ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಅಭಿನವವಾದಿವಿದ್ಯಾನಂದ.  227  ಅನುವಿನಿಂ ವ್ಯಾಕರಣಮೆಂಬ ದುಗ್ಧಾಬ್ದಿಯಂ| ಮನಮೆಂಬ ಮಂತಿನಿಂ ಮಧಿಸಲೊಡನದರಿಂದೆ | ಜನಿಸಿದ ಮದೀಯಸತ್ಕಾವ್ಯಚಿಂತಾರೆತ್ನ ಮದು ಸಕಲವಿಬುಧತತಿಗೆ || ಅನಿಶಮುಂ ಮನದೆ ಭಾವಿತಮಾದ ಸಕಲಾರ್ಧ | ದನುಮಿತದ ಸಂಪದಂಗಳನೀಯುತಾದರದೆ | ಘನಮಹಿಮಶಾಲಿ ಸುಮನೋಲೋಕದೊಳ್ ತೊಳಗಿ ಬೆಳಗುತಿಹುದಚ್ಚರಿಯೆನೆ || ಇನಿಯ ಮಾಂಬಣ್ಣ ಪೊಸರಸದಂತೆ ಶೋಭಿಸುವ | ತನಿಗಂಪನಿಡಿದ ಮಲ್ಲಿಗೆಯ ಪೂಜೊಂಪದಂ | ತನುವಿನಿಂ ಹಿಳ್ಗೆ ತೊಟ್ಟಿಡುವ ಜೇಂಗೊಡದಂತೆ ಚಂದನದ ತಣ್ಣಿನಂತೆ | ಮನಮೊಸೆದು ತಳ್ಕೈ ಸಿ ಕೂಡುವಂಗನೆಯ ಸ | ದ್ವಿನಯಮೊಂದಿದ ದೈನ್ಯದೊಳ್ನುಡಿಗಳಿ೦ಪಿನಂ | ತನುಗೊಳಿಸಿ ತೋರ್ಪುದೆನ್ನಯ ಕಾವ್ಯರಸಎಳೆಯ ವಿಬು ಧಸಂತತಿಗಾನಗಂ ||

  ಗ್ರಂಥಾವತಾರದಲ್ಲಿ ಅವಿರಳಲಿಂಗಸ್ತುತಿ ಇದೆ.
                         _____________
            
               ಅಭಿನವವಾದಿವಿದ್ಯಾನಂದ 1533 
     ಕಾವ್ಯಸಾರವೆಂಬ ಗ್ರಂಥದ ಒಂದು ಪ್ರತಿಯ ಕೊನೆಯಲ್ಲಿ 'ವಿಜಯ ಸಂವತ್ಸರದ ಭಾದ್ರಪದಬಹುಳ 3 ರಲ್ಲಿ ಶ್ರೀಮದಭಿನವವಾದಿ ವಿದ್ಯಾನಂದ
 _____________________________________________________________

1 ಈ ಗ್ರಂಥದ ಒಂದು ಪ್ರತಿಯಲ್ಲಿ 2 ನೆಯ ಸಂಧಿಯ ಆರಂಭದಲ್ಲಿ ಮೈಸೂರು ರಾಜನಾದ ದೇಸರಾಜರ ಮಗನಾದ ದೇವರಾಜನಿಗೆ ದಕ್ಷಿಣಭುಜನೆನಿಸಿದ ಕಳಲೆಯ ಮಲ್ಲರಾಜನಿಗೆ ಐವರು ಮಕ್ಕಳು ಇದ್ದಂತೆಯೂ ಇವರಲ್ಲಿ ಷಣ್ಮುಖನೇ ರೂಪವೆತ್ತಂತೆ ಹುಟ್ಟಿದ ಕೊಮಾರರಾಜನು ದೇವರಾಜನಿಗೆ ಸೇನಾನಿಯಾಗಿ ರಾಜ್ಯಗಳನ್ನು ಸಾಧಿಸಿಕೊ ಟ್ಟಂತೆಯೂ ಒಬ್ಬಸ್ತ್ರೀ ಯನ್ನು ಸಂಬೋಧಿಸಿ ಹೇಳಿದೆ ಈ ಭಾಗವು ವಾರ್ಧಕಪಟ್ಟದಿ ಯಲ್ಲಿಯೇ ಬರೆದಿದೆ. ಇಮ್ಮಡಿ ತೋಂಟದಯ್ಯನಿಗೆ ಮೇಲೆ ಹೇಳಿರುವ ಕಾಲಕ್ಕೂ ಮೈ ಸೂರು ದೇವರಾಜನ (1659-1672) ಕಾಲಕ್ಕೂ ಹೊಂದುವುದಿಲ್ಲವಾದುದರಿಂದ ಈ ಭಾಗವು ಗ್ರಂಧಕ್ಕೆ ಸೇರಿದುದೋ ಅಲ್ಲವೋ ಎಂಬ ಸಂದೇಹವುಂಟಾಗುತ್ತದೆ ಒಂದುವೇಳೆ ಬೇರೊಗ್ರಂಧದ ಭಾಗವಾಗಿದ್ದರೂ ಇರಬಹುದು ಹಾಗಿಲ್ಲದೆ ಇದೇ ಗ್ರಂಧಕ್ಕೆ ಸೇರಿದು ದೆಂದು ನಿಸ್ಸಂದೇಹವಾಗಿ ತಿಳಿದಪಕ್ಷದಲ್ಲಿ ಕವಿಯ ಕಾಲವು ಸುಮಾರು 1660 ಎಂದು ಹೇಳಬೇಕಾಗುತ್ತದೆ.