ಶತಮಾನ] ಸುರಂಗಕಏ. 181 ವಾರ್ಣಎಚಂದ್ರನೆನಿಪ್ಪಂ ! ಕರ್ಣಾಟಕವೀಂದ್ರನಮಮ ಸುಕವಿಸುರಂಗಂ || ಧರಣೀಶರ್ ಮೆಚೆ ನಾನಾಚತುರಕಲೆಗಳಂ ತೋರು ವಿಭ್ರಾಜಿಪಂ ಸ | ದ್ಗುರುಪಾದಾಂಭೋಜಭ್ಯಂಗಂ ನವರಸಕವಿತಾನರ್ತಕೀನೃತ್ಯರಂಗಂ || ಸರಸವ್ರಾತಾಂತರಂಗಂ ವಿಬುಧವಿನುತನಿಶ್ಯೆೇಷವಿದ್ಯಾಪ್ರಸಂಗಂ | ಭರತಾಂಗಂ ಶೈವತುಂಗಂ ಪ್ರತಿಭಟಕವೇಶ್ಯಾಭುಜಂಗಂ ಸುರಂಗಂ || ಬಿದಿ ಜಗಮಂ ನಿರ್ಮಿಸಿ ಸುಖ | ದೊದವೈದದೆ ಚೈತ್ರನಂ ಸುಧಾಕರನಂ ನೀ | ರದಮಂ ಸುರಂಗಕವಿಯಂ | ಪದಪಿಂದಂ ಪಡೆದು ಪರಮಸುಖಮಂ ಪಡೆದಂ || ಇವನ ಗ್ರಂಥ
ತ್ರಿಷಷ್ಟಿ ಪುರಾತನರ ಚರಿತ್ರೆ ಇದು ಚಂಪೂರೂಪವಾಗಿದೆ; ಆಶ್ವಾಸ 63. ಇದರಲ್ಲಿ ಪ್ರಸಿದ್ಧರಾದ 63 ಶಿವಭಕ್ತರ ಚರಿತ್ರವು ಹೇಳಿದೆ ಉಪಮನ್ಯುಮುನಿ ಕಣಾದನಿಗೆ ಹೇಳಿದ ಈಚರಿತವನ್ನು ಲೈಂಗ್ಯಪುರಾಣದಲ್ಲಿದ್ದಂತೆ ತಾನು ಬರೆದುದಾಗಿ ಕವಿ ಹೇಳುತ್ತಾನೆ, ತನ್ನ ಕಾವ್ಯದ ಉತ್ಕೃಷ್ವತೆಯನ್ನು ಈಪದ್ಯಗಳಲ್ಲಿ ತಿಳಿ ಸಿದ್ದಾನೆ
ಆಲರ್ಗಳ ಕಂಪಿನಂತೆ ಮಿಳಿರ್ದಾಡುವ ತುಂಬಿಯ ಬಂಬಲಂತೆ ತಂ | ಬೆಲರಿನ ಪೆರ್ಮೆಯಂತೆ ತನಿವಣ್ಗಳಿನೊಪ್ಪುವ ಮಾವಿನಂತೆ ಪಂ | ಬಲಿಸುತೆ ಕಳ್ದು ನೋಡುವೆಳವೆಂಡಿರ ಕಣ್ಮಲರಂತೆ ಬಲ್ಲರಂ || ನಲವಿನೊಳೆಯ್ದೆ ಸೋಲಿಪುದು ಕಬ್ಬಿಗರಾಳ್ದನ ಕಬ್ಬದೆಳ್ತಿರಂ || ಶಿವಪದಭಕ್ತಿಯ ತಾಯ್ವನೆ | ನವರಸದೆಡೆ ಲಕ್ಷ್ಯಲಕ್ಷಣಂಗಳ ನೆಲೆಯಾ || ಯ್ತವನಿಗೆ ಸುರಂಗಕವಿಯು | ತ್ಸವದಿಂದಂ ಸೇರ್ದ ಕಾವ್ಯಸಾರೋದ್ಧಾರಂ || ಕಂದಂಗಳ್ ವಾಗ್ವನಿತೆಯ | ಕಂದಂಗಳ್ ಸಭ್ಯನವ್ಯ ಕಾವ್ಯಲಸನ್ಮಾ | ಕಂದಂಗಳ್ ನವರಸದು | ಕ್ಕಂದಂಗಳೆನಲ್ಕೆ ಕವಿಸುರಂಗಂ ಪೇಳ್ದಂ |
ಈ ಗ್ರಂಥದಲ್ಲಿ ಕಾವ್ಯಾಂಗಗಳು 18ನ್ನೂ ವರ್ಣಿಸುವಂತೆ ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ಸೋಮನಾಥಸ್ತುತಿ ಇದೆ. ಬಳಿಕ ಕವಿ ಬಸವ, ಚೆನ್ನಬಸವ, ಪ್ರಭುದೇವ, ಗಣೇಶ, ಸರಸ್ವತಿ ಇವರುಗಳನ್ನು ಕ್ರಮವಾಗಿ ಹೊಗಳಿದ್ದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ: 21