ಈ ಪುಟವನ್ನು ಪರಿಶೀಲಿಸಲಾಗಿದೆ
178 ಕರ್ಣಾಟಕ ಕವಿಚರಿತೆ. [15 ನಯ
ಸರಸ್ವತೀಮುಖತಿಲಕ ರೋಗಿಯದಾವಂ ಋಣಿ ಸುಖ | ದಾಗರನಾವಂ ಜಿತೇಂದ್ರಿಯಂ ಗುರುಪದಸಂ | ಯೋಗಿಯದಾವಂ ಭಕ್ತೋ | ದ್ಯೋಗದೊಳಿರ್ಪಂ ಸರಸ್ವತೀಮುಖತಿಲಕಾ || ಪರಮಾಗಮಸಾರವನ್ನು ಬರೆದ ಚಂದ್ರಕೀರ್ತಿಗೆ (ಸು, 1400) ಈ ಬಿರುದಿದ್ದಂತೆ ತೋರುತ್ತದೆ. ಸುಕವಿಕಂಠಾಭರಣ ಅವರವರಿನಪ್ಪ ಕಾರ್ಯ ಮ |ನವರವರಿಂ ಮಾಡು ಬೇಂಟೆವೋವೊಡೆ ನಾಯಂ || ತವೆ ತಟ್ಟಿ ನಡೆವರಲ್ಲದೆ | ಕವಿಲೆಯನುಯ್ದ ಪರೆ ಸುಕವಿಕಂರಾಭರಣಾ || ಹಾಡಿಂಗೋದಿಂಗಳಾಯದ | ಪೀಡೆಗಳಂ ಬೇಡಿಬೇಡಿ ಬೆಳಗಪ್ಪದರಿಂ | ಬೇಡುವುದು ಕುಡುವನಂ ಕೊಂ | ಡಾಡುವನಂ ಕೂಡೆ ಸುಕನಿಕಂರಾಭರಣಾ || ಸುಕವಿನಿಕರನಿಳಿ೦ಸ ಬಾರೋ ಎನಲಯ್ಯಯ್ಯಾ| ಸಾರೋ ಎನಲಯ್ಯ ಆರೊ ಎನಲಯ್ಯಯ್ಯಾ | ತೀರದ ಸೇವೆಯ ದುಃಖವ | ನಾರುಪಮಿಸಬಹುದು ಸುಕನಿಕರವಿಳಿಂವಾ || ಸುಗುಣಕಂಠಾಭರಣ ಕೆಟ್ಟ ವಚನದೊಳೆ ಹಿರಿಯರ | ದಟ್ಟಿಸಿ ಶರಣೆಂದೊಡವರ ನೋವಜದಪದೇ | ಸುಟ್ಟರೆ ಬಾವನ್ನ ವ ತೇ | ದಿಟ್ಟೂಡೆ ಕಂಪುಂಟೆ ಸುಗುಣಕಂಠಾಭರಣಾ || ಸುಗುಣಕರಂಡ ಹಿಂದೆ ಗವಿಸಿದುದು ಪೋದುದು|ಮುಂದಕ್ಕಿನ್ನೇವೆನೆಂದು ಚಿಂತಿಸಲೇಕೈ | ಅಂದಂದು ಸೇದುಬಾವಿಗೆ| ತಂದುದಕವನೆರಾದರುಂಟೆ ಸುಗುಣಕರಂಡಾ || ತಕ್ಕರ್ ಬರಲುಚಿತಾಸನ |ವಿಕ್ಕಿ ಕೆಲಕ್ಕೆಲ್ದು ಬನ್ನಿ ಮೆಂದೊಡೆ ಬಾಯೇಂ | ಮುಕ್ಕ ಹುದೆ ಅವನ ಸಿರಿ ತಾಂ|ಚಕ್ಕನೆ ಪೋದಪುದೆ ಸಹಜಸುಗುಣಕರಂಡಾ || ಸುಗುಣರತ್ನಕರಂಡ ಕುಡಲುಂ ಭೋಗಿಸಲುಂ ಸಿರಿ|ಕಿಡುವುದೆ ಕೆಟ್ಟೋರತೆ ತೊಡೆ ತವನಿಧಿಯಕ್ಕುಂ | ಕುಡದನ ಭೋಗಿಸದನ ಸಿರಿ|ಪಡಿಗದ ನೀರಂತೆ ಸುಗುಣರತ್ನಕರಂಡಾ || ಹುಡಿಯೊಳಗೆ ಕೆಡಹಿ ತುಪ್ಪವ |ನಡುಗುವ ಪೆರ್ಮರುಳಿನಂತ ಮಾನ್ಯರ ಮನಮಂ | ಕೆಡೆ ನುಡಿದು ಚರಣವಿಡಿದೊಡೆ|ಬಿಡುವದೆ ಮನದೇ ಸುಗುಣರತ್ನಕರಂಡಾ || ಸಾವಾವುದು ಯಾತನೆಯರ |ವಾವಾವದು ಜಾರವನಿತೆ ಮಾನ್ಯರ ಮನದೇ | ಚಾವುದಮನ್ನಣೆ ಪಾತಕ |ವಾವುದು ಪರನಿಂದೆ ಸುಗುಣರತ್ನಕರಂಡಾ ||