ಶತಮಾನ ಸಿಂಗಿರಾಜ 149 ಬಸವನ ಸಮಕಾಲದವನಾದ ಅಮಿಷೇಂದ್ರನ ವಿಷಯವನ್ನು ಹೇಳುವಾಗ ಕವಿ ಅನಿಮಿಷೇಂದ್ರನು ಪಟ್ಟ ದಕ ದೊರೆಯದ ತ್ರಿಲೋಕ್ಯ ಚೂಡೆ ಶನ ಮುತ್ತು ಮಹರ್ಲೆಖೆಯ ಮಗನೆಂದು ಹೇಳಿ ಪಟ್ಟದಕಲ್ಲಿಗೆ ಆಸರು ಬರಲು ಕಾರಣವನ್ನು ಹೀಗೆ ಹೇಳುತ್ತಾನೆ--ಮಲಪ್ರಹಾರಿಯ ತಟದಲ್ಲಿ ನೃತಕುಲಾ ತ್ವಯಃ), ಎಂದರೆ, ನಂದರು 9 ಪಟ್ಟವನ್ನೂ ಗುಪ್ತರು 10 ರಟ್ಟವನ್ನೂ ಮೊರೆಯರು 21 ಪಟ್ಟವನ್ನೂ ಕಾದಂಬರು 27 ಪಟ್ಟವನ್ನೂ ಚಾಳುಕ್ಯರು 28 ಪಟ್ಟವನ್ನೂ ಆ ಸ್ಥಳದಲ್ಲಿ ಪಡೆ ಗುದ ರಿಂದ ಅದಕ್ಕೆ ಪಟ್ಟದಕಲ್ಲು ಎಂಬ ನಾಮಧೇಯವಾಯಿತು, ಬಸವನ ಕಾ'ದಲ್ಲಿ ಬಿಜ್ಜಳನ ಆಸ್ಥಾನದಲ್ಲಿ ದಾಮೋದರನೇ ಮೊದಲಾದ ಕೇವರು ಕೊಂಡೆ ಯರು (ಟಾಡಿ ಕೋರರು) ಇದ್ದರೆಂದು ಕವಿ ಹೇಳುತ್ತಾತಿ. ಅವರು ಬಸವನಿಗೆ ವಿರೋಧಿಗಳಾಗಿ ದ್ವಿರಬಹುದು. ಇವನ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ: ಅರಮನೆ. ಭೋಗದಾಗರವೊ ಸೊಬಗಿನ ಸೀಮೆಯೋ ಸುಖದ | ಸಾಗರವೊ ಸಿರಿಯ ನೆಲೆವನೆಯೊ ಮಿಗ ಸೌಭಾಗ್ಯ | ದಾಗಿನೊಬ್ಬುಳಿಯೊ ಚದುರಿನ ಬೀಡೆ ಮನ್ನ ಧನ ಗರುಡಿಯೋ ಸುದತಿರತ್ನ ಪೂಗ ತೀವಿದ ಕರಂಡಗೆಯೊ ಎಾಗೇವಿಯನು | ರಾಗದಾಶ್ರಯವೊ ಭಾವಿಸಿ ಪೊಗಡತಿ ಚೋದ್ಯ ! ಮಾಗಿ ಪೆಂಪೇಯಿ ಸೊಂಪಂ ಬೀಯಿತಾರಾಜಸದನ ಕಣ್ಣ ಸೆದಿರ್ದುದು || ಆನೆ ಪಟ್ಟಮದಗಜವ ತರಿಸೆಂದೊಡಾ ಯಂತ್ರಗಳ | ಬಿಟ್ಟು ಚರಣದ ನಿಗಳಮಂ ಮದವನೇರಿಸಿಯೆ | ಕಟ್ಟಿ ವಜ್ರಾಂಗಿಸಕ್ಕರಿಕೆಗಳನಳವಡಿಸಿ ಕೊಟ್ಟು ಒಕೈಗಲಗನು || _1, ದಾಮೋದರ, ಪದ್ದಿ ಭಟ್ಟ, ಆಜಕುಂಡಲದ ನೇಮಿ, ರಾಘವ, ಕಿಖಾಸೂತ್ರದಸ್ಸರನ್ನ, ಅಣ್ಣಪ್ಪುಪಾಧ್ಯಾಯ, ಸಾಮವೇದಿ ಅಪ್ಪಣ್ಣ ಜನ್ನ ಪಂಡಿತ, ಸೋಮೋಪಾಧ್ಯಾಯ, ಚತು ನದಿ ಕೃಷ್ಣ, ರಸಕವಿರಾಮ, ಎಗ್ಗದ ಸಂಗಿಭಟ್ಟ, ಕೂಚಿಭಟ್ಟಿ, ಕಾಳಿಮರಸ, ಕೇಶವ, ದುಘ್ನನಾಚಿರಾಜ ಖಚಪ್ಪ ಬಾಚರಸ, ಹೆಮ್ಮಾಡಿ ಕರಿಯಮಾಧವ, ಚೋಳಮಾಂಕ, ಹಂ ಭಟ್ಟ, ಪೋಚರಸ, ಕೊಳವೆದ್ದಿ ಮೇಳ, ಮೂರ್ಖರಾಚರಸ, ಧೂರ್ತಬಿಟ್ಟರಸ, ಇವಳು ಇಲ್ಲಾ ಬ್ರಾಹ್ಮಣರೆಂದು ತೋರುತ್ತದೆ,
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.