ಈ ಪುಟವನ್ನು ಪರಿಶೀಲಿಸಲಾಗಿದೆ

162 ಕರ್ಣಾಟಕ ಕವಿಚರಿತೆ. [15 ನೆಯ ಅಧಿಕತರರೂಪಸಂಯುತೆ | ಮಧುರಾಂಕಿತವಚನರಚನೆ ನೀನುರುವುದಿದಂ | ಸುಧೆಗಡಲ ಪರುವ ಗುಣಯುತೆ | ವಿಧುಮುಖಿ ಲಲಿತಾಂಗಿ ವಾಸವಾಕ್ಷಿ ಪ್ರಾಸಂ ||

                    _______ ________ ________
                                    ಶ್ರೀವಾದರಾಯ ಸು, 1500
ಈತನು ಕೀರ್ತನೆಗಳನ್ನು ಬರೆದಿದ್ದಾನೆ. ಇವನು ಮಾದ್ವಕವಿ; ಮು 

ಳುಬಾಗಿಲಲ್ಲಿರುವ ಪದ್ಮನಾಭತೀರ್ಥಮಠಕ್ಕೆ ಸ್ವಾಮಿಯಾಗಿದ್ದನು. ಈತನ ಬೃಂದಾವನವೂ ಅಲ್ಲಿಯೇ ಇದೆ. ಈತನು ವಿಜಯನಗರದ ದೊರೆಯಾದ

ಸಾಳುವ ನರಸಿಂಗರಾಜನ (1487-1493) ವಿಶ್ವಾಸಕ್ಕೆ ಪಾತ್ರನಾಗಿದ್ದಂತೆ
ತೋರುತ್ತದೆ. ವಿಜಯನಗರದ ಕೃಷ್ಣದೇವರಾಯನ (1509-1529) 

ಕಾಲದಲ್ಲಿದ್ದ ವ್ಯಾಸರಾಯನೆಂಬ ಮಾದ್ವಗುರುವಿಗೆ ಈತನು ವಿದ್ಯಾಗುರು.

ಈತನ ಕೀರ್ತನೆಗಳಲ್ಲಿ ರಂಗವಿಠಲ ಎಂಬ ಅಂಕಿತವಿದೆ. ಒ೦ದನ್ನು 

ಉದಾಹರಿಸುತ್ತೇವೆ ___

                           ರಾಗ ಮುಖಾರಿ, ಚಾಪುತಾಳ,
ಪಲ್ಲವಿ|| ಕಾಳೆಬೆಳದಿಂಗಳು ಈಸಂಸಾರ ಕತ್ತಲೆ ಬೆಳದಿಂಗಳು ||
ಉಂಟಾದ ಕಾಲಕ್ಕೆ ನಂಟರು ಇಷ್ಟರು | ಬಂಟರಾಗಿ ಬಾಗಿಲ ಕಾವರು |

ಉಂಟಾದ ದಿನ ತಪ್ಪಿ ಬಡತನ ಬಂದರೆ | ಒಂಟಿಹಾಂಗೆ ಮೋರೆದಿರುಗುವರಯ್ಯ ||!

ಹೆಡಗೆಯ ಭಕ್ಷ್ಯಕ್ಕೆ ಗಡಿಗೆಯ ತುಪ್ಪಕ್ಕೆ | ಸಡಗರದಿಂದುಂಬ ಸರಿನಂಟರು 
ಸಡಗರದಿ; ತಪ್ಪಿ ಬಡತನ ಬಂದರೆ | ಸಿಡಿಮಿಡಿಮಾಡುತ್ತ ನಡೆನಡೆಯೆಂಬರು ||2||
ಎರುದಂಡಿಗೆ ನೂರಾರುಸಾವಿರ | ಮುರುದಿನದ ಭಾಗ್ಯ ಝಣಝಣವು |
ನೊರಾರುಸಾವಿರದಂಡ ಕೊಟ್ಟರೆ | ರಂಗವಿರಲನನೆ ಸರಿಯೆಂಬರಯ್ಯ ||3||
                              ಶ್ರೀನಾಥ, ಸು 1500 

ಸೌಂದರವಿಳಾಸವನ್ನು ಬರೆದ ಅಣ್ಣಾಜಿ (ಸು 1600) “ ಕ್ಷೋಣಿ ಯೊಳು ಕವಿರಾಜಮಕುಟಮಣಿ ಶ್ರೀನಾಧ” ಎಂದು ಈತನನ್ನು ಸ್ತುತಿಸಿ

ದ್ದಾನೆ, ಇವನು ಆವ ಗ್ರಂಥವನ್ನು ಬರೆದಿದ್ದಾನೆಯೋ ತಿಳಿಯದು, ಇವನ

ಕಾಲವು ಸುಮಾರು 15೦0) ಆಗಿರಬಹುದೆಂದು ಊಹಿಸುತ್ತೇವೆ. ______________________________________________________________________ 1, ಶ್ರೀಪಾದರಾಯಾಷ್ಟಕ:- ಶ್ರೀಮದ್ವೀರಸಿಂಗರಾಜನೃಪತೇರ್ಭೂದೇವಹತ್ಯಾವ್ಯಥಾಂ | ದೊರಿ ಕೃತ್ಯ ತದೆರ್ಪಿತೋಜ್ವಲಮಹಾಸಿಂಹಾಸನೇ ಸಂಸ್ಥಿತಃ|| -- -- -- -- -