ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಬೊಂಬೆಯಲಕ್ಕಿ. 231
ತ್ಕರಮಸುಖಕ್ಕೆ ಕಾರಣವಿದೆಂದಯಿದುಂ ಭವಸಿದ್ಧ ಪಂಜರೋ | ದರಗತರೇಕೆ ಚಿಂತಿಸುವರೇಕೆ ಪಲುಂಬವರೇಕೆ ನೋವರೋ' || -- - ಬೊಂಬೆಯಲಕ್ಕ . 1538 ಇವನು ಹರಿಶ್ಚಂದ್ರಸಾಂಗತ್ಯವನ್ನು ಬರೆದಿದ್ದಾನೆ. ಈತನು ವೀರ ಶೈವಕವಿಯೆಂದು ತೋರುತ್ತದೆ. ಈ ಗ್ರಂಥವನ್ನು ಶಕ 1460 ನೆಯ ವಿಳಂಬಿಯಲ್ಲಿ ಎಂದರೆ 1538ರಲ್ಲಿ ರಚಿಸಿದಂತೆ ಹೇಳುತ್ತಾನೆ. ಇವನ ಗ್ರಂಥ ಹರಿಶ್ಚಂದ್ರಸಾಂಗತ್ಯ ಸ್ಥಲ 5, ಪದ್ಯ 570. ಇದರಲ್ಲಿ ಹರಿಶ್ಚಂದ್ರನ ಕಥೆ ಹೇಳಿದೆ. ಈ ಕಥೆ "ಸತ್ಯದ ನೆಲೆ ಮುಕ್ತಿಯ ಬೀಡು ಪುಣ್ಯದ ಕೀರ್ತಿಯ ತಲೆವನೆ" ಎಂದು ಕವಿ ಹೇಳುತ್ತಾನೆ. ಗ್ರಂಧಾವತಾರದಲ್ಲಿ ವಿರೂಪಾಕ್ಷಸ್ತುತಿಯೂ ಬಳಿಕ ಗಣೇಶ ಸರಸ್ವತಿಯರ ಸ್ತುತಿಯೂ ಇವೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ.- ಚಂದ್ರಮತಿ ಅಡಕೆಗೆ ಹರಣವ ತೊರೆವರು ಸತಿಯರು | ನುಡಿವರು ಸಕಲಬೋಧೆಗಳ | ಬಿಡದೆ ಲೋಭಗಳನು ಮೆರೆವರು ಅವಗುಣ | ಕಡೆಗಿನಿಂತಿಲ್ಲ ಚಂದ್ರಮತಿಗೆ || ಹರಿಶ್ಚಂದ್ರನ ಉಕ್ತಿ ಹೆತ್ತ ತಾಯನು ಮಾರ ತೊತ್ತ ಕೊಂಬವನಂತೆ | ಮತ್ತಾದೇವಪೂಜೆಯನು | ಇತ್ತು ನಾಯನು ಕೊಂಬ ಗಾದೆಯಂದದಿ ಜೀಯ | ಸತ್ಯವ ಬಿಡಲೊಲ್ಲೆನೆಂದ || ಪೊಡವಿ ನುಂಗುವರೆ ಬಯಲು ಬಡಿವರೆ ಎ | ನ್ನೊಡಲೊಳಗುಂಬಶನವು | ಬಿಡದೆ ನಂಜಾಗಿ ಮುನಿಯೆ ಇನ್ನು ಲೋಕದಿ | ತಡೆವವರಾರು ಹೇಳೆಂದ || ಬಚ್ಚಲುದಕ ತಿಳಿದಿರಲು ಮಜ್ಜನವುಂಟೆ | ಅಚ್ಚರಿನಾಯ ಹಾಲುಗಳು | ನಿಶ್ಚಯವಾದ ಊಟಕೆ ನಿಮ್ಮ ಯೌವನ | ಮಚ್ಚೇನು ಇನಕುಲಜರಿಗೆ || --- 1. ಈ ನಾಲ್ಕು ಪದ್ಯಗಳಿಗೂ ಆಕರ ಹೇಳಿಲ್ಲ.