ಈ ಪುಟವನ್ನು ಪರಿಶೀಲಿಸಲಾಗಿಲ್ಲ.

308 ಕರ್ಣಾಟಕ ಕವಿಚರಿತೆ. [16ನೆಯ ತತ್ವಸಾರದ ಸೊಬಗು ಧರೆಯೊಳು | ವಿಸ್ತರಿಸಬೇಕೆಂದು ಮುನಿಕುಲ | ರತ್ನ ಶ್ರೀಗುರುವಾದಿರಾಜನು ಶ್ರುತಿಪುರಾಣಗಳ | ಮೊತ್ತವನು ನೆeಳ ಮಧಿಸಿ ಮೇಲಣ | ಮುಕ್ತಿ ಸೃಷ್ಟಿಸ್ಥಿತಿಲಯಂಗಳ | ಸರ್ಧಿಯಲಿ ಬಣ್ಣಿಸಿದ ಕಥೆಯನು ಕೇಳಿ ಸಜ್ಜನರು || ಕನ್ನಡಿಯೊಳು ತೋರ್ಪಂತೆ ಪೂರ್ಣ ಪ್ರಜ್ಞರ ಮತ | ದುನ್ನ ತದ ತತ್ವಸಾರವನು | ಕನ್ನಡದಿ ಬಣ್ಣಿಸಿದ ವಾದಿರಾಜ ಮುನಿ || - ಆರಂಭದಲ್ಲಿ ವಿಷ್ಣು, ವೇದವ್ಯಾಸ, ಸರಸ್ವತಿ, ಆನಂದತೀರ್ಥ ಇವರು ಗಳ ಸ್ತುತಿ ಇದೆ. ಅಲ್ಲಲ್ಲಿ ಸಂಸ್ಕೃತಶ್ಲೋಕಗಳನ್ನು ಉದಾಹರಿಸಿ ಅವುಗಳ ಅರ್ಥವು ಹಾಡಿನರೂಪವಾಗಿ ಹೇಳಿದೆ. ಈಗ್ರಂಥದಿಂದ ವಿಷ್ಣು ಸ್ತುತಿರೂಪ ವಾದ ಸ್ವಲ್ಪಭಾಗವನ್ನು ತೆಗೆದು ಬರೆಯುತ್ತೇವೆ... ಇಂದ್ರನ ರಾಜ್ಯವ ತಂದನ ಶುಭಗುಣ | ಸಾಂದ್ರನ ಸುರಸಭಾಚಂದ್ರನ | ನಂದನ ಕಂದನ ವಂದ್ಯನ ನಿತ್ಯಾ / ನಂದನ ತುತಿಪೆ ಮುಕುಂದನ | ಶೌರಿಯ ನೆನೆವೆನುದಾರಿಯ ಕುಜನರ | ವೈರಿಯ ಮಂದರೋದ್ದಾರಿಯ || ಹರಿಯ ದುರಿತ ನಿವಾರಿಯ ಸುಜನೋಪ | ಕಾರಿಯ ಮುಕುತಿಗೆ ದಾರಿಯ|| ಇಷ್ಟನ ದುರಿತಘರಟ್ಟನ ಜಗಕತಿ | ದಿಟ್ಟನ ಸತತಸಂತುಷ್ಟನ | ಶಿಷ್ಟವ ಶುಭಗುಣಪುಷ್ಟನ ತುತಿಪೆನು| ಕೃಷ್ಣನ ಶ್ರುತಿಗಿಂಬ ಕೊಟ್ಟನ || 2: ಸ್ವಪ್ನಗದ್ಯ ಇದಕ್ಕೆ ಗದ್ಯ ಎಂಬ ಹೆಸರಿದ್ದ ರೂ ಇದರಲ್ಲಿ 45 ಭಾಮಿನೀಷಟ್ಪದಿಗಳಿವೆ. ಇವುಗಳನ್ನು 9 ಹಾಡುಗಳಾಗಿ ಭಾಗಿಸಿರುವಂತೆ ತೋರುತ್ತದೆ. “ ಇಂತು ಸ್ವಪ್ನಾವಸ್ಥೆಯಲಿ ಮೂಕಾಂತ ಗುರುವಾದಿರಾಜಗೆ ನಿಂತು ಹೇಳದ ಪದಗಳಿವು' " ಎಂಬುದರಿಂದ ಇದನ್ನು ದೇವರು ಕವಿಗೆ ಸ್ವಪ್ನದಲ್ಲಿ ಹೇಳಿದಂತ ತಿಳಿಯುತ್ತದೆ. ಇದರಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ಇಷ್ಟ ದೇವರ ಮಧ್ಯದಲಿ ಮನ | ಮುಟ್ಟಿ ನನ್ನನೆ ಭಜಿಸು ದಿವಿಜರು | ಶಿಷ್ಟ ಜನರಿಗೆ ಗುರುಗಳೆಂದವರಂಘ್ರಿಗಭಿನಮಿಸು|| ನಷ್ಟವಾಗದವೋಲು ನಿನ್ನನು | ಘಟ್ಟಿಯಾಗಿಯೇ ರಕ್ಷಿಸುವೆ ನಾ | ದೃಷ್ಟಿಗೋಚರನಹೆನು ಮುಕ್ತಿಯ ಕೊಟ್ಟು ಸಲಹುವೆನು || ನಾನು ಸುಜ್ಞನು ಜೀವನಜ್ಞನು | ನಾನು ಮುಕ್ತನು ಜೀವ ಬದ್ಧನು |