ಈ ಪುಟವನ್ನು ಪರಿಶೀಲಿಸಲಾಗಿಲ್ಲ.
242 [18ನೆಯ
ಕರ್ಣಾಟಕ ಕವಿಚರಿತೆ. ಸಾವಿಗೆಣಿಸರು ಮನದಿ ಸತ್ಯವ | ಭಾವಿಸರು ಹುಸಿಯೆಲುಪುದೋರುವ | ರಾವಪರಿಯಲಿ ಹೃದಯಗೊಡರನೃತಗಳನಾಡುವರು || ವಾವಿವರ್ತನವಿಲ್ಲ ಸತ್ಯಕೆ | ಪಾವಕನ ಮುಟ್ಟುವರು ಸತಿಯರ | ನಾವಪರಿಯಲಿ ನಂಬಬಹುದೈಯೆನುತ ಹೂವ೦ಟ ||
4 ಹರಿಭಕ್ತಿಸಾರ ಇದು ಭಾಮಿನೀಪಟ್ಟದಿಯಲ್ಲಿ ಬರೆದಿದೆ; ಪದ್ಯ 110. ಪ್ರತಿಪದ್ಯವೂ ರಕ್ಷಿಸು ನಮ್ಮನನವರತ' ಎಂದು ಮುಗಿಯುತ್ತದೆ. ಇದು ನೀತಿ, ಭಕ್ತಿ, ವೈರಾಗ್ಯ ಇವುಗಳನ್ನು ಬೋಧಿಸುವ ಗ್ರಂಥ. ಬಾಲ್ಯಪಾಠಕ್ಕೆ ಇದನ್ನು ಉಪಯೋಗಿಸುವ ವಾಡಿಕೆ ನಮ್ಮಲ್ಲಿ ಪೂರ್ವದಿಂದಲೂ ಇದೆ. ಈ ಗ್ರಂಥವನ್ನು ಶ್ರೀಪುರದ ಆದಿಕೇಶವಮೂರ್ತಿಗೆ ಅಂಕಿತವಾಗಿ ಕವಿ ಬರೆದಿದ್ದಾನೆ. ಗ್ರಂಥಾವತಾರದಲ್ಲಿ ಸುರಪುರನಿಲಯ ಚೆನ್ನಿಗರಾಯನ ಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ- ದೀನ ನಾನು ಸಮಸ್ತಲೋಕಕೆ | ದಾನಿ ನೀನು ವಿಚಾರಿಸಲು ಮತಿ | ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು || ಏನ ಬಲ್ಲೆನು ನಾನು ನೆವ ಸು | ಜ್ಞಾನಮೂರುತಿ ನೀನು ನಿನ್ನ ಸ | ಮಾನರುಂಟೇ ದೇವ ರಕ್ಷಿಸು ನಮ್ಮನನವರತ || ಪೇಬಿ ಲೆನ್ನಳವಲ್ಲವೀಯಮ | ನಾಳುಗಳು ನೆಯಂಗದೇಶವ | ಧಾಮಾಡುವರಕಟಕಟ ಸೆವಸೂಗಳ ಹಿಡಿದು || ಕಾಟುಮಾಡುವರಿನ್ನು ತನುವಿದು | ಬಾಟಿಲರಿಯದು ಕೋಟೆಯವರಿಗೆ | ಕೋಳುಹೋಗದಮುನ್ನ ರಕ್ಷಿಸು ನಮ್ಮನನವರತ || ಎತ್ತಿದೆನು ನಾನಾಶರೀರವ | ಹೊತ್ತು ಹೊತ್ತಲಸಿದೆನು ಸಲೆ ಬೇ | ಸತ್ತು ನಿನ್ನಯ ಪದವ ಕಾಣದೆ ತೋಟಲಿ ಒಟಲಿದೆನು || ಸತ್ತು ಹುಟ್ಟುವ ಹುಟ್ಟಿ ಹಿಂಗುವ | ಸುತ್ತು ತೊಡಕನು ಮಾಣಿಸೆಲೆ ಪುರು | ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ | ಎಂಜಲೆಂಜಲು ಎಂಬರಾನುಡಿ | ಎಂಜಲಲ್ಲವೆ ವಾರಿ ಜಲಚರ | ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೇ || ಎಂಜಲೆಲ್ಲಯದೆಲ್ಲಿಯುಂ ಪರ | ರೆಂಜಲಲ್ಲದೆ ಬೇಳ ಭಾವಿಸ ||