ಈ ಪುಟವನ್ನು ಪರಿಶೀಲಿಸಲಾಗಿದೆ
224 ಕರ್ಣಾಟಕ ಕವಿಚರಿತೆ, [16 ನೆಯ
ಹರಿನಿಜಜ್ಞಾನೋಪಲಾಲಿತ | ಪರತರಾನಂದಾನುಭವವಿನಿ | ತಿರದೆ ವಿಸ್ತರವೆನಲು ವರ್ಣಿಸತಕ್ಕುದಿದಳೊಳಗೆ || ಗ್ರಂಥಾವತಾರದಲ್ಲಿ ಗಣೇಶಸ್ತುತಿ ಇದೆ. ಬಳಿಕ ಕವಿ ಸರಸ್ವತಿ, ವೇದವ್ಯಾಸ, ವಿಷ್ಣು, ಶಿವ, ವಾಲ್ಮೀಕಿ, ಶುಕಯೋಗಿ ಇವರುಗಳನ್ನು ಹೊಗಳಿದ್ದಾನೆ. ದಶಮಸ್ಕಂಧದ ಆದಿಯಲ್ಲಿ ವಿಷ್ಣು ಶಿವ ಗಣೇಶ ಸರಸ್ವತಿಗಳ ಸ್ತುತಿಯೂ ಏಕಾದಶಸ್ಕಂಧದಆದಿಯಲ್ಲಿ ಗೋಪೀನಾಥ ಶಿವ ಬ್ರಹ್ಮಗಣೇಶ ಸರಸ್ವತಿಗಳ ಸ್ತುತಿಯೂ ಇವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತಗೆದು ಬರೆಯುತ್ತೇವೆ--. ಸಮುದ್ರದಲ್ಲಿ ಹುಟ್ಟಿದ ಲಕ್ಷ್ಮಿ ಹೊಳೆವ ಕಣ್ಗಳ ಕಾಂತಿಗಳ ಮಂ | ಗಳಕಟಾಕ್ಷಚ್ಛವಿಯ ಘನಪರಿ | ಮಳದ ನಾಸಾಪುಟದ ರೇಖಾವಳಿಯ ನುಣ್ಗೊರಳ || ಲಲಿತಹಾರದ ಪೀನಕುಸಯುಗ | ಕಲಶಭಾರದ ಬಡನಡುವಿನು | ಜ್ವಲಸುನಾಭಿಯ ಕಾಂತಿಯಲಿ ಕಣ್ಗೊಳಿಸಿದಳು ತರಳೆ || ಚಾಣೂರ ಕೃಷ್ಣರ ಮಲ್ಲಯುದ ತಳವ ತಳದಲಿ ಹೊಯ್ದು ಭುಜಮಂ | ಡಲವನಾಸ್ಫೋಟಿಸಿ ಪರಸ್ಪರ | ಕಲಿತಕರಜಾ ನೂರುಪಾದದ್ವಿತಯಬದ್ದದಲಿ || ತಳಿಸಿ ತೊಡರುವ ಬೀಸಿ ಬಿಸುಡುವ | ನಿಲುವ ನಿಂದಡಿಯಿಂದ ಬಲಿಸುವ | ಹಲವುಪರಿಯಲಿ ಹಳಚಿ ತಿವಿದಾಡಿದರು, ಪಟುಭಟರು || ವನವಿಹಾರ ಸರಸಿಜದ ಪರಿಮಳವನಂಗದ | ಪರಿಮಳದೊಳುತ್ಪಲದ ಕಾಂತಿಯ | ನರಳುಗಂಗಳ ಕಾಂತಿಯಲಿ ಭೃಂಗಾವಳೀಪ್ರತಿಯ|| ಕುರುಳುಗಳ ಕಾಂತಿಯಲಿ ಮೃದುತರ | ಚರಣಬಿಂಬಾಧರದ ರುಚಿಯಲಿ | ಹರಿಸಿದರು ಕೆಂದಳಿರ ಸಿರಿಯನು ಕಾಂತೆಯರು ಬನದ || ಕೃಷ್ಣಯರ ವಿರಹ ಕಂಡೆಯೋ ನೀನೆಲೆನವಿಲೆ ನೀ | ರ್ಗೊಂಡ ಮುಗಿಲಂದದ ಮುಕುಂದನ | ಖಂಡಸುಖಮಯಮೂರ್ತಿಯನು ನಿನ್ನಸೆವ ತಾಂಡವವ || ಕಂಡು ಮನ್ನಿಸಿದನೆ ಮನೋಜ್ಞಾ | ಖಂಡಕಾರುಣ್ಯೀಕ್ಷಣದಲು | ದ್ದಂಡ ಮಹಿಮಂಗಾರು ಮರುಳಾಗದವರವನಿಯಲಿ ||