹಾಡುತ್ತ ಬಸವನನ್ನು ಎಂದಿಗೆ ನೋಡುವೆನು ಎಂದು ಉತ್ಸುಕನಾಗಿದ್ದನು, ಪಂಡಿತೇಶ್ವರನ ಮಗ ಕೇದಾರಾಧ್ಯನಿಗೆ ಜಗದಾರಾಧ್ಯ ಪಟ್ಟವಾಯಿತು. ಪಂಡಿತೇಶ್ವರನ ಕರಜಾತನಾದ ದೋ ನಮಾರನಿಗೆ ಭಕ್ತಿ ರಾಜ್ಯದ ಪಟ್ಟವಾಯಿತು. ಕೇದಾರದೇಶಿಕನ ಮಕ್ಕಳು (1) ಮನುಪಂಡಿತ (2) ಚನ್ನವಿಭು (3) ಮಹಾದೇವ (4) ಭೀಮನಪಂಡಿತ. ಈ ಸಂತ ತಿಯಲ್ಲಿ ಯವ್ವಟೂರ ಗುರು ಸೋಮನಾಥನು ಹುಟ್ಟಿದನು. ಇವನ ಮಕ್ಕಳು (1) ವಿಶ್ವನಾಥ (2) ಸೂರೇಶ್ವರ (3) ಸಿಂಗಣ್ಣ ಮಂಚಾರ, 1, Vol, I, 16t.