ಈ ಪುಟವನ್ನು ಪರಿಶೀಲಿಸಲಾಗಿಲ್ಲ.
$40 ಕರ್ಣಾಟಕ ಕವಿಚರಿತೆ. [16 ನೆಯ
ಗ್ರಂಥಾವತಾರದಲ್ಲಿ ಚೆನ್ನಿಗರಾಯನ ಸ್ತುತಿ ಇದೆ. ಈ ಗ್ರಂಥದಿಂದ ನರೆದಲೆಗನಿಗೂ ವ್ರೀಹಿಗೂ ನಡೆದ ವಾಗ್ವಾದರೂಪವಾದ ಕೆಲವು ಪದ್ಯಗಳನ್ನು ತೆಗೆದುಬರೆಯುತ್ತೇವೆ-
ವ್ರೀಹಿಯ ಮಾತು ಕ್ಷಿತಿಯಮರರುಪನಯನದಲಿ ಸು | ವ್ರತಸುಭೋಜನಗಳಲ ಮಂತ್ರಾ | ಕ್ಷತೆಗಳಲಿ ಶುಭಶೋಭನದಲಾರತಿಯ ಬೆಳಗುವಲಿ || ಕ್ರತುಗಳೆಡೆಯೊಳಗರಮನೆಗಳಲಿ | ಪ್ರತಿದಿನವು ರಂಜಿಸುತ ದೇವರಿ | ಗತಿಶಯದ ನೈವೇದ್ಯವಾಗಿಹೆನೆಂದನಾವ್ರಿಹಿಗ || ಜನಪರಿಗೆ ಶಿಶುಗಳಿಗೆ ಬಾಂಧವ | ಜನರೆಡೆಗೆ ಬ್ರಾಹ್ಮರ ಸಮಾರಾ | ಧನೆಗೆ ವಿದ್ಯಾರಂಭಕಲಿಸುವ ಸಕಲಭೂಸುರರ || ಮನೆಗಳಲಿ ಹರಿದಿವಸದೌಪಾ | ಸನಗಳಲಿ ತಾ ಯೋಗ್ಯ ನಹುದೆ೦| ದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೊಲಗೆಂದ || ಹೊಸಮನೆಯ ಪುಣ್ಯಾರ್ಚನೆಗೆ . | ... ಹಸುಮಕ್ಕಳಿಗೆ ಸೇಸೆಗೆ | ವಸುಮತೀಶರ ಗರುಡಿಯಲಿ ಶಸ್ತ್ರಾಸ್ತದರ್ಚನೆಗೆ || ಎಸೆವ ವಿಪ್ರರ ಫಾಲದಲಿ ರ೦ | ಜಿಸುತ ಗಂಧಾಕ್ಷತೆಯಹೆನು ಭಾ | ವಿಸಲು ಲೋಕದೊಳಾರು ಸರಿ ತನಗೆಂದನಾವ್ರಿಹಿಗ ||
ನರೆದಲೆಗನ ಮಾತು ಸತ್ವಹೀನರ ಒಡವರನು ಕ | ಣ್ಣೆತ್ತಿ ನೋಡೆ ಧನಾಢ್ಯರನು ಬೆಂ | ಬತ್ತಿ ನಡೆವೆಯುಪೇಕ್ಷೆ ನಿನ್ನದು ಪೇಳೇಲೇನದನು || ಹೆತ್ತ ಬಾಣತಿಯರಿಗೆ ರೋಗಿಗೆ | ಪಧ್ಯಪಾನದಿ ಹೆಣದ ಬಾಯಿಗೆ | ತುತ್ತು ನೀನುಹೆ ನಿನ್ನ ಜನ್ಮ ನಿರರ್ಧಕರವೆಂದ || ಮಳೆದೆಗೆದು ಬೆಳೆಯಡಗಿ ಕ್ಷಾಮದ | ವಿಳಯಕಾಲದೊಳನ್ನವಿಲ್ಲದೆ | ಯಳುವ ಪ್ರಾಣಿಗಳಾದರಿಸಿ ಸಲಹುವೆನು ಜಗವಳೆಯ || ಎಲವೊ ನೀನೆಲ್ಲಿಹೆಯೊ ನಿನ್ನಯ | ಬಳಗವದು ತಾನೆಲ್ಲಿಹುದೊ ಈ | ಹಲವುಧಾನ್ಯಗಳೆನಗೆ ಸರಿಯಲ್ಲೆಂದ ನರೆದಲೆಗ || ಸತ್ತವರ ಪ್ರತಿಬಿಂಬರೂಪನು | ವಿಸ್ತರಿಸಿ ಪಿತೃನಾಮಗಳ ನಿನ | ಗಿತ್ತು ಮೂವರ ಪೆಸರಿನಲಿ ಕರೆಕರೆದು ದರ್ಭೆಯಲಿ ||