ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ]. ದೊಡ್ಡಯ್ಯ. 251

                                          ಆನಂದಭೈರವೀರಸ 
ವರಜಾಯಿಕಾಯಿ ಸೈಂಧವಮಿಂಗಿಲಿಕ ಶುoಯಿ |  ಮರಿಚ ಲವಂಗವು ನಾಭಿ|
ಉಳುವ ಕನಕಬೀಜ ಹಿಪ್ಪಲಿ ಸಮಭಾಗ| ಕರಿಯ ದುತ್ತೂರದ  ರಸದಿ  ||

ಅರೆವುದು ಮೂರುದಿವಸ ಗುಂಜಿಗಾತ್ರಕ್ಕೆ| ನಳೆ ಗುಳಿಗೆಯನು ಕಟ್ಟುವುದು| ಪರಿವಿಡಿಯಿಂದೆಯಾನಂದಭೈರವಿಯೆಂಬ|| ಉಳುವ ಪೆಸರ ಪಡೆದಿಹುದು||

                                    ಇದರ್ಕ ಅನುಪಾನಂ                    

ಇಂತು ಕಂಗೊಳಿಸುವಾನಂದಭೈರವಿಯನು'ಸಂತಸದಿಂ ತ್ರಿಕಟುಕದಿ| ಚಿಂತೆಯ ಬಿಟ್ಟುಕೊಳ್ಳಲು ವಾತವೆಂಭತ್ತು| ಭ್ರಾಂತುವೆತ್ತಿರದೋಡುವುವು|| ಸಲೆ ಮೂಲಸಹಿಶ ಹೂಲಿಯರಸದಿಂ ಕೊಳ್ಳೆ ತೊಲಗುರುಂ ಶ್ಲೇಷ್ಮದೋಷಗಳು| ನೆಲೆಗೊಂಡ ಶೂಲೆಗೆ ಗದುಗಿನ ತಿರುಳಿ೦ದ|ಸಲೆ ಕೊಳ್ಳೆ ಕೆಟ್ಟು ಹೋಗುವುದು|| ಎಲವದ ಹಗಿನದೊಳಜಮೋದದಿಂ ಕೊಳ್ಳೆ | ನೆಲೆಗೆಡುವುವು ಗ್ರಹಣಿಗಳು| ಸಲೆ ಜಾಯಿಕಾಯಿಬೇರಗೆದಧಿಯಿಂ ಕೊಳ್ಳೆ| ಯಳವುಗೆಡುವುದತಿಸಾರ ||

                                                         - - -
                                                 ದೊಡ್ಡಯ್ಯ ಸು. 1550                 

ಈತನು ಚಂದ್ರಪ್ರಭಚರಿತೆಯನ್ನು ಬರೆದಿದ್ದಾನೆ. ಇವನು ಜೈನ

ಕವಿ; ಆತ್ರೇಯಗೋತ್ರದವನು, ಇವನ ಗುರು ಪಂಡಿತಮುನಿ;        ತಂದೆ 

ಹೊಯ್ಸಳದೇಶದ ಚಂಗನಾಡೊಳಗಣ ಪಿರಿಯರಾಜಪುರ (ಪಿರಿಯಪಟ್ಟಣ) ಎಂಬ ರಾಜಧಾನಿಯಲ್ಲಿ ಆಳುತ್ತಿದ್ದ ಯದುಕುಲತಿಲಕ ವಿರುಪರಾಜೇಂದ್ರನ ಕರಣಿಕತಿಲಕನೂ ಜಿನಪುರಾಣಕಥಾಗಮನಿಪುಣನೂ ಆದ ದೇವಪ್ಪ. ಈ ದೊರೆಯನ್ನು ಕವಿ ವಿಶೇಷವಾಗಿ ಸ್ತುತಿಸಿದ್ದಾನೆ; ಜೈನಬ್ರಾಹ್ಮಣನಾದ ಪಂ ಡಿತಸಚವೇಂದ್ರನ ಮಗ ಬೊಮ್ಮರಸನು ಇವನಲ್ಲಿ ಪ್ರಧಾನಿಯಾಗಿದ್ದಂತೆ ತಿಳಿಯುತ್ತದೆ. ಪೂರ್ವಕವಿಗಳಲ್ಲಿ ಮಧುರನನ್ನು (ಸು.1385) ಸ್ಮರಿಸಿ

'ರುವುದರಿಂದ ಕವಿ ಅವನಿಗಿಂತ ಈಚೆಯವನೆಂಬುದು ಸ್ಪಷ್ಟವಾಗಿದೆ;ಸು

ಮಾರು 1550 ರಲ್ಲಿ ಇದ್ದಿ ರಬಹುದೆಂದು ಊಹಿಸುತ್ತೇವೆ.

      ಪೂರ್ವಕವಿಗಳನ್ನೂ ತತ್ಕೃತಗ್ರಂಥಗಳನ್ನೂ ಈ ಪದ್ಯಗಳಲ್ಲಿ  

ತಿಳಿಸಿದ್ದಾನೆ---

ಪ್ರಧಮಜಿನೇಂದ್ರ ಪುರಾಣವನುಸಿರಿದ|ಸೃಧುಕವಿ ಪಂಪರಾಜನನು| 

ಪೃಧಿಯೊಳಜಿತಜಿನರ ಚರಿತವ ಪೇಳ್ದ|ಪ್ರಧಿತರನ್ನನ ನುತಿಸುವೆನು ||