ಈ ಪುಟವನ್ನು ಪರಿಶೀಲಿಸಲಾಗಿಲ್ಲ.
316 ಕರ್ಣಾಟಕಕವಿಚರಿತೆ [16ನೆಯ ಭೂಷಣೆಗೂ ಹುಟ್ಟಿದ ಸುಕುಮಾರನ ಕಥೆ ಹೇಳಿದೆ. ಗ್ರಂಥದಲ್ಲಿ ಕಥಾಭಾಗವು ಬಹಳಕಡಮೆ; ಶೃಂಗಾರರಸಪ್ರಧಾನವಾದ ವರ್ಣನೆಯೇ ವಿಶೇಷವಾಗಿದೆ. ಆರಂಭದಲ್ಲಿ ಸದಾಶಿವಸ್ತುತಿ ಇದೆ. ಬಳಿಕ ಕವಿ ಸರಸ್ವತಿ, ಗಣೇಶ ಇವರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ_
ಸಮುದ್ರ
ಸುಕಿ ನಾಭಿ ಝಷ ನೇತ್ರ ತೆರೆ ಪುರ್ಬುರಗ ಬಾಸೆ | ಗಳ ಶಂಖ ಕೂರ್ಮ
ಮೇಗಾಲು ||
ಪುಳಿನದೊಟ್ಟಿಲೆ ಪೊರೆವಾಲಿಗೆ ಸಾಮಾನ್ಯ | ಲಲನೆಯಂತೆಸೆದುರಾವಾರ್ಧಿ ||
ಸ್ತ್ರೀವರ್ಣನೆ
ಕುಂಭಕುಚದ ಕಂಬುಕಂರದ ಕೇಕಿದು | ಹಿಂಬಿನಂಭೋಜಾತಮುಖದ |
ಪೊಂಬಾಟದೊಡೆಯ ಕಾವಂಬಗತಿಯ ಪಕ್ವ | ಬಿಂಬಾಧರೆಯರಿರುತಿಹರು |
ಲೋಕದೊಳಗೆ ಹಲಲಿಪಿಯುಂಟವಅವ | ಆಕಾರವೆಲ್ಲ ವಿಕಾರ |
ಈಕರ್ಣಾಟಶ್ರೀಕಾರದಿರವ ಪೋ |ಲ್ತಾಕೆಯ ಕರ್ಣವೆಸೆದುದು | ವಿರಹ ಮಲಯಜಲೇಪ ಮನ್ಮಧಶಾಪ ತಾವರೆ | ಯೆಲೆಯ ವೀಜನ ಮಹಾಜ್ವಲನ | ತಳಿವ ಪರಾಗ ಜೀವನತ್ಯಾಗ ವೀಣೆಯ | ಲಲಿತಸುಸ್ವರ ಬಹುವೈರ || ಮರುಗ ಮಹೋರಗ ಕತ್ತುರಿ ದಳ್ಳುರಿ | ಸುರಗಿ ಸುರಗಿ ವಾಲ ವ್ಯಾಲ | ಸರಸಿಜ ವಿಷರಜ ತಾಂಬೂಲವೆದೆಶೂಲ | ದಿರವಾದುವಾವಿರಹದೊಳು || ಸೂಳಗೇರಿ ಪಾಪದ ಗಡಿ ದುಃಖದ ಸೀಮೆ ಬಹುವಿಧ | ದಾಪತ್ತಿನ ಪುರ ತೇಜ | ಪೋಪ ಮಹಾಲಯವೆಂಬಪಕೀರ್ತಿಯ ತಾ | ಪೊತ್ತು ಮೆಟವುದಾಕೇರಿ | ಗದಕಿನಾಲಯ ರಕ್ಕಿನ ಬೀಡನೃತದ | ಸದನ ವೈಸಿಕದ ಭವನವು | ಚದುರಿನ ಪೇಟೆ ವ್ಯಾಧಿಯ ತವರ್ಮನೆಯೆಂ | ದೆದೆಗೊಂಡುದಾಸೂಳೆಗೇರಿ || _____________ ವರ್ಧಮಾನ ಸು.1600 ಈತನು ನಗರದ 46 ನೆಯ ಶಾಸನವನ್ನು ಬರೆದಂತೆ ಆ ಶಾಸನದ ಕೊನೆಯಲ್ಲಿರುವ