ಈ ಪುಟವನ್ನು ಪರಿಶೀಲಿಸಲಾಗಿಲ್ಲ.
172 ಕರ್ಣಾಟಕ ಕವಿಚರಿತೆ, [15 ನೆಯ
ಕಲ್ಯಾಣದಸ್ವಾಮಿ ಸು 1500 ಈತನು ಕಾರಣಾಗಮದ ವಾರ್ಧಕವನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಸುಮಾರು 1500ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ ಕಾರಣಾಗಮದವಾರ್ಧಕ ಇದು ವಾರ್ಧಕಷಟ್ಪದಿಯಲ್ಲಿ ಬರೆದಿದೆ; ಪದ್ಯ 25. ಇದರಲ್ಲಿ ಶೈವಾಗ ಮಗಳಲ್ಲಿ ಒಂದಾದ ಕಾರಣಾಗಮದ ವಿಷಯಗಳು ಸಂಗ್ರಹವಾಗಿ ಹೇಳಿವೆ. _ _ _
ಯಶಃಕೀರ್ತಿ ನು 1500 ಈತನು ಧರ್ಮಶರ್ಮಾಭ್ಯುದಯಕ್ಕೆ ಟೀಕೆಯನ್ನು ಬರೆದಿದ್ದಾನೆ. ಇ ವನು ಜೈನಕವಿ; ಲಲಿತಕೀರ್ತಿಯ ಶಿಷ್ಯನು. ಇವನ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ. ಇವನ ಟೀಕೆಗೆ ಸಂದೇಹ ದ್ವಾಂತದೀಪಿಕೆ ಎಂದು ಹೆಸರು. ಟೀಕೆಯ ಕೊನೆಯಲ್ಲಿ ಈ ಗದ್ಯವಿದೆ: ಇತಿ ಶ್ರೀಮನ್ಮಂಡಲಾಚಾರ್ಯಲಲಿತಕೀರ್ತಿ ಶಿಷ್ಯಶ್ರೀಯಶಃಕೀರ್ತಿರಚಿತಾಯಾಂ ಸಂದೇಹದ್ವಾಂತದೀಪಿಕಾಯಾಂ _ _ _
ಶುಭಚಂದ್ರ ಸು. 1500 ಈತನು ನರಪಿಂಗಳಿಯನ್ನು ಬರೆದಿದ್ದಾನೆ. ಇವನು ಜೈನಕವಿ; ಸುಮಾರು 1500ರಲ್ಲಿ ಇದ್ದಿರಬಹುದೆಂದು ತೋರುತ್ತದೆ. ಇವನ ಗ್ರಂಥ ನರಪಿಂಗಳಿ ಇದು ಕಂದದಲ್ಲಿ ಬರೆದಿದೆ ; ಪದ್ಯ 167. ಇದರಲ್ಲಿ ಜ್ಯೋತಿಷ ಸಂಬಂಧವಾದ ಕೆಲವು ವಿಷಯಗಳು ಹೇಳಿವೆ. ಗ್ರಂಥಾಂತ್ಯದಲ್ಲಿ-ಇದು ಶುಭಚಂದ್ರಸಿದ್ದಾಂತಯೋಗೀಂದ್ರವಿರಚಿತಮಪ್ಪ ನರಸಿಂಗಳಿ-ಎಂದಿದೆ. _ _ _
ಲಕ್ಷಣಾಂಕ, ಸು, 1500 ಈತನು ಶಕುನಸಾರವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ಕಮ್ಮವಂಶದವನು. ಇವನ ತಂದೆ ಮಲ್ಲಿನಾಥ, ಇವನು ಸುಮಾರು 1500ರಲ್ಲಿ ಇದ್ದಿರಬಹುದೆಂದು ತೋರುತ್ತದೆ.