ಶತಮಾನ.] ಸಾಳ್ವ. 249
ಈ ಗ್ರಂಥನಾಮವನ್ನು ಹೀಗೆ ವಿವರಿಸುತ್ತಾನೆ--- ಈಕೃತಿ ಕವಿಕೃತನುತಕವಿ | ತಾಕಾಂತೆಗೆ ತಾನೆ ನವರಸಂ ಸಲೆ ರಸರ | ತ್ನಾ ಕರಂ - ಈ ಗ್ರಂಥದಿಂದ ಕೆಲವು ಭಾಗಗಳನ್ನು ಉದ್ಧರಿಸಿ ಬರೆಯುತ್ತೇವೆ.--- ಚಕ್ಷುಃಪ್ರೀತಿಯದಿನಿಯನ ನೀಕ್ಷಿಪುದುಳೆ ನೆನೆವುದೇ ಮನಸ್ಸಂಗಂ ಲೋ | ಲಾಕ್ಷಿ ಮನದಲ್ಲಿ ಸಂಕ | ಲ್ವಾಕ್ಷೇಪದೆ ನೆನೆವುದದುವೆ ಸಂಕಲ್ಪಾಖ್ಯಂ || ನೆನೆದೊಳಗದದುವೆ ಜಾಗರ| ಮಿನಿಯನನು ಳೆ ಬಯಸಿ ಬಡಬಡಾಗಿರೆ ಕಾಶ್ಯ೯೦ | ವನಿತೆ ವಿಷಯಕ್ಕೆ ಮೈಗುಡ | ದನುವರತಿಯೆ ಲಜ್ಜೆ ವಿರಹವಳುದುದೆ ಮಾನಂ | ಮೈನವಿರುಬ್ಬಿದುದೆ ಪುಳಕಂ, ಕಣ್ಬನಿ ತೋಳುದುದೆ ಅಶ್ರು; ಬೆಮರ್ತುದೆ ಸ್ವೇದಂ; ಮರವಟ್ಟುದೆ ಸ್ತಂಭಂ; ಮೈಮಳೆದುದೆ ಲಯಂ; ಧ್ವನಿಪಲ್ಲಟಮೆ ಸ್ವರಭೇದಂ; ನಡು ಗುವುದೆ ಕಂಪಂ, ಮತ್ತೊಂದುಬಣ್ಣ ಮಾದುದೆ ವೈವಣ್ರ್ಯ೯೦ ಭಯದೆ ಭಯಾನಕರಸಮಾ | ರಯೆ ರಿಪುಸರ್ಪಾದಿ ಪೆಂಪಿನಾಲಂಬನಮಾ | ಭಯ ಹೇತು ಗರ್ಜಿ ತಾ ದಿಯೆ | ನಯನೋದ್ದೀಪನವಿಭಾವಮಾರಸಕಕ್ಕುಂ | ಎರಡುಂ ವಿರುದ್ಧ ರಸಮೊಡ | ವೆರಸಿರೆ ತದನಂತರಸ್ಥ ಮೆಂದನ್ಯರಸಂ ! ಪರಿಪುಷ್ಟವಾಗೆಯುಂ ವ್ಯಧಿಕರಣದೆ ಮೇಣ' ಸಮಮುಮಾಗೆಯುಂನಿರ್ದೋಷಂ||
3. ಶಾರದಾವಿಲಾಸ ಇದು ಕಾವ್ಯಕ್ಕೆ ಜೀವವೆಂದು ಹೇಳುವ ಧ್ವನಿಯನ್ನು ಪ್ರತಿಪಾದಿಸು ತ್ತದೆ. ಕನ್ನಡದಲ್ಲಿ ಧ್ವನಿವಿಪಯಕವಾದ ಗ್ರಂಥವು ನಮಗೆ ತಿಳಿದಮಟ್ಟಿಗೆ ಇದೊಂದೇ ಎಂದು ತೋರುತ್ತದೆ. ಈ ಗ್ರಂಧದ ಧ್ವನಿವ್ಯಂಗ್ಯವಿವರಣ ವೆಂಬ 2 ನೆಯ ಆಶ್ವಾಸವು ಮಾತ್ರ ನಮಗೆ ದೊರೆತಿದೆ. ಈ ಭಾಗದಲ್ಲಿ ಉದಾಹೃತವಾದ ಪದ್ಯಗಳಲ್ಲಿ “ಸಾಳ್ವಮಲ್ಲಭೂವರವರಕೀರ್ತಿಯಂ ಪದೆದು ಪಾಡುವ”, “ನಿರುಪಮಸಾಳುವನಲ್ಲನ ವರಗುಣಮಂ ಪೊಗಳ್ಳನೆಂಬ ನಾವಂ”, ವರಸಾಳ್ವಮಲ್ಲನಿಂ ಸಂಗರದೊಳ್ ಜಯಲಕ್ಷ್ಮ್ಯ
ಚಾರುತರ ವಸದಿಂ ಸ್ವೀಕರಿಸಲ್ಪಟ್ಟಳ್, “ಸಾಳುವಮಲ್ಲಕರಸ್ಥಿ ತಂ ನಿಶಿತಕರಾಳಖಡ್ಗ ವೆಸೆದತ್ತತಿವೀರರ ಕಣ್ಗೆ ಯುದ್ಧ ದೋಳ್ ಮುಪ್ಪೂಳಿಲ್ಗೆ ಮುಳಿದೀಶನ ಕೇಕರ ಕಾಂತಿ ನೀಳ್ದವೋಲ್" ಎಂದು ದೊರೆವುದರಿಂದ ಈ ಗ್ರಂಥವನ್ನು ಸಾಲ್ಯ ಕವಿ ತನ್ನ ಪೋಷಕನಾದ ಸಾಳ್ವ ಕವಿ ತನ್ನ ಷೋಷಕನಾದ ಸಾಳ್ವ ಮಲ್ಲರಾಜನ ಖ್ಯಾತಿಗೋಸ್ಕರ ಬರೆದಂತೆ ಕಾಣುತ್ತದೆ. ಪ್ರಥಮಾಶ್ವಾಸವು ದೊರೆತಿದ್ದರೆ ಕವಿಯ ವಿಷಯವೂ ಅವನ 32