ಶತಮಾನ]
ನಿಜಗುಣ ಶಿವಯೋಗಿ. 155
ಣೇತಿಹಾಸಸೂತ್ರಾ ದಿಶಾಸ್ತ್ರಸಮ್ಮತದಿಂ ಪುರಾತನಗೀತಾನುಗುಣ್ಯವೆನಿಸಿ ಮೃದುಮಧುರ ಲಕ್ಷನಯುಕ್ತಮಾಗಿ ರಚಿಸಿರುವಂತೆ ಹೇಳುತ್ತಾನೆ.ಒಂದೊಂದು ಹಾಡಿನಲ್ಲಿಯೂ ಶಂಭುಲಿಂಗನ ಅಂಕಿತವಿದೆ. ಈ ಗ್ರಂಥದಿಂದ ಒಂದು ಹಾಡನ್ನು ತೆಗೆದುಬರೆಯುತ್ತೇವೆ.
ರಾಗ ಮಾಳವ. ಪಲ್ಲವಿ|| ಯೋಗಿಗೆ ಸಕಲಸಂಸಾರಸಂಗವದಿಲ್ಲ | ವಾಗಿ ತಿಳಿವರದು ಪುಸಿ ನೋಡು ರಮಣಿ || ಪರವಿದ್ಯೆಯೆಂಬ ಕುಲವನಿತೆಯುಂಟಗಲದ | ಪರಿತೋಷವೆಂಬ ಮೋಹದಣುಗನುಂಟು | ವಿರತಿಯೆಂಬನುಕೂಲಜನಮುಂಟು ಕ್ಷಮೆಯೆಂಬ | ಚರನುಂಟು ಶಾಂತಿಯೆಂಬ ಸಖನ ಸರಿಸವಮುಂಟು ||1||
ನುತಭಕ್ತಿಯೆಂಬ ಮಾತೆಯುಂಟುಸುಚರಿತ್ರವೆಂಬ | ಪಿತನುಂಟು ಸತ್ಯವೆಂಬ ಕುವರಿಯುಂಟು | ಹಿತವಾದ ನಂಬುಗೆಯೆಂಬಾತ್ಮ ಜನರಸಿಯುಂಟು | ಮತಿಯೆಂಬ ದೇಹಮುಂಟು ವಿಚಾರವೆಂಬ ಕ್ಷೇತ್ರಮುಂಟು ||2|| ದಾಸಿಯುಂಟಹಿಂಸೆಯೆಂಬ ದಾಸನುಂಸ್ತೆಯವೆಂಬ| ಲೇಸನೀವ ಧರ್ಮವೆಂಬ ವಾಹನಮುಂಟು | ಭಾಸುರಮೈತ್ರ್ಯದಿಯೆಂಬ ಪೌತ್ರರುಂಟು | ಮುಕ್ತಿಯೆಂಬ ದೇಶಮುಂಟು ಶಂಭುಲಿಂಗವೆಂಬ ಗುರು ತನಗುಂಟು ||3||
3 ಪರಮಾರ್ಥಗೀತ.
ಇದು ಪ್ರಾಯಿಕವಾಗಿ ಲಲಿತರಗಳಯಲ್ಲಿದೆ ; ಕೆಲವು ಕಂದಗಳೂ ಇವೆ;ಗತಿ 11, ಕಂದ 32, ನಿರೂಪಣೆ 12I, ಚರಣ 1496: ಗ್ರಂಥವು ಗುರುಶಿಷ್ಯಸಂವಾದರೂಪವಾಗಿದೆ"ಶ್ರುತಿಪುರಾಣೇತಿಹಾಸಸ್ಕೃತಿಯ ರ್ಥವನಿಂತು ಕನ್ನಡಿಸಿದೆಂ ” ಎಂದು ಕವಿ ಹೇಳುತ್ತಾನೆ. ಕೊನೆಯಲ್ಲಿ ಈ ಗದ್ಯವಿದೆ--- ಸ್ಟಸ್ತಿಸಮಸ್ತ ಸುರವ್ರಿಸರಮಕುಟಮಣಿ ಶಂಭುಸತ್ಕೃಪಾಕಟಾಕ್ಷಸಾಂದ್ರ ಚಂದ್ರಿಕಾಸಂ