ಈ ಪುಟವನ್ನು ಪರಿಶೀಲಿಸಲಾಗಿಲ್ಲ.
318 ಕರ್ಣಾಟಕಕವಿಚರಿತೆ
[1೦ ನೆಯದ್ದಾನೆ. ಇವನ ತಂದೆ ವಿಷ್ಣುಸೂರಿ; ಪೋಷಕ ಕೆಳದಿಯ ದೊರೆಯಾದ ವೆಂಕಟಪ್ಪನಾಯಕ. ಈತನ ಆಜ್ಞಾನುಸಾರವಾಗಿ ಈ ಗ್ರಂಥವನ್ನು ಬರೆದಂತೆ ಹೇಳುತ್ತಾನೆ. ಈ ರಾಜನು 1582 ರಿಂದ 1629ರ ವರೆಗೆ ಆಳಿದಂತೆ ತಿಳಿವುದರಿಂದ ಕವಿಯ ಕಾಲವು ಸುಮಾರು 1600 ಆಗಬಹುದು. ಇವನ ಗ್ರಂಥ ಶಿವಗೀತೆ ಇದು ವಾರ್ಧಕಪಟ್ಪದಿಯಲ್ಲಿ ಬರೆದಿದೆ; ಸಂಧಿ 16, ಪದ್ಯ 377. ಈ ಗ್ರಂಥವು ಪದ್ಮಪುರಾಣದ ಉತ್ತರಖಂಡದಲ್ಲಿರುವ ಶಿವಗೀತೆಯ ಭಾಷಾಂತರವು. ಇದನ್ನು “ಸಕಲವಿದ್ವತ್ತಿಲಕ ಹರಿಹರಾರಾಧ್ಯವರವಾಜಪೇಯಾಂಧ್ರ ಕೃತ ಸರಸಶಿವಗೀತಾನುರಂಜಕವೆನಿಪ್ಪ ಟೀಕೆಗಳ ನೆರೆ ನೋಡಿ ಪೇಳ್ದೆಂ” ಎಂದು ಕವಿ ಹೇಳುತ್ತಾನೆ. ತನ್ನ ರಚನಾಕ್ರಮವನ್ನು
ಒಳಗಮೃತದಂತೆ ರಸತಿರುಳಿರ್ದೊಡಂ ಶುಕಾ | ವಳಿ ಹೊರಗೆ ಬಿರುಸಾದ ಕರಟವುಂ ಸಿಂಪೆಯುಂ |
ಬಳಸಿರ್ದ ತೆಂಗಾಯ ಮುಟ್ಟಲೊಲ್ಲದೆ ಮಿಕ್ಕ ಫಲತತಿಯನರಸುವಂತೆ ||
ವಿಳಸದರ್ಧಗಳಿರ್ದೊಡಂ ಕರಿನವಾದ ಕೃತಿ | ಗಳ ನೋಡರತಿರಸಿಕರದಳುಂದ ಮೃದುಪದಂ | ಗಳನಿಟ್ಟು ಋಜುಮಾರ್ಗದಿಂ ಸಕಲರಳುವಂತೆ ವಿರಚಿಸುವೆನೀಕೃತಿಯನು ||
ಎಂಬ ಪದ್ಯದಲ್ಲಿ ತಿಳಿಸಿ ಪಿಶುನರನ್ನು
ಕಂಡಸಕ್ಕರೆಯ ಸೋದಿಸಿ ಬಾಯೊಳಿಕ್ಕಲದ | ನುಂಡು ಸವಿಯಳುಯದರು ಕೆಲರು ಕೆಲರಳುತೊಡಂ |
1. ಕೆಳದಿನೃಪಮಿಯದಲ್ಲಿ__ವೆಂಕಟಪ್ಪನಾಯಕನು ಕವಿ ತಿರುಮಲಭಟ್ಟರಿಂದ ಪದ್ಮಪುರಾಣದ ಉತ್ತರಖಂಡದೊಳ್ ಪದಿನೆಂಟಧ್ಯಾಯಮನುಳ್ಳ ಶಿವಗೀತೆಯಂ ವಾರ್ಧಕಷಟ್ಪದಿಯಲ್ಲಿ ಬರೆಯಿಸಿದಂ__ಎಂದು ಹೇಳಿದೆ 2. 1631ರಲ್ಲಿ ಹುಟ್ಟಿದ ಸಾಗರದ 41 ನೆಯ ಶಾಸನದಲ್ಲಿ ವೆಂಕಟಪ್ಪನಾಯಕನ ಮಮ್ಮಗನಾದ ವೀರಭದ್ರನಾಯಕನು ತಿರುಮಲಭಟ್ಟನ ಮಗನಾದ ಶಂಭುಲಿಂಗಭಟ್ಟನಿಗೆ ಭೂದಾನಮಾಡಿದಂತೆ ಹೇಳಿದೆ. ಈ ತಿರುಮಲಭಟ್ಟನು ಶಿವಗೀತಾಕರ್ತೃವಾಗಿರಬಹುದು.