ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಸಿರಿನಾಮಧೇಯ. 257
ಳಿಕೊಂಡಿದ್ದಾನೆ. ನಮಗೆ ದೊರೆತ ಇವನ ಗ್ರಂಥದ ಪ್ರತಿ 1604ರಲ್ಲಿ ಬರೆದುದಾದುದರಿಂದ ಕವಿಯ ಕಾಲವು ಸುಮಾರು 1550 ಆಗಬಹುದೆಂದು ತೋರುತ್ತದೆ,
ಇವನ ಗ್ರಂಥ ಚೋಳರಾಜಸಾಂಗತ್ಯ ಸಂಧಿ 3, ಪದ್ಯ 561. ಇದರ ಕಥಾಗರ್ಭವು ಈ ಪದ್ಯದಲ್ಲಿ ಹೇಳಿದೆ' ಜಡೆದಲೆಯನು ಕಂಡು ಮುಡಿದಲೆಯನು ಕೊಟ್ಟ | ಕಡುಗಲಿ ಚೋಳನೃಪಾಲ | ಮೃಡಪದವಿಯ ನೆರೆ ಪಡೆದ ಕಥೆಯನು | ಪೊಡವಿಯರಿಯಲುಸಿರುವೆನು || ತನ್ನ ಗ್ರಂಥದ ಉತ್ಕೃಷ್ಟತೆಯನ್ನು ಹೀಗೆ ಹೇಳಿದ್ದಾನೆ_ ತಂಗಾಳಿಯ ತಂಪಿನವೊಲು ಮೋಹನ | ಸಿಂಗಾರವೆಣ್ಣಿನಂದದಲಿ | ಲಿಂಗನ ಕೃತಿ ರಂಜಿಸುವುದು.
ಸವಿನುಡಿಗಳ ಸೊಂಪು ನವರಸಗಳ ಗುಂಪು | ಶಿವಕವಿಗಳ ಮನದಿಂಪು | ಭುವನಜನರ ಹೆಂಪು ಲಿಂಗನ ಕೃತಿ.
ಈ ಗ್ರಂಥದಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ_ ನದಿ
ಕುಡಿತೆಗೆ ಬಂದುದು ಮುನಿಯ ಕರಕೆ ಪೊಗೆ | ಲುಡೆವರಮಾದುದಸುರಗೆ | ತೊಡವಾದುದು ರಾಮನ ಸರಕೆನುತುರೆ | ಕಡಲ ನಗುವುದಾನದಿಯು ||
__________
ಸಿರಿನಾಮಧೇಯ ಸು. 1550 ಈತನು ಮಲ್ಲೇಶ್ವರಶತಕವನ್ನು ಬರೆದಿದ್ದಾನೆ. ಇವನು ವೀರಶೈವಕವಿ ; ತೋಂಟದಸಿದ್ಧಲಿಂಗನನ್ನು (ಸು. 1470) ಸ್ತುತಿಸುವುದರಿಂದ ಆತನಿಗಿಂತ ಈಚೆಯವನು ಎಂಬುದು ವ್ಯಕ್ತವಾಗಿದೆ; ಸುಮಾರು 1550 ರಲ್ಲಿ ಇದ್ದಿರಬಹುದು. ಗ್ರಂಥಾಂತ್ಯಗದ್ಯದಲ್ಲಿ “ಸಿರಿನಾಮಧೇಯ ವೀರ ಮಾಹೇಶ್ವರ” ಎಂದು ತನ್ನನ್ನು ವಿಶೇಪಿಸಿ ಹೇಳಿಕೊಂಡಿದ್ದಾನೆ. ಇವನ ಗ್ರಂಥ ಮಲ್ಲೇಶ್ವರಶತಕ
ಇದರಲ್ಲಿ 111 ವೃತ್ತಗಳಿವೆ. ಇವು ಪ್ರಾಯಿಕವಾಗಿ ಶ್ರೀಶೈಲಮಲ್ಲೇ 33