ಈ ಪುಟವನ್ನು ಪರಿಶೀಲಿಸಲಾಗಿದೆ

19

                               ಕರ್ಣಾಟಕ ಕವಿಚರಿತೆ.
   ಅಮರಗುಂಡದ ಮಲ್ಲೇಶ್ವರಾಚಾರ್ಯನು ; ಅವನ ಶಿಷ್ಯ ಶೂಲವೇರಿದ ಮಹತ್ವ ವುಳ್ಳ ಗುರುಭಕ್ತನು ; ಅವನ ಮಗ ದೇಶಿಕಪಟ್ಟವರ್ಧನ ಸೌಂದರ್ಯಮಲ್ಲಿಕಾರ್ಜುನಪಂತ ; ಅವನ ಮಗ ನಾಗನಾಧಾರ್ಯ ; ಅವನ ಮಗ ಅಹಿಯಂ ಲಿಂಗಕೆ ಛತ್ರಮಂ ಮಾಡಿದ ಅಮರಗುಂಡಾರ್ಯ ; ಇವನ ವಂಶದೊಳು ಗುಬ್ಬಿಯಮಲ್ಲಣ್ಣನು ಹುಟ್ಟಿ ಅನುಭವಯೋಗಷಟ್ಸ್ತಲಖ್ಯಾತಮಂ ಗಣಭಾಷ್ಯರತ್ನಮಾಲೆಯಂ ಮಾಡಿ ವಾಶೂಲಕ್ಕೆ ಟಿಪ್ಪಣವನೆಸಗಿದಂ. ಅವನ ಮಗ ಗುರುಭಕ್ತ ; ಇವನ ಹೆಂಡತಿ ಸಪ್ಪೆಯಮ್ಮ ; ಇವರ ಮಗ ಕವಿ ಗುಬ್ಬಿಯಮಲ್ಲಣಾರ್ಯ.
   ಇವನ ಗುರು ಸಿದ್ಧಮಲ್ಲೇಶ ; ಶಿವಗಂಗೆಯ ಮೇಲಣಗವಿಯ ಸಿಂಹಾಸನಾಧೀಶ್ವರನಾದ ಶಾಂತನಂಜೇಶ್ವರನೂ ಇವನಿಗೆ ಗುರುವಾಗಿದ್ದಂತೆ ತಿಳಿಯುತ್ತದೆ. ಅಲ್ಲದೆ ಸಪ್ಪೆಯಲಿಂಗಣಾಚಾರ್ಯನು ತನಗೆ ವಿದ್ಯವನಿತ್ತು ಪೊರೆದನು ಎಂದು ಹೇಳುತ್ತಾನೆ. ' ಕರ್ಣಾಟಸಂಸ್ಕೃತೋಭಯಕವಿತ್ವಂಗಳಂ ಪೂರ್ಣಲಕ್ಷಣಚಮತ್ಕಾರದಿಂದಂ ಮಾಳ್ರನಿರ್ಣಯಕೆ ನೀನೆಯಗ್ಗಳವಲಾ ಬಸವಪೌರಾಣಾರ್ಥವಂ ಪೇಳ್ವೊಡೆ ಅರ್ಣವಪ್ರಾಂತದ ಭೂಮಿಯೊಳು ಪೆಸರಾಗಿರ್ದೆ' ಎಂದು ಈತನನ್ನು ಇತರರು ಸ್ತುತಿಸಿದಂತೆ ಹೇಳಿರುವುದರಿಂದ ಇವನು ಉಭಯಭಾಷಾಕವಿಯೆಂದೂ ಬಸವಪುರಾಣದ ಅರ್ಥವನ್ನು ಹೇಳುವುದರಲ್ಲಿ ಪ್ರಸಿದ್ಧನೆಂದೂ ತಿಳಿಯುತ್ತದೆ. ಇವನಿಗೆ ಬಸವಪೌರಾಣದಮಲ್ಲಣಾರ್ಯ ಎಂಬ ಹೆಸರೂ ಉಂಟು. ಚೇರಮನು (1526) ತನ್ನ ಚೇರಮಕಾವ್ಯದಲ್ಲಿ “ ವೇದಾಂತಸಿದ್ಧಾಂತಲಕ್ಷಣವೈದ್ಯಭರತಸಾಮುದ್ರಿಕ ಜ್ಯೋತಿಷಾಲಂಕಾರಸರಸಗೀತಂ | ವಾದ್ಯಶಕುನಸಭ್ವಾಕರಣಸೂಪರತಿಶಾಸ್ತ್ರದೊಳಗೆ ಪರಿಣತನು ಎಂದು ಇವನನ್ನು ಹೊಗಳಿರುವುದರಿಂದ ಇವನು ಈ ಇತರಶಾಸ್ತ್ರಗಳಲ್ಲಿಯೂ ಪಂಡಿತನಾಗಿದ್ದಂತೆ ತೋರುತ್ತದೆ. ಭಾವಚಿಂ ತಾರತ್ನವನ್ನು ಶಕ 1435 ಶ್ರೀಮುಖದಲ್ಲಿ-ಎಂದರೆ 1513ರಲ್ಲಿಯೂ ವೀರಶೈವಾಮೃತಪುರಾಣವನ್ನು ಶಕ 145 ವಿಕೃತಿಯಲ್ಲಿ- ಎಂದರೆ [530ರಲ್ಲಿಯೂ ಬರೆದಂತೆ ಹೇಳುತ್ತಾನೆ.
  ಪೂರ್ವಕವಿಗಳನ್ನು ಈ ಪದ್ಯಗಳಲ್ಲಿ ಸ್ಮರಿಸಿದ್ದಾನೆ-
ಕಾಮಿತಾರ್ಧಾಮೃತರಸಾದಿಲಕ್ಷಣಸೌಮ್ಯ |
ರಾಮಣೀಯಕಪದಾಲಂಕಾರಗಳ್ಗೆ ನಿಜ |
ಸೀಮೆಯೆನಿಸುವ ಸೈಪನೀಕೃತಿಗೆ ಕುಡುವ ಚಿಂತಾರತ್ನಮೆನಿಪ ಪುಣ್ಯ ||