ಈ ಪುಟವನ್ನು ಪರಿಶೀಲಿಸಲಾಗಿದೆ

ತಮಾನ] ಉತ್ತರದೇಶದ ಬಸವಲಿಂಗದೇವ 321


ತಾನನ್ದಿ ಇವರುಗಳನ್ನು ತನ್ನ ಗ್ರಂಥದಲ್ಲಿ ಅನುಸರಿಸಿರುವಂತೆ ಹೇಳುತ್ತಾನೆ. ಇವನ ಗ್ರಂಥ

                           ನವರಸಾಲಂಕಾರ
ಇದು ಚಂಪೂರೂಪವಾಗಿದೆ. ಇದರಲ್ಲಿ ಮುಖ್ಯವಾಗಿ ರಸಪ್ರಕ್ರಿಯೆ ಪ್ರತಿಪಾದಿತವಾಗಿದೆ; ನಾಯಕನಾಯಿಕಾಲಕ್ಷಣವೂ ವ್ಯಭಿಚಾರಿಭಾವಾ ದಿಗಳೂ ಹೇಳಿವೆ. ಕವಿಕಾಮನ ಮತ, ನಾಗವರ್ಮನ ಮತ ಎಂದು ಆ ಕವಿಗಳ ಗ್ರಂಥಗಳಿಂದಲೂ, ಸಾಳ್ವನ ರಸರತ್ನಾಕರದಿಂದಲೂ ಸೂತ್ರಗಳು ಅನುವಾದಮಾಡಲ್ಪಟ್ಟಿವೆ. ಉದಾಹರಣಪದ್ಯಗಳಲ್ಲಾ ಪಂಪ, ಪೊನ್ನ, ನಾಗ ಚಂದ್ರ, ನೇಮಿಚಂದ್ರ ಮೊದಲಾದ ಪೂರ್ವಕವಿಗಳ ಗ್ರಂಥಗಳಿಂದ ತೆಗೆದಿವೆ.

ಈ ಗ್ರಂಥದಿಂದ ಕೆಲವುಭಾಗಗಳನ್ನು ತೆಗೆದು ಬರೆಯುತ್ತೇವೆ... ಒದವಿರ್ದ ಚಿತ್ರದಿಂ ತೋ | ರ್ವುದು ಭಾವಂ ಭಾವದಿಂದ ರಸಮುದಯಿಸುಗುಂ | ವದನಮದಂ ಪ್ರಕಟಿವುನಾ > | ವದನದೆ ರಸಮಿಂತಿದೆಂದು ತಿಳಿಗೆ ರಸಜ್ಞರ್ | ಇನಿಯನ ವಾರ್ತೆಗಳಂ ಕಾ | ಮಿನಿ ಪೆಳಿರಿಂ ಕೇಳ್ದು ಕೇಳ್ದು ತದ್ಭಾವನೆಯಂ | ತನಗಾಗಿಸಿಕೊಂಡಿರ್ಪೊಡೆ | ಜನದಿಂ ಮೊಟ್ಟಾಯಿತಾಭಿಧಾನಮನಾಳ್ಗುಂ|| ಪರಿಹಾಸವಿವಿಧಕೇಳೀ | ಪರಿಚಿತಮತಿ ವಿಪ್ರವಂಶಸಂಭೂತಂ ನೋ | ಡೆ ರಾಣಾರ್ದ್ರವಾಣಿ ಸಾಧು / ಸ್ವರೂಪನೆನಿಪಂ ವಿದೂಷಕಾಖ್ಯೆಯನಾಳ್ಗು೦ || - ವಿಭಾವಾನುಭಾವಸಂಚಾರಿಸಾತ್ವಿಕಂಗಳಿಂ ಉತ್ಸಾಹಸ್ಥಾಯಿ ಪುಷ್ವಮಾಗೆ ವೀ ರರಸಂ; ಆ ತೀರರಸದಲ್ಲಿ ದಾನವೀರವೆಂದುಂ, ದಯಾವೀರವೆಂದುಂ, ಯುದ್ಧವೀರವೆಂದುಂ, ಮೂರುಭೇದಂ; ಆ ವೀರದೊಂದೊಂದರೊಳಗೆ ವಾಗ್ವೀರವೆಂದುಂ,ರೂಪವೀರವೆಂದುಂ,ಕ್ರಿಯಾವೀರವೆಂದುಂ ತ್ರಿವಿಧಂ; ಅಂತು ವೀರರಸಮೋಂಬತ್ತು ತೆಳಂ.

                  ಉತ್ತರದೇಶದ ಬಸವಲಿಂಗದೇವ ಸು.1600
ಈತನು ಬಸವೇಶ್ವರಪುರಾಣದ ಕಥಾಸಾಗರ, ಭೈರವೇಶ್ವರಕಾವ್ಯದ ಕಥಾಸಾಗರ, ಉಚಿತಕಥೆಗಳು ಇವುಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ; ಷಟ್ಸ್ಥಲಚಕ್ರವರ್ತಿ ಚೆನ್ನಬಸವೇಶ್ವರದೇವರ ಕಾರುಣ್ಯದಶಿಶು ಎಂದು ಹೇಳಿಕೊಂಡಿದ್ದಾನೆ. ಇವನ ಕಾಲವು ಭೈರವೇಶ್ವರಕಾವ್ಯವನ್ನು ಬರೆದ ಕಿಕ್ಕೇರಿಯಾರಾಧ್ಯನಂಜುಂಡನ(ಸು.1550) ಕಾಲಕ್ಕಿಂತ ಈಚೆ