ಶತಮಾನ] ನಿಜಗುಣ ಶಿವಯೋಗಿ 1? ಆರಂಭದಲ್ಲಿ ಶಂಭುಲಿಂಗಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣಪತಿ, ಗಣಗಳು, ನಿರಾಭಾರಿಗುರು, ಶುಕ, ವಾಮದೇವ ಇವರುಗಳನ್ನು ಸ್ಕರಿಸಿದ್ದಾನೆ. ಕೊನೆಯಲ್ಲಿ ಪರವಾರ್ಧಗೀತೆಯ ಅಂತ್ಯದಲ್ಲಿರುವ ಗದ್ಯವೇ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆಕಾದ ಕಬ್ಬಿನದೊಂದು ಗಟ್ಟಿಯೊಳಗಣಿತ | ವಾದ ಕಿಡಿಗಳುದಯಿಸುವಂತೆ || ಭೇದರೂಪಿನ ಜಗಷ್ಟೇವರಕಲ್ಪಿತ | ನಾದೊರ್ವನಲ್ಲಿ ಮಸಗಿ ತೋರ್ಕು | ಕೊಡನೀಗ ಮೃತ್ತಿಕೆಯೊಡನೇಕವಹುದೆಂಬ | ನುಡಿಯಂತೆ ತನಗೆ ಪರಮನೊಳು | ಬಿಡದೊಂದುತನವೆಂಬುದಿದು ಕಾರ್ಯಕಾರಣ ಏಡಿದುದಲ್ಲೆಂದು ಕಾಣಲುಬೇಕು | ಹವಣಿಸೆ ನೀಲೋತ್ಪಲವಿದೆಂಬ ವಚನದಂ | ತವಿರಳಸೌಖ್ಯವಾರಿಧಿಯನು | ತವೆ ತನ್ನ ನಿಜವೆಂಬುದಿದು ತನುಗುಣ ಗುಣಿ | ತ್ವವನುಂಟುಮಾಡದೆಂದುವುದು || ಜರೆಮೃತಿಯೊಡಲಿಂಗೆ ಹರಣಕ್ಕೆ ಕ್ಷುಧೆಕೃಷ್ಣ | ಪರಿಶೋಕಮೋಹವಾಬುದ್ದಿಗೆ | ಅರಿವರ್ಗವಾಮನಸಿಗೆ ನಿರಂಗಚಿ | ಕ್ಷರಧಿಯೊಳವು ತೋಯಿ೦೦ರಿವುವೇ || ತನು ರುಜೆಯಾಗರವತಿದುಃಖಸಾಗರ | ತನು ತಾಪಕ್ಷೇಶಾದಿಗಳ ಗೊತ್ತು || ತನು ಮಲವದರಿಂದಖಿಳದುಃಖವೆಲ್ಲಕ್ಕೆ | ತನುಭಾವವ 5 ಯೆ ದುಃಖದ ಕೇಡು || 5 ಅರುವತ್ತುಮೂವರ ತ್ರಿಪದಿ. ಇದಕ್ಕೆ ಪುರಾತನರ ತ್ರಿವಿಧಿ ಎಂಬ ಹೆಸರೂ ಉಂಟು ; 77 ಪದ್ಯಗ ಳಿವೆ. ಗ್ರಂಥವು ಶಿವಭಕ್ತರಾದ ಅರುವತ್ತುಮೂವರ ಸ್ತುತಿರೂಪವಾಗಿದೆ. ಆರಂಭದಲ್ಲಿ ಶಂಭುಲಿಂಗ, ಪಾರ್ವತಿ, ಗಣಗಳು ಇವರುಗಳ ಸ್ತುತಿ ಇದೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ. ಪಾರ್ವತಿ, ಇಂಗಡಲೊಳಿ೦ಪು ಬೆಳುದಿಂಗಳೊಳು ತಂಪು ಕುಸು | ಮಂಗಳೊಳು ಕಂಪ ಬೆರೆದಂತ ಪರಮನೊಳು | ಹಿಂಗದಗಸುತೆಗೆ ನತನಪ್ಪೆ ! ಪುರಾತನರು. ಕೊರಳ ವಿಷಮಂ ಕಂಡು ಮರಣವಹುದೆಂದು ಭವ | ಹರನನಾರಯುತಿಹ ರುದ್ರಪಶುಪತಿಗೆ | ಶರಣೆಂದು ಸಿದ್ದಿ ನಡೆವೆನು || ಮೃಡನ ದೃಷ್ಟಿಯೊಳು ರುಜೆ)ಯಡರಿತೆಂದತಿಭೀತಿ | ವಿಡಿದು ನಿಜಲೋಚನವನಿತ್ತ ಕಣ್ಣಪ್ಪ | ನಡಿಗಳಂ ಪೊತ್ತು ಬಿಡದಿರ್ಪೆ |
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.