ಈ ಪುಟವನ್ನು ಪರಿಶೀಲಿಸಲಾಗಿದೆ

182 ಕರ್ಣಾಟಕ ಕವಿಚರಿತೆ. [16 ನೆಯ

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ರದೆಲಿಕ | 

ಇದು ವಾಣೀಮುಖಮಾಣಿಕ್ಯಮುಕುರ ಮ | ತ್ರಿದು ಶೃಂಗಾರಸುಧಾಬ್ಲಿ ||

   ಗ್ರಂಥಾವತಾರದಲ್ಲಿ ಕವಿ ವೀರನಾಥನನ್ನು ಸ್ತುತಿಸಿದ್ದಾನೆ. ಬಳಿಕ
ಸಿದ್ಧಾದಿಗಳು, ನವಕೋಟತಪಸಿಗಳು, ಸರಸ್ವತಿ ಇವರುಗಳನ್ನು ಸ್ತುತಿ 

ಸಿ ಅನಂತರ ಸುಭದ್ರ ಪೂಜ್ಯಪಾದ ಭದ್ರಬಾಹು ಬಾಹುಬಲಿ ಗೌತಮ

ಗುಣಭದ್ರ ಕವಿಪರಮೇಷ್ಠಿಗಳನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲ 
ವು ಪದ್ಯಗಳನ್ನು ತೆಗೆದು ಬರೆಯುತ್ತೇವೆ.__
                                    
                                              ಗದ್ದೆ
ಕವಿಮೆಯ ಕದಿರ ಮೀಸಲ ಕಂಪನುಣಲೆಂ | ದಳಿಸಿಸುಗಳು ಕೊನೆಯೇಲಿ|
ಪೊಳೆದುವು ಪೂಗಣೆಯನ ಪಸುರ್ಗಾವಿನ | ತೊಳಪ ನೀಲದ ಮಿಂಟೆಯಂತೆ ||
                                          ಚಂದ್ರಗ್ರಹಣ            

ನವಮುಕುರವನೊಳಗಿಟ್ಟ ಕರ್ವಟ್ಟೆಯ | ಗವಸಣಿಗೆಯೊ ಎಂಬಂತೆ |

ತವಕದೊಳಿಂದುಬಿಂಬವ ರಾಹುಮಂಡಲ | ತವೆ ನುಂಗಿ ಕರಾಜಿಸಿತು ||
                                              ಚಂದ್ರಾಸ್ತ್ರ
ಚರಿಸಿದೆನಿರುಳು ರಕ್ಕಸನಂತೆ ದೋಷಾ | ಕರನಾದೆನೀಪಾಪವನು |
ಪರಿಹರಿಸುವೆನೆಂಸ್ಟಾದ್ರಿರಿಯೇಆ ಕ | ಮ್ಮರಿವೊಲು ಬಿದ್ದ ನಿಂದು ||
                                       ಕತ್ತಲೆ
ಪೊಡವಿವೆಣ್ಣಾದಿತ್ಯ ಮಂಡಲವೆಂದೆಂಬ | ಸೊಡರ್ಗುಡಿಯಿಂ ಕಚ್ಚಳವನು | 

ಹಿಡಿವ ಹಂಚಿನ ತೆನೆಂದೆನೆ ಕಾವಳ | ವಡಸಿ ಕಪ್ಪಾದುದಾಗಸವು ||

                                       ಸ್ತ್ರೀವರ್ಣನೆ
ಜಲಜದ ಸಿರಿ ಕುರುವಿಂದದ ಕಡುಗೆಂಪು | ತಳಿರ ಮಾರ್ದವವಲತಿಗೆಯ | ತಿಳಿರಸದೊಬ್ಬುಳಿಗೊಂಡಂದದೊಳು ಪ | ಜ್ಜ ಳಿಸಿದುವವಳ ಪಜ್ಜೆಗಳು ||
ಕುರುಳಿ೦ದ್ರನೀಲ ಕುಲಿಶ ದಂತ ಚೆಂದುಟಿ | ಕುರುವಿಂದ ಮೈ ಪುಷ್ಯರಾಗ |
ಚರಣ ವಿದ್ರುಮ ನಖ ವೈಡೂರಮೆನೆ ರನ್ನ | ಗರುವಿನಂತೆಸೆದಳಾರಮಣಿ ||
                                ಕೊಳ
ಅಳಿಯೂಟಕೆ ವನದೊಡತಿ ಹೇಮಾಂಬುಜ | ದಲರ್ಗಳ ಕೆಲದಟ್ಟಿ ಸಹಿತ |
ಒಲಿದಿಟ್ಟ ಬೆಳ್ಳಿಯ ಪರಿಯಾಣದಂತೆ  ಪ |ಜ್ಜ ಳಿಸಿದುದಾಕಾಸಾರ ||