ಶತಮಾನ) ಮಂಗರಸ III 186 ಅರೆದಕ್ಕಿಯೊಳಗದ್ದಿ ಹೊಚ್ಚ ಹೊಸತುಪ್ಪದೊಳು | ಹಿರಿದು ಹಸನಾಗಿ ಬೇಯಿಸಿ ತೆಗೆದು ತುಪ್ಪವಿಡೆ | ಘರಿವಿಳಂಗಾಯೆಂದು ಸೆಸರ್ವಡೆದು ನಾಲಗೆಯಕೊನೆಗೆ ಪೀಯೂಷವಾಯ್ತು || ಹಾಲಗಾರಿಗೆ ಉತ್ತಮದ ಸೊಜ್ಜಿಗೆಯ ನೆನಹಿ ನೀರಂ ಹಿಂಡಿ | ಮತ್ತದಕೆ ಬಟ್ಟವಾಲ್ತಿಳಿದುಪ್ಪಮಂ ತಳಿದು | ಮೆತ್ತನಪ್ಪಂತು ಮಿದಿದಿರಿಸಿಯದರ್ಧ ಹಾಲೊಳಗುಕ್ಕರಿಸಿದಕ್ಕಿಯ || ಒತ್ತಿ ಹಾಲಿಂದೆದು ಸವೆದ ಕಣಿಕದೊಳು ಬೆರ | ಸುತ್ತ ಸಕ್ಕರೆಯ ಪಾಕದೊಳಿಕ್ಕಿ ಪರಿಮಳವ | ನೊತ್ತರಿಸಿ ತುಪ್ಪದೊಳು ಬೇಯಿಸಿದ ಹಾಲಗಾರಿಗೆ ಪಿರಿದು ಸವಿದೋದೇ || ಸವಡುರೊಟ್ಟ ನವನೀತಮಂ ಕೆನೆಯಮುಂ ಬೆರಸಿ ಕಣಿಕಮಂ | ಸವೆವಂತೆ ಕುಟ್ಟಿ ಬಟ್ಟಲಮಾಡಿ ಹಪ್ಪಳದ | ಸಮನಾಗಿಯೊತ್ತಿಯಮ್ಮೈಗೆ ಬೆಣ್ಣೆಯ ತೊಡೆದು ನಾಲ್ಕೈದುಕಲ್ಲಡುಕಿ ಕಲ್ಲ ಅವರಡುಮೈಗೆ ಸಿಟ್ಟಿಯ ಬಟ್ಟಲಂ ಕವಿಸಿ | ಹವಣದು ಹಂಚಿನೊಳು ಸುಟ್ಟು ಸಿಟ್ಟಿಯನು ತೆಗೆ | ದವಕೆ ತುಪ್ಪವನಿಕ್ಕಲವು ಸವಡುರೊಟ್ಟಿ ವೆಸರಂ ಪಡೆದು ರಂಜಿಸುವುವು ಹಿಮಾಂಬುಪಾನಕ ಉದಕದೊಳಗರ್ಧಸಕ್ಕರೆಯಿಕ್ಕಿ ಕರಗಿಸುವ | ಹದನ ದು ದಾಳಿಂಬಮಾದಲದ ಹುಳಿಯಕ್ಕಿ | ಸದಕಿದೆ (1) ಅಕ್ಕಿ ಹಸಿಯಲ್ಲಮಂ ಹಾಕಿ ಬೆಂಡೆಯ ಬೇರಿನಿಂದ ತಿರುಹಿ || ಕದಡಿ ಪನಿನೀರ ಸೇವಂತಿಗೆಯ ಹೂವಿಕ್ಕಿ | ಯದನು ಸೇವಂತಿಯಂ ಪೊರೆದ ಮಡಕೆಯೊಳಿರಿಸಿ | ಚದುರರಂತದಕೆ ಸಲೆ ಸೊಗಯಿಸ ಹಿಮಾಂಬುಪಾನಕಮೆಂದು ಹೆಸರಿಡುವುದು || 5. ನೇಮಿಜಿನೇಶಸಂಗತಿ ಇದು ಸಾಂಗತ್ಯದಲ್ಲಿ ಬರೆದಿದೆ ; ಸಂಧಿ 35, ಪದ್ಯ 1538. ಇದ ರಲ್ಲಿ 22ನೆಯ ತೀರ್ಥಕರನಾದ ನೇಮಿನಾಥನ ಚರಿತವು ವರ್ಣಿತವಾಗಿದೆ. “ ನೇಮಿತೀರ್ಥಕರರ ಕಥನವ ಪಾಡುಗಬ್ಬದೊಳನುಗೆಯ್ಯೊನು ” ಎಂದು 24
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೭೦
ಈ ಪುಟವನ್ನು ಪರಿಶೀಲಿಸಲಾಗಿದೆ