ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ಶಂಕರದೇವ. 383
ಪುಳಕದ ಜಳಕದೊಳಂಗಂ| ಮುರುಕಿ ಮನಂ ತುಳುಕಿ ತೂಗಿ ತೊನೆವಾಡುತ್ತುಂ | ಇರುವ ಸುಖಾನಂದಾಶ್ರುವ | ನೆಳಸುವೆ ಸತತಂ ಪ್ರಸನ್ನ ಶಂಕರಲಿಂಗಾ || ನಂಬಿಸಿ ಚುಂಬಿಸಿ ಪದಯುಗ | ಮುಂ ಏಗಿಬಿಗಿದಪ್ಪಿ ಹೆಪ್ಪನಿಟ್ಟಂತೆ ಮನಂ | ತುಂಬಿದ ತೊಟೆಯವೊಲಿಹ ಸುಖ|ಮಂ ಬಯಸುವೆನಾಂ ಪ್ರಸನ್ನ ಶಂಕರಲಿಂಗಾ | ಪಡಕ್ಷರರಗಳೆ, ಭಕ್ತಿಬಿನ್ನಹದರಗಳೆ, ವೀರಶೈವರಗಳೆ, ಮೈದುನ ರಾಮನರಗಳೆಎಂಬ ಗ್ರಂಥಗಳ ಕೊನೆಯಲ್ಲಿ ಪ್ರಸನ್ನ ಶಂಕರಲಿಂಗ ಎಂದು ಮುಗಿವ ಕಂದಗಳು ದೊರೆವುದರಿಂದ ಈ ಗ್ರಂಥಗಳೂ ಏತತ್ಕವಿಕೃತವಾಗಿ ರಬಹುದೆಂದು ತೋರುತ್ತದೆ. ಪ್ರಡಕ್ಷರರಗಳೆ ಇದರಲ್ಲಿ 71 ನುಡಿಗಳಿವೆ ; ಒಂದೊಂದೂ ಓಂನಮಶ್ಶಿ ಎಂದು ಮುಗಿಯುತ್ತೆದೆ. ಒಂದೆರಡು ನುಡಿಗಳನ್ನು ಉದಾಹರಿಸುತೇವೆ -
ಹುಲಿಗೆ ಹುಲ್ಲೆ ಸಿಲ್ಕಿದಂತೆ ಘೋರತರವಿಕಾರವಾರ್ಧಿ |
ಯೊಳಗೆ ಬಿದ್ದೆನಯ್ಯ ಶಂಕರಾಯ ಓಂನಮಶ್ಶಿವಾಯ || ತನುವಿಕಾರವೆನ್ನ ತಿಂದು ತೇಗಿ ನಿಮ್ಮ ಮುಂದೆ ಕೂಗಿ | ತೊನೆಯಲೀಯದಯ್ಯ ಶಂಕರಾಯ ಓಂನಮಶ್ಶಿವಾಯ | ತ್ರಿದಶಚಾಸದಂತೆ ಕೆಡುವ ಹೊನ್ನ ಹೆಣ್ಣ ಮಣ್ಣ ನಚ್ಪಿ|
ಮದಡನಾದೆನಯ್ಯ ಶಂಕರಾಯ ಓಂನಮಶ್ಶಿವಾಯ ||
- ಭಕ್ತಿಬಿನ್ನಹದರಗಳೆ.
ಇದರಲ್ಲಿ 138 ನುಡಿಗಳಿವೆ. ಎರಡನ್ನು ಉದಾಹರಿಸುತ್ತೇವೆ-- ಹೊನ್ನೆಂಬ ಹೊಲೆಹೊದ್ದಿ ಹುಸಿಯ ಹಸರವ ಹರಹಿ | ಅನ್ನಿಗರ ಮೆಚ್ಚಿಸುವ ವೇಷವಿದ್ಯವ ಹರಹಿ || ಸುರತರುವ ಕಡಿದು ಎಲವದಮರಕೆ ನೀರೆರೆದು |
ನೂರೆವಾಲ ಚೆಲ್ಲಿ ತಾಟಿಯ ಬಯಸಿ ಬಾಯ್ದೆರೆದು |
ವೀರಶೈವರಗಳೆ.
ಇದರಲ್ಲಿಯೂ 138 ನುಡಿಗಳಿವೆ. ಒಂದನ್ನು ಉದಾಹರಿಸುತ್ತವೆ:- ತನ್ನ ನೆನೆವವಗ್ಗೆ೯ ತನ್ನನಿತ್ತು ಪರಮಭಕ್ತಿಸುಖದ | ರನ್ನ ದೊಡಿಗೆಯಂ ಸಮಂತು ತೊಡಿಸುತಿರ್ಪ ವೀರಶೈವ||