ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶತಮಾನ] ರತ್ನಾಕರವರ್ಣಿ. 278 ನಿದ್ದಾನೆ. ಸಂಧಿಗಳ ಆದಿಯಲ್ಲಿ ನಿರಂಜನಸಿದ್ಧ ಎಂಬ ಅಂಕಿತವೂ ಅಂತ್ಯ ದಲ್ಲಿ ಅಪರಾಜಿತೇಶ್ವರಮಂದರಸ್ವಾಮಿಗಳ ಸ್ತುತಿಯೂ ಚಿದಂಬರಪುರುಷ ಎಂಬ ಅಂಕಿತವೂ ಇವೆ. ಕಾವ್ಯಗಳಲ್ಲಿ ಓದುಗಬ್ಬ, ಹಾಡುಗಬ್ಬ ಎಂದು ಎರಡು ಬಗೆ, ಅವುಗಳಲ್ಲಿ ಹಾ ಡುಗಬ್ಬಕ್ಕೆ ಚಿಟಿಕುಳ ಮುಂತಾದ ನಿಯಮಗಳು ಬೇಕಿಲ್ಲವೆಂದೂ, ಶೃಂಗಾರಕಾಗಿ ಕಷ್ಟರ ಕಧೆಗೇಳ್ದು ಜ | ನಂಗಳು ಕೆಡಬೇಡವೆಂದು || ಅಂಗಸುಖಿಯ ಮೋಕ್ಷ ಸುಖಿಯ ಕಾವ್ಯ ವನಿಷ್ಟು | ಶೃಂಗಾರದಲ್ಲಿ ಹೇಟುದೆನು || ಎಂದೂ ಕವಿ ಹೇಳುತ್ತಾನೆ ಈ ಗ್ರಂಧದಲ್ಲಿ ತತ್ವೋಪದೇಶ ಪ್ರಸ್ತಾವದಲ್ಲಿ ಕೆಲವು ಜೈನಗ್ರಂಧಗಳ ಹೆಸರುಗಳು ಹೇಳಿವೆ. ಇವೆಲ್ಲಾ ಪ್ರಾಯಿಕವಾಗಿ ತಿಳಿದುವುಗಳೇI ಈ ಗ್ರಂಥವು ಬಹಳದೊಡ್ಡದು; 9 ತಿಂಗಳಲ್ಲಿ ಇದನ್ನು ಪೂರೈಸಿದ ಕವಿಯ ಶಕ್ತಿ ಶ್ಲಾಘಿಸತಕ್ಕುದಾಗಿದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ

                            ನರ್ತನ 

ನೋಟದೊಳಗೆ ಕೊಂದರೊಮ್ಮೆ ನೋಟಕರನು | ನಾಟಿಸಿ ನಸುನಗೆಯಿಂದ | ಲೂಟಿಮಾಡಿದರು ಮೈಯೊಲೆದಾಟದಿಂದೆದೆ | ಗೋಟೆಯ ಕೊಂಡರೇನೆಂಬೆ || ಸುಖದು ಸುತ್ತುವಳು ನಾಟ್ಯದೊಳು ಸಮ್ಮೋಹನ ಒಳಿಧಿಯಸುಟಿಯೋ ಎಂಬಂತೆ! ಬಲಕೆಡಕೊಲೆದು ಹರಿವಳೆಳವಿಸಿಲಲ್ಲಿ | ಯೆಳನಾಗ ಹರಿವಂತೆ ಮುಯಿದು ||

                             ಸಂಗೀತ

ಒಳಗುಟ್ಕದಾನಂದರಸ ತನ್ನ ತನುತುಂಬಿ | ತುಳುಕಿ ಹೊಡಿಗೆ ಸೂಸುವಂತೆ | ತೆಳುವಸು ವಿಂದ ಬಾಯ್ಕೆಯೊಳು ಸುಸ್ವರ ( ಹೊಳೆದು ಮೋಹಿಸುತಿದ್ದುದಾಗ|| 1. ಕುಂಡಕುಂದಾಚಾರಕೃತ ಪ್ರಾಭ್ರತ, ಅನುಪೇಕ್ಷೆ; ಅಮೃತಚಂದ್ರ ಸೂರಿ ಕೃತ ಸಮಯಸಾರಾಂಕನಾಟಕ; ಪ್ರಭಾಕರಭಟ್ಟಕೃತ ಕಧೆ; ಪದ್ಮನಂದಿಕೃತ ಸ್ವರೂಪ ಸಂಬೋಧನೆ, ಪೂಜ್ಯಪಾದಕೃತಸಮಾಧಿಶತಕ; ಜ್ಞಾನವರ್ಣನೆ, ಯೋಗರತ್ನಾಕರ, ಸುಕಲಾನಿಧಿ, ರತ್ನ ಪರೀಕ್ಷೆ, ಆರಾಧನಸಾರ, ಸಿದ್ದಾಂತಸಾರ, ಇಷ್ಟೊಪದೇಶ, ಅಧ್ಯಾತ್ಮ 'ನಾಟಕ, ಅಷ್ಟ ಸಹಸ್ರಿ, ನಿಯಮಸಾರ, ಅಧ್ಯಾತ್ಮಸಾೆರ, ಅಲ್ಲದೆ-ನೆರಪಿ ಹೊತ್ತಗೆ ಗಳ ಹೊಳೆಗಟ್ಟಿ ಭವಸೇನ | ಗುರುಗಳಂತವರಾಡುತಿಹರು | ಎಂಬ ಪದ್ಯಭಾಗದಲ್ಲಿ ಸುಮ್ಮನೆ ಪುಸ್ತಕಗಳನ್ನು ಶೇಖರಿಸಿದ್ದ ಒಬ್ಬ ಭವಸೇನಗುರುವನ್ನು ಹೇಳುತ್ತಾನ.