ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಶಾಂತೇಶ. 297

    ಇವನ ಗ್ರಂಧ
                    ತೋಂಟದ ಸಿದ್ದೇಶ್ವರನ ಪುರಾಣ 
      ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ; ಸಂಧಿ 7, ಪದ್ಯ 000. ಇದರಲ್ಲಿ ತೋಂಟದಸಿದ್ದಲಿಂಗಯತಿಯ ಚರಿತವು ಹೇಳಿದೆ. ಈ ಯತಿ ಹರದನಹಳ್ಳಿಯ ಗೋಸಲ ಚೆನ್ನಬಸವೇಶ್ವರನ ಶಿಷ್ಯನು; ಶಿವಗಂಗೆಗೆ ಬಂದು ಕಗ್ಗೆರೆಯ ಸಮೀಪದಲ್ಲಿರುವ ನಾಗಿಣೀನದಿಯ ತೀರದಲ್ಲಿ ತೋಂಟದೊಳಗೆ ಶಿವಯೋಗದಲ್ಲಿದ್ದನು; ಶಿಷ್ಯನಾದ ಚಂದ್ರಶೇಖರನಿಗೆ ಭುವನಕೋಶ ಧರ್ಮಾಧರ್ಮವಿಚಾರ, ಶಿವನ ಪಂಚವಿಂಶತಿಲೀಲೆಗಳು, ಪಟ್ಸ ಲಕ್ರವ, ಮುಂತಾದ ವಿಷಯಗಳನ್ನು ಬೋಧಿಸಿದನು, ಚಂದ್ರಶೇಖರನು ತಾನು ಕೇಳಿದ ಬೋಧೆಯನ್ನು ಸಾಂಗವಾಗಿ ಕಾವ್ಯದಲ್ಲಿ ಹೇಳಬೇಕೆಂದು ಬೆಸಸಲು ಕವಿ ಅದೇಮೇರೆಗೆ ಬರೆದಂತೆ ಹೇಳುತ್ತಾನೆ.
          ಗ್ರಂಧಾವತಾರದಲ್ಲಿ “ಶಂಕರಗುರುಕುಲಾಂಬುಧಿಪೂರ್ಣಹಿಮಕರ” ನಾದ ಸಿದ್ದೇಶನ ಸ್ತುತಿ ಇದೆ, ಬಳಿಕ ಕವಿ ಶಿವ, ಪಾರ್ವತಿ, ಪ್ರಭುದೇವ, ಬಸವ, ಚೆನ್ನಬಸವ, ಷಣ್ಮುಖ, ವೀರಭದ್ರ,ಭೃಂಗಿ ಇವರುಗಳನ್ನು ಪರಿ ವಿಡಿಯಿಂದ ಸ್ತುತಿಸಿದ್ದಾನೆ. ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ
                                         
                                            ವಸಂತ 

ಶುಕಪಿಕಾಳಿಯ ರಾವ ಕರ್ಣಕೆ | ಸುಕರದಿಂ ತಂಗಾಳಿ ಗಾತ್ರಕೆ | ಸಕಲಮಂಜುಳದಾಮ್ರಪಲ್ಲವರಾಗ ನೇತ್ರಕ್ಕೆ || ಪ್ರಕಫಟಲರುಚಿ ಜಿಹ್ವೆಗಂ ನಾ | ಸಿಕಕೆ ಕುಸುಮಾಮೋದವೆಸೆಯಲ್ | ಮಕರಕೇತನಸಖನೆನಿಪ್ಪ ವಸಂತನೆಯ್ತಂದಂ ||

                                                     ವನ                            
ತಿಳಿಗೊಳಂಗಳ ನಡುವೆ ಮೂಡಿದ | ನಳಿನಕೈರವಕೆರಗಿ ಝಂಕರಿ | ಪಳಿಗಳಿಂದಂ ಜಕ್ಕವಕ್ಕಿಯ ತೆಕ್ಕೆಯಿಂ ಮತ್ತೆ || ಬಳಸಿ ತೋರುವ ಮಾಮರಂಗಳೊ | ಳೆಳಸಿ ಕೂಗುವ ಪಿಕನಿಕರದಿಂ | 

ಗಿಳಿಯ ಸವಿನುಡಿಯಿಂದ ವನವಂತಲ್ಲಿ ರಾಜಿಪುದು ||

                                             ಕೈಲಾಸ

ನೆಟ್ಟನಘಮಂ ಸುಟ್ಟ ಶರಣರ | ಕೊಟ್ಟ ದುರಿತಘರಟ್ಟ ಪುಣ್ಯದ | ದಟ್ಟ ಸುಖಮಂ ಬಿಟ್ಟ ಸುಜನ | ರ್ಗಟ್ಟ ಕರುವಿಟ್ಟ |

        38