ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 2 ಕರ್ಣಾಟಕ ಕವಿಚರಿತೆ. F16 ನೆಯ

ಕತಕತ್ರಯಟೀಕೆ ಈ ಗ್ರಂಥಗಳನ್ನು ಬರೆದಿದ್ದಾನೆ.ತನ್ನ ಪಾಲ್ಕುರಿಕೆ ಸೋ ಮೇಶ್ವರಪುರಾಣದಲ್ಲಿ ಚಿದಾನಂದಸಿಂಧು ಎಂಬ ಚಂಪೂಗ್ರಂಥವನ್ನೂ ಬರೆ ದಂತೆ ಹೇಳುತ್ತಾನೆ. ಇದು ನಮಗೆ ದೊರೆತಿಲ್ಲ. ಈತನು ಸಿದ್ದಲಿಂಗೇಶ್ವರ ಶತಕ, ಪಾಲ್ಕುರಿಕೆಸೋಮನಾಥನ ಪಂಚಗದ್ಯಗಳ ಟೀಕೆ ಇವುಗಳನ್ನೂ ಬರೆದಿರುವುದಾಗಿ ಹೇಳುತ್ತಾರೆ.
     ಇವನು ವೀರಶೈವಕವಿ; ಬಿಜ್ಞಾ ವರಪುರಾಧೀಶ ತೋಂಟದನಿದ್ದಲಿಂಗ ಭೂಪಾಲಕನಿಂ ಪೂಜಿತನಾದ ಕಾವೇರೀಹೇಮಾವತಿಗಳ ಮಧ್ಯದೇಶಗೊ ಳಗಿರುವ ನಂದಿಯಪುರದ ಸಿಂಹಾಸನಾಧಿಪ ಚೆನ್ನನಂಜೇಶನ ಕರಜಾತ ನಾದ ಪರ್ವತೇಂದ್ರನ ಕರಜಾತನು; ಪಟ್ಸ್ಥಲಾಚಾ
ಬೋಳ ಬಸವೇಶ್ವರನ ಕರುಣದಿಂ ಪಟೂಲಬ್ರಹ್ಮಮಂ ತಿಳಿದ ಗುಳ್ಗ ಸಿದ್ದ ವೀ ರೇಶ್ವರನ ದಯಾವಾತನು, “ಗುರುನಿರಂಜನಲಿಂಗಪದಕಮಲ ಸೌರಭಾ ಸಕಪಟ್ಟದ, ಪಟ್ಟ ಲಾಚಾರಸಂಪನ್ನ, ಶೈವಪಂಚಾಕ್ಷರೀಮಂತ್ರಹೃದ ಯ, ಅಖಿಲಶಾಸ್ವಾರ್ಥಕೋವಿದ” ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂ ಡಿದ್ದಾನೆ, ಈತನಿಗೆ ತೋಂಟದನಿದ್ದ ಲಿಂಗದೇಶಿಕ ಎಂಬ ಹೆಸರೂ ಉಂಟು. ಇವನ ಗುರುವಿನ ಗುರುವಾದ ಬೋಳಬಸವನು ತೋಂಟದ ಸಿದ್ದಲಿಂಗನ (ಸು, 1470) ಶಿಷ್ಯನೆಂದು ತಿಳಿವುದರಿಂದ ಕವಿಯ ಕಾಲವು ಸುಮಾರು 1560 ಆಗಬಹುದು, ಇವನ ಎಲ್ಲಾ ಗ್ರಂಥಗಳಲ್ಲಿಯೂ ನಿರಂ ಜನಲಿಂಗ ಎಂಬ ಅಂಕಿತವು ಉಪಯೋಗಿಸಲ್ಪಟ್ಟಿದೆ.

ಪೂರ್ವಕವಿಗಳಲ್ಲಿ ಪಾಲ್ಕುರಿಕೆ ಸೋಮ, ಪದ್ಮರಸ, ಹರಿದೇವ, ಮಗ್ಗೆ ಯಮಾಯಿದೇವ, ಬಾಣ, ಕಾಳಿದಾಸ, ಮಳಯರಾಜ, ಭೋಜ ಇವ ರುಗಳನ್ನು ಸ್ಮರಿಸಿದ್ದಾನೆ ಇವನ ಗ್ರಂಥಗಳಲ್ಲಿ 1 ಸಿದ್ಧೇಶ್ವರಪುರಾಣ ಇದು ವಾರ್ಧಕವಟ್ರದಿಯಲ್ಲಿ ಬರೆದಿದೆ; ಸಂಧಿ 25, ಪದ್ಯ 1535. ಆ ದರಲ್ಲಿ “ನಿರಂಜನಗಣೇಶ್ವರನ ಅಪರಾವತಾರವಾದ” ತೋಂಟದಸಿದ್ದಲಿಂಗ ಯತಿಯ ಚರಿತವು' ವರ್ಣಿತವಾಗಿದೆ. ಈ ಗ್ರಂಥದ ಉತ್ಮ ಸ್ಮತೆಯನ್ನು 'ಕವಿ ಹೀಗೆ ನಿರೂಪಿಸಿದಾ ನೆ