ಶತಮಾನೆ? ಚತುರ್ಮುಖ ಬೊಮ್ಮರಸ, 139 - ರಾಘವಾಂಕ ಮೊದಲಾದ ಕವಿಗಳನ್ನನುಸರಿಸಿ ಕಪಸರVಟಿಗ ಳನ್ನು ಪ್ರಾಸಕ್ಕೆ ಸೇರಿಸಿದಂತೆ ಈ ಪದ್ಯದಲ್ಲಿ ಹೇಳುತ್ತಾನೆ ಓರಂತೆ ಶದಸರಅಲಟಿಮೀವಂ ಪ್ರಾಸಕ್ಕೆ | ಸೇರಿಸಿದೆನೀಕಾವ್ಯದೊಳಗೆ ವರ್ಣಕಕವಿ || ಶ್ರೀರಾಘವಾಂಕ ಪಂಡಿತನಾದಿಯಾದ ಕಬ್ಬಿಗರು ನಿಜಕೃತಿಯೊಳೊರೆದಾ || ಕಾರಣಂ ನಾಗವರ್ಮ೦ ಎನಿರ್ಮಿಸಿದ ಅರ | ಡೈರೇವ ಲಂಟಾಃ ಪ್ರಯತ್ನಾಶ್ರಯಾತೆನಿಪ || ಚಾರುಕರ್ಣಾಟಕವ್ಯಾಕರಣಸೂತ್ರ ಮೊದಲಾದುವುಂಟದುನಿಮಿತ್ತಂ || ಇವನ ಗ್ರಂಥ ರೇವಣಸಿದ್ದೇಶ್ವರಪುರಾಣ ಇದು ವಾರ್ಧಕಪಟ್ಟದಿಯಲ್ಲಿ' ಬರೆದಿದೆ, ಸಂಧಿ 13, ಪದ್ಯ 565. ಇದರಲ್ಲಿ ರೇವಣಸಿದ್ದೇಶ್ವರನ ಚರಿತವು ಹೇಳಿದೆ. ಕಧಾಸಾರವನ್ನು ಕವಿ ಈ ಪದ್ಯದಲ್ಲಿ ಸೂಚಿಸಿದ್ದಾನೆ. ಶ್ರೀಶನನು ಕಾಂಚಿಯೊಳು ನುಡಿಸಿ ಚೋಳಂಗೆ ಕ | ನ್ಯಾಸಮಹದ ಬಂಧನವ ಬಿಡಿಸಿ ಬಿಟ್ಟಳಮ | ಹೀಶನಿಂ ಪೂಜೆಗೊಂಡಾದಿಶೈವಾಚಾರನಾಗಿ ಲಂಕಾಪುರದೊಳು .. ಈಶಕೋಟತ್ರಯದ ಹದಿವೆಗೆಯೊಲವಿಂ ವಿ | ಭೀಷಣನ ಪಾಲಿಸಿದ ವೀರಶೈವಪ್ರಧಮ | ದೇಶಿಕಂ ರೇವಣಸಿದ್ದೇಶನಮಗೀಗೆ ಭಾಸುರಸದಾನಂದವ || - ರೇವಣಸಿದ್ದ ಚರಿತವನ್ನು ಈಶಾನ್ಯಶಿವಗುರು ಸಂಸ್ಕೃತದಲ್ಲಿಯೂ ಹರೀಶ್ವರನು ರಗಳಯರೂಪವಾಗಿ ಕನ್ನಡದಲ್ಲಿಯೂ ಬರೆದಿದ್ದಾರೆ; ಈ ಉ ಭಯಮತವನ್ನರಿದು ತಾನು ಈ ಕಾವ್ಯವನ್ನು ಬರೆದಂತೆ ಕವಿ ಹೇಳುತ್ತಾನೆ. ಈ ಕಾವ್ಯದ ಉತ್ಮತೆಯನ್ನು ಈ ಪದ್ಯಗಳಲ್ಲಿ ಹೇಳಿದ್ದಾನೆ ಕನ್ನಡಂ ಸಕ್ಕದದೊಳೊಂದಿ ಪುಟವಿಟ್ಟ ಚ || ಬೊನ್ನೊಳೊಂದಿದ ತರಂಗಿಸುವ ಕಡುರಂಗಿಡಿದ | ರನ್ನ ದಂತಿರಲೆಸೆವ ಪದಬಂಧವಚ್ಚ ಸಿರಪಕ್ಷಗಪ್ಪುರವೆರಸಿದ || ಉನ್ನತಿಯ ಸವಿಗಂಪ ಸಾಲಿಡುವ ಜಾತಿಬಾ | ನನ್ನ ದಂತಿರೆ ಪೇಚ್ಚನೀಕಾವ್ಯಮಂ ಬೆಡಂ | ೧೦ ನಿಖಿಲವಿದ್ವಜ್ಜನಂ ಮೆಜ್ಜೆ ಶಿವಶರಣಕರ್ಣ ಮಂಡನವೆನಿಸಲು ||
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.