ಈ ಪುಟವನ್ನು ಪರಿಶೀಲಿಸಲಾಗಿಲ್ಲ.

236 ಕರ್ಣಾಟಕ ಕವಿಚರಿತೆ. [16 ನೆಯ

ನೆತ್ತಿಸಿದನೋ ಸೂರ್‍ಯ ಶೌರ್‍ಯಕ್ಕೆ ಮೂಗುತಿಯ | ಮುತ್ತೊ ಪೂರ್ವಾ೦ಗನೆಯ ಬೆಳಗೆಂಬ ಬಳ್ಳಿ ಚೆಂದಳಿರಿಡಿದು ಬೆಳ್ಳರಲನು || ಪೆತ್ತಿರವೊ ಗಗನಗಣಪನ ದಂತವೋ ಭಾನು | ಕತ್ತಲೆಯ ನೆತ್ತಿಯಂ ಕುತ್ತಲೆಂದೆತ್ತಿದರಿ | ಗತ್ತಿಯೊಪ್ಪುವ ಬಜ್ಜರದ ಗಾಜೆಯೋ ಎನಲ್ ರವಿಯುದಯ ಕಣ್ಗೆಸೆದುದು ||

                               ವನ

ಚೆಲುವಿಕೆಯ ಚೇತನ ಸುನಾದದ | ನಿಲಯ ಕಂಪಿನ ತಾನ ಕಂತಿನ | ಕಲೆ ಸವಿಯ ಸಾಮ್ರಾಜ್ಯ ಮೋಹಿಗಳಱಿಕೆಯಾಸ್ಥಾನ || ಅಲರುಸರನಾಡುಂಬೊಲಂ ಖಗ | ಕುಲದ ಕಡವರ ಸುಖದ ಸುಧೆ ತಂ | ಬೆಲರ ತವರೆಂದೆನಿಸಿ ರಾರಾಜಿಸುವುದಾವನವು || ಪರಪುಟ್ಟಂಗಳ ಬಳಗಂ ಚೂತಾಂ | ಕುರಶಾಖೆಯೊಳಿಟ್ಟಣಿಸಿಹುವಳಿಗಳ | ನೆರವಿ ಸುಪುಷ್ಟಿತಶಾಖೆಯೊಳೊತ್ತರಿಸಿಹುವರಗಿಳಿಕುಳವು || ಪರಿಪಕ್ವಿತಫಳಶಾಖೆಯೊಳಂ ಕಿ | ಕ್ಕಿಱಿಗಿಱಿದಾಡುತ್ತಿರ್ಪುವೆನಲ್ಕೈ | ಸಿರಿಸೈರಣೆಯುಳ್ಳರನಾಶ್ರಯಿಸಿರರಾರೀಧಾತ್ರಿಯಲಿ ||

                               ನೀತಿ

ಆವನಲ್ಲಿ ವಿಷಯವಿಕಳ | ವಾವನಲ್ಲಿ ಕೋಪತಾಪ | ವಾವನಲ್ಲಿ ಲೋಭಲಾಭ ಮಮತೆಯಂಡಲೆ || ಆವನಲ್ಲಿ ಮದದ ಮಸಕ | ವಾನನಲ್ಲಿ ಮಚ್ಚರಂಗ | ಳಾವರಿಸುವುದಿಲ್ಲವಲ್ಲಿ ಸುಗತಿ ಭೂಪತಿ ||

                       ಮಹಾದೇವಿಯಕ್ಕನ ಸೌಂದರ್‍ಯ

ಇಂದೀವರಾಕ್ಷಿ ಚಂಪಕನಾಸಿಕದ ಚದುರೆ | ಕುಂದಕುಟ್ಮಲರದನೆ ಕುಮುದಕೋರಕಸುಕುಚೆ | ಮಾಂದಳಿರ್ದುಟಿಯ ಮಾನಿನಿ ಮಲ್ಲಿಕಾಸ್ಮಿತೆ ಶಿರೀಷಸ್ರಗ್ಬಾಹುಯುಗಳೆ || ಅಂದವಟ್ಟಿಹ ಕೇತಕೀನಖಮಯೂಖೆಯರ | ವಿಂದಮುಖಿ ಮಹದೇವಿಯೊಪ್ಪಿದಳ್ ಧಾತ್ರಿಯೊಳ್ | ಕಂದರ್ಪನಂಬುಗಳಿನಂಬುರುಹಭವ ಚೆಲ್ವಪೆಣ್ಗೈದನೆಂಬಂದದಿ || ನವಕಾಂತಿ ರಸ ಮಂದಹಾಸ ಬೆಳ್ನೊರೆ ಲಸ |