ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಶತಮಾನ] ವೀರಭದ್ರರಾಜ 343

                           ಪಾಂಚಾಲದೇಶ
ಹೊಡೆಯೆಂಬ ಮಾತಿಲ್ಲ ತಡೆಯೆಂಬ ನುಡಿಯಿಲ್ಲ | ಕಡಿಯೆಂಬುದಿಲ್ಲ ನಾಡೊಳಗೆ |
ಕಡಿಹ ಕಬ್ಬಿನೊಳುಂಟು ತಡೆಹದಟ್ಟಡಿಯೊಳು|ಹೊಡೆಯುಂಟು ಹೊಂಬಾಳೆಯಲಿ||
                          ___ ___ ___ ___
                       ವೀರಭದ್ರರಾಜ ಸು. 1600
     ಈತನು ಪಾಲಕಾವ್ಯಕೃತಹಸ್ತ್ಯಾಯುರ್ವೇದಕ್ಕೆ ಕನ್ನಡಟೀಕೆಯನ್ನು
ಬರೆದಿದ್ದಾನೆ. ಇವನು ರಾಜವಂಶಕ್ಕೆ ಸೇರಿದವನು. ಇವನ ತಂದೆ ನೃಸಿಂ
ಹರಾಜ, ತಾಯಿ ವೀರಾಂಬೆ. 1 ನಮಗೆ ದೊರೆತ ಪ್ರತಿ ಅಸಮಗ್ರ. ಇದ 
ರಿಂದ ಕವಿಯವಿಷಯವಾಗಿ ಇನ್ನೇನೂ ತಿಳಿವುದಿಲ್ಲ. ಈತನು ಸುಮಾರು
[600 ರಲ್ಲಿ ಇದ್ದಿರಬಹುದು. 
     ಇವನ ಗ್ರಂಥ
               ಪಾಲಕಾಪ್ಯಕೃತಹಸ್ತ್ಯಾಯುರ್ವೇದಟೀಕೆ 
   ಮೂಲಗ್ರಂಥವು ಅಂಗದೇಶಕ್ಕೆ ಅಧಿಪತಿಯಾಗಿ ಚಂಪಾಪಟ್ಟಣದಲ್ಲಿದ್ದ ರೋಮಪಾದರಾಯನಿಗೆ ಪಾಲಕಾಪ್ಯಋಪಿ ಹೇಳಿದುದು. ಟೀಕಾಕಾರನ 

ಬಂಧವನ್ನು ತೋರಿಸುವುದಕ್ಕಾಗಿ ಸ್ವಲ್ಪ ಭಾಗವನ್ನು ತೆಗೆದು ಬರೆ ಯುತ್ತೇವೆ ---

     ಆರು ಕೆಲವರು ಚಿಕಿತ್ಸೆಮಾತ್ರವನೆ ಪಠಿಸಿ ಅನುವಾಸನ ನಿರೂಹ ಉತ್ತರಿವಸ್ತಿ 

ಸ್ನೇಹವಿಧಿ ವಿರೇಕವಿಧಿಶಿರೋವಿರೇಚನ ಉಪಚಾರಂಗಳನರಿಃಯದೆ ವೈದ್ಯಮಂ ಮಾಡು ವವರು ಹೇಡಿ ಹುಯ್ಯಲ ಹೊಕ್ಕಂತೆ, ವಾತದಿಂದ ಹುಟ್ಟಿದ ವ್ಯಾಧಿಗಳಿವು, ಪಿತ್ತ ಸಂಬಂಧ ವ್ಯಾಧಿಗಳಿವು, ಶ್ಲೇಷ್ಮ ಸಂಬಂಧವ್ಯಾಧಿಗಳಿವು, ರಕ್ತಸಂಬಂಧವ್ಯಾಧಿಗಳಿವು, ಸಂಕರ ದಿಂದ ಹುಟ್ಟಿದ ವ್ಯಾಧಿಗಳಿವು, ಎಂಬ ಭೇದಗಳನರುಯದೆ ಮಾಡುವ ವೈದ್ಯ ಭ್ರಷ್ಟ ಹುದು. ಉತ್ತರಸ್ಥಾನವನರುದು ಪಠಿಸದೆ ಇದ್ದ ವೈದ್ಯನ ಕೈಯ ಔಷಧವಂ ಮಾ ಡಿಸಬಾರದು. ನಾಲ್ಕು ಸ್ಥಾನವನು ಬಲ್ಲಾತನಿಂದ ಚಿಕಿತ್ಸೆಯಂ ಮಾಡಿಸುವುದು.

   1 ತತ್ರಾಭೂತ್ ಕ್ಷಿತಿಪಾಲಮಸ್ತಕಮಣಿರ್ಭೂಪೋ  ನೃಸಿಂಹಾಭಿಧಃ ||

ತಸ್ಯಾಸೀನ್ಮಹಿಷೀ ..... ವೀರಾಭಿಧಾ ಪ್ರೇಯಸೀ | ತದ್ವೀರ್ಯಪ್ರಭವೋ ರಾಜಾ ವೀರ

ಭದ್ರಃ ಪ್ರತಾಪರ್ವಾ| ಅಕಾರ್ಷೀದ್ಗ ಒಶಾಸ್ತ್ರಸ್ಯ ಟೀಕಾಂ ಲೌಕಿಕಭಾಷಯಾ ||