800 ಕರ್ಣಾಟಕ ಕವಿಚರಿತ. [16ನೆಯ ತನುದೋಷಕೆ ವೈದ್ಯ ವಚನದೋಷಕೆ ಶಬ್ದ | ಮನದೋಷಕೆ ತತ್ವವನು | ಜನಕಲುಹಿದ ಶ್ರೀಪೂಜ್ಯಪಾದರ ಪಾದ | ವನಜಕ್ಕೆ ನಾನೆಅಗುವೆನು || ರಂಗಾಚಾರ್‍ಯ ಸು. 1570. ಈತನು ಶ್ರೀರಂಗಮಾಹಾತ್ಮ್ಯವನ್ನು ಬರೆದಿದ್ದಾನೆ. ಇವನು ಶ್ರೀವೈ ಷ್ಣವಕವಿ ; ಕೌಂಡಿನ್ಯಗೋತ್ರದವನು ; ಹೊಮ್ಮಗ್ರಾಮನಿವಾಸಿ ; ಕಂದಾ ಡೆಯಾಚಾರ್‍ಯನ ಶಿಷ್ಯನು ತಿರುಮಲಾಚಾರ್‍ಯನ ತಮ್ಮ, ಅಪ್ರಮೇಯದೇವರ ಭಕ್ತ. ನಮಗೆ ದೊರೆತ ಈ ಗ್ರಂಥದ ಪ್ರತಿ 1663ರಲ್ಲಿ ಬರೆದುದಾದುದ ರಿಂದ ಕವಿ ಸುಮಾರು 1570ರಲ್ಲಿ ಇದ್ದಿರಬಹುದೆಂದುಊಹಿಸುತ್ತೇವೆ. ಇವನ ಗ್ರಂಥ ಶ್ರೀರಂಗಮಾಹಾತ್ಮ್ಯ ಇದು ಗದ್ಯರೂಪವಾಗಿದೆ , ಪರಿಚ್ಛೇದ 10: ಗ್ರಂಥಾರಂಭದಲ್ಲಿ... ಸಕಲಪುರಾಣಸಾರಭೂತವಾದ ಮಹೇಶ್ವರನಾರದಸಂವಾದಮಾದ ಪನ್ನೆರ ಡುಸಾವಿರಸಂಹಿತೆಗಳುಳ್ಳ ಬ್ರಹ್ಮಾಂಡಪುರಾಣದಲ್ಲಿ ದಶಾಧ್ಯಾಯಪರಿಮಿತ ಮಾದ ಶ್ರೀರಂಗಮಾಹಾತ್ಮ್ಯ--ಎಂದಿದೆ. ಇದನ್ನು ಕವಿ “ ಸರ್ವಜನರ್ಗೆ ಸುಲಭಮಾಗಿ ತಿಳಿವಂತೆ ಕರ್ಣಾಟಕಭಾಷಾರಚನೆಯಿಂ” ನಿರೂಪಿಸಿದನು. ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ ಸ್ವಸ್ತಿ ಸಮಸ್ತವಿಬುಧನಿವಹಮೌಳಿರಚಿತನಾನಾವಿಧೋಪಲಪ್ರಭಾವ್ರಾತರಂಜಿತ ಪದಕಮಲನಿಹಿತಾ೦ತಃಕರಣೇನ ಅಪ್ರಮೇಯಕೃಪಾಕಟಾಕ್ಷ ವೀಕ್ಷಣ...ರಂಗನಾನು ಕೇನ ವಿರಚಿತಶ್ರೀರಂಗಮಾಹಾತ್ಮ್ಯಂ ಸಂಪೂಣ೯೦. -- - ಚನ್ನರಾಜ ಸು. 1570 ಇವನು ವೈದ್ಯಸಾರಸಂಗ್ರಹವನ್ನು ಬರೆದಿದ್ದಾನೆ. ಈತನು ಎ೪೦ ದೂರು (ಬಾಲಚಂದ್ರಪುರದ) ದೊರೆ; ಹದಿನಾಡುರಾಜರಲ್ಲಿ ಒಬ್ಬನು. ಇವನ ಕುಲದೈವವು ಎಳಂದೂರುಗೌರೀಶ್ವರ, ಇವನ ಕಾಲವು ಸುಮಾರು 1570 ಆಗುತ್ತದೆ. ಇವನ ಗ್ರಂಥ ವೈದ್ಯಸಾರಸಂಗ್ರಹ ಇದರಲ್ಲಿ ಹಲವುವಿಧವಾದ ಚಿಕಿತ್ಸೆಗಳು ಹೇಳಿವೆ; ಪ್ರಕರಣ 12.ಸ೦ಸ್ಕೃತಶ್ಲೋಕಗಳನ್ನು ಉದಾಹರಿಸಿ ಅವುಗಳಿಗೆ ಟೀಕೆಯನ್ನು ಬರೆದು
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೮೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.