ಈ ಪುಟವನ್ನು ಪರಿಶೀಲಿಸಲಾಗಿಲ್ಲ.

840

     ಕರ್ಣಾಟಕ ಕವಿಚರಿತೆ              [16ನೆಯ
ರಾವುಟದ ಮುಟ್ಟಿನೊಳ್ ಲಾಳವಿಂಡಿಗೆಯೊಳಂ ಬಲ್ಲರಿಂದಗುಳಿಯಕ್ಕುಂ  ||

ಸೇವಕಂ ದಾಸಿಯುಂ ತೊಳ್ತಿಕ್ಕುಮಾಳಿಯೆನ | ಲಾವಂಚನೆಯೊಳಮೇಕಗ್ರಾಹಿಕದೂಳಕ್ಕು | ಮಾವಳಿಯೊಳಂ ಸಖಿಯೊಳಂ ಕ್ಷಳನನಿಪ್ಪುದದು ನೆಟಲೆವಲ್ ಛಾಯೆ ಬಿಂಬಂ || ಬಾಳೆನಲ್ ಬಾರಿಲ್ಲಿ ರಳನಾಯುಧಂಗಳಂ || ಪೇಳೆ ಕುಳನಗುಳಿಯೊಳ್ ಸೂರಣದದಂಟಿನೊಳ್ | ತಾಳಿಮರದಲ್ಲಿ ತಾಳೆನೆ ರವಿಂ ತಾಳ್ವಲ್ಲಿ ಕುಳನಗುಳ್ದೊದೆಂಬರ್ಧದೂಳ್ | ಆಳೆಂದು ಬರೆ ರಳಂ ಭಟರ ಸೆಸರೊಳ್ ಕುಳಂ | ಕೇಳಿ ಸಙ್ತ್ಗಿ ರಳಂ ಕ್ರೀಡೆಯೊಳ್ ಕ್ಷಳ ರವಿಕ | ನಾಳ ನುಡಿ ತುಂಬುಕಳ್ಳನೊಳುಂಟು ನಾಳವಾಸಗೆ ಕುಳಂ ಲತೆಯೊಳ್ಕ್ಷಳಂ ||

         ಶಾಂತರಸ ಸು.1600 

ಈತನು ಯೋಗರತ್ನಾಕರವನ್ನು ಬರೆದಿದ್ದಾನೆ. ಇವನು ಜೈನಕವಿ; ಇವನ ಗ್ರಂಥದಿಂದ ಇವನ ವಿಷಯವಾಗಿ ಇನ್ನೇನೂ ತಿಳಿವುದಿಲ್ಲ. ಇವನು ಸುಮಾರು 1600 ರಲ್ಲಿ ಇದ್ದಿರಬಹುದೆಂದು ತೋರುತ್ತದೆ.

 ಇವನ ಗ್ರಂಥ
           ಯೋಗಾರತ್ನಾಕರ 

ಇದು ಕಂದದಲ್ಲಿ ಬರೆದಿಗೆ; 8 ಅಂಗಗಳಾಗಿ ಭಾಗಿಸಲ್ಪಟ್ಟಿದೆ. ಇದ ರಲ್ಲಿ ಜೈನಮತಾನುಸಾರವಾಗಿ ಯಮ, ನಿಯಮ ಮುಂತಾದ 8 ಯೋ ಗಂಗಗಳು ವಿವರಿಸಲ್ಪಟ್ಟಿವೆ. ಗ್ರಂಥಕ್ಕೆ ಅಷ್ಟಾಂಗಎಂಬ ನಾಮಾಂತರವೂ ಇರುವಂತೆ ತೋರುತ್ತದೆ. ಎಲ್ಲರಿಗೂ ತಿಳಿವುದಕ್ಕಾಗಿ ಕನ್ನಡದಲ್ಲಿ ಈ ಗ್ರಂಥವನ್ನು ರಚಿಸಿದಂತೆ ಕವಿ ಈ ಪದ್ಯದಲ್ಲಿ ಹೇಳಿದ್ದಾನೆ- ಜಿನಮತಮನಖಿಳಮುನಿಜನ | ವಿನುತಮನಧ್ಯಾತ್ಮಗ್ರಂಧಮಂ ಕನ್ನಡದಿಂ | ಜನಕೆಲ್ಲಮರುಯೆ ಪೇಳ್ದಂ ಮನಕೀಪ್ಸಿತಮೆನಿಪ ಯೋಗರತ್ನಾ ಕರಮಂ || ಗ್ರಂಥಾವತಾರದಲ್ಲಿ. ನೇಮಿಜಿನಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿ ಗಳನ್ನೂ ಸರಸ್ವತಿಯನ್ನೂ ಸ್ಮರಿಸಿದ್ದಾನೆ. ಗ್ರಂಥಾಂತ್ಯದಲ್ಲಿ ಈ ಪದ್ಯವಿದೆ: ಯಮನಿಯಮಾದಿಯನಿಂತೀ | ಕ್ರಮದಿಂದಂ ತಿಳಿಯೆ ಪೇಳ್ದನಷ್ಟಾಂಗಮುಮಂ | ಸಮಸಂದು ತಿಳಿದು ನೆಗಲಲ್|ಭ್ರಮೆವೂಕುಂ ಯೋಗ ನಿಲ್ಕು ಮತಿ ಪಿರಿದಕ್ಕುಂ!