ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಅಭಿನವವಾದಿವಿದ್ಯಾನಂದ. 299

  ಅರ್ಣ ವವೇಷ್ಟಿತವಸುಧಾ|ಕಣೋ೯ಪಮಗುರುನೃಪಾಲನಾಸ್ಥಾನದೊಳೇಂ|
  ಕರ್ಣಾಟದಕ್ಷ ಕೃತಿಯಂ | ವರ್ಣಿಸಿ ಜಸವಡೆದೆ ವಾದಿವಿದ್ಯಾನಂದಾ || 

ಎಂಬ ಪದ್ಯದಿಂದ ಈ ಕವಿ ಕನ್ನಡದಲ್ಲಿ ಒಂದು ಗ್ರಂಧವನ್ನು ಬರೆದಂತೆ ತಿಳಿಯುತ್ತದೆ. ಇದು ಕಾವ್ಯ ಸಾರವೇ ಆಗಿರಲಾರದು, ಬೇರೆ ಗ್ರಂಧವಾಗಿರಬೇಕು. ಹಿಂದೆ ವಿದ್ಯಾ ನಂದ ಎಂಬ ಹೆಸರುಳ್ಳ ಕೆಲರು ಜೈನಗುರುಗಳು ಪ್ರಸಿದ್ಧರಾಗಿದ್ದರು. ಆದುದರಿಂದ ಅಭಿನವವಾದಿವಿದ್ಯಾನಂದ ಎಂದು ಈ ಕವಿ ಹೆಸರಿಟ್ಟುಕೊಂಡಂತೆ ಕಾಣುತ್ತದೆ.

    ಇವನ ಗ್ರಂಥ
                     ಕಾವ್ಯಸಾರ           
       ಇದರಲ್ಲಿ ಕಾವ್ಯಗಳೊಳಗೆ ವರ್ಣಿಸುವ ಎಲ್ಲಾ ವಿಷಯಗಳಿಗೂ ಉದಾಹರಣವಾಗಿ ಪೂರ್ವಕವಿಗಳ ಗ್ರಂಧಗಳಿಂದ ಪದ್ಯಗಳನ್ನು ಉದ್ಧರಿಸಿ ಒಂದೊಂದುವಿಷಯವನ್ನು ಒಂದೊಂದು ಅಧ್ಯಾಯದಲ್ಲಿ ನಿರೂಪಿಸಿ 

ದ್ದಾನೆ. ಒಟ್ಟು ಅಧ್ಯಾಯ 45, ಪದ್ಯ 1143.

      ಈ ಗ್ರಂಧವು ಮಲ್ಲಿಕಾರ್ಜುನನ (ಸು 1245) ಸೂಕ್ತಿ ಸುಧಾರ್ಣವ ವನ್ನು' ಬಹಳಮಟ್ಟಿಗೆ ಹೋಲುತ್ತದೆ. ಆದರೆ ಅದರಲ್ಲಿ ಕವಿಗಳ ಅಧವಾ ಗ್ರಂಧಗಳ ಹೆಸರು ಹೇಳಿಲ್ಲ; ಇದರೊಳಗೆ ಗ್ರಂಧಗಳ ಹೆಸರು ಹೇಳಿರುವುದರಿಂದ ಅಭಿನವವಾದಿ ವಿದ್ಯಾನಂದನ ಹಿಂದೆ ಇದ್ದ ಕವಿಗಳನ್ನು ನಿರ್ಧರಿಸುವುದಕ್ಕೆ ಇದು ಬಹಳ ಉಪಕಾರ ಕವಾಗಿದೆ. ಇದರಲ್ಲಿ ಗುಣವರ್ಮ I (ಸು. 900), ಆದಿಪಂಪ(941), ನಾಗ ವರ್ಮ I (ಸು. 990), ರನ್ನ(993), ನಾಗಚಂದ್ರ(ಸು. 1100), ಉದಯಾ ದಿತ್ಯ (ಸು. 1150), ಹರೀಶ್ವರ (ಸು. 1165), ನೇಮಿಚಂದ್ರ(ಸು. 1170), ರುದ್ರಭಟ್ಟ (ಸು. 1180), ಅಗ್ಗಳ (1189), ವಾಣೀವಲ್ಲಭ (ಸು, 1195), ಪಾರ್ಶ್ವಪಂಡಿತ (1205), ಜನ್ನ (1209), ಆಂಡಯ್ಯ (ಸು. 1235), ಕಮಲಭವ(ಸು. 1235), ಗುಣವರ್ಮ II (ಸು. 1235), ಮಧುರ (ಸು. 1385), ಚಂದ್ರಶೇಖರ (ಸು. 1430), ಈ ಕವಿಗಳ ಗ್ರಂಧಗಳಿಂದ ಪದ್ಯಗಳು ಅನುವಾದಮಾಡಲ್ಪಟ್ಟಿವೆ. ಅಲ್ಲದೆ ಕೆಲವು ಚಾಟುಪದ್ಯಗಳೂ ಮುಕ್ತಕಗಳೂ ಇವೆ.
        ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ:--
                            ರಾಜವರ್ಣನೆ 

ತಿರುಕಲ್ಲಾಡುವಳಷ್ಟಶೈಲಕುಲಮಂ ದಿಗ್ದಂತಿದಂತಂಗಳೊಳ್ |

I Vol. I, 300