ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ ಭಾಸ್ಕರ 375

                              ಮೈಸೂರು

ಧರೆಯಮೇಲಣ ವೈರಿನೃಸರ ದಂಡಿಸಿ ತಂದ | ವರವಸ್ತುಚಯವೆಸೆದಿರಲು | ಮೆಟೆವುದು ಮಹಿಸೂರೆಂದೆಂಬ ನಾಮವೊಂ |ಮರುತರಧ್ವನ್ಯರ್ಧವಾಗಿ ||

                           ಮೈಸೂರು ದೇಶ 

ಕಟ್ಟೆಂಬ ನುಡಿ ಮಾತಿಗಾತಿಯರೊಳು ನೆಟೆ| ಪೆಟ್ಟೆಂಬ ನುಡಿಟಂಕದೊಳಗೆ ! ಕುಟ್ಟೆಂಬ ನುಡಿ ವಿ್ಹಿಯೊಳಗಲ್ಲದೆ ಬೇಟೆೇ ದಿಟ್ಟಿ ಸಲಾನಾಡೊಳಿಲ್ಲ ||

                                  ------
                     ಭಾಸ್ಕರ  ಸು. [65೦ | 

ಈತನು ಬೇಹಾರಗಣಿತವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣ ಕವಿಯೆಂದು ತೋರುತ್ತದೆ. ಇವನ ತಂದೆ ಶ್ರೀವರದೇವ, ತಾಯಿ ಲಕ್ಷ್ಮೀ ದೇವಿ ಇವನಿಗೆ ಬಾಕಿರಾಜ ಎಂಬ ಹೆಸರೂ ಉಂಟು. "ಸರಸಂ ಸತ್ಕವಿವಲ್ಲಭಂ” ಎಂದು ಹೇಳಿಕೊಂಡಿದ್ದಾನೆ. ಲೆಕ್ಕದಲ್ಲಿ ಪರಿಣತಿಯೂ ಕವಿತಾಶಕ್ತಿಯೂ ತನಗಿರುವುದನ್ನು ತೋರಿಸಲು ಈ ಗ್ರಂಥವನ್ನು ಬರೆ ದಂತೆ ಹೇಳುತ್ತಾನೆ, ಈತನಿಗೆ ಶಾರದೆಗುವರ, ಗಣಿತವಿಳಾಸ ಎಂಬ ಬಿರು ದುಗಳಿದ್ದಂತೆ ತೋರುತ್ತದೆ. ಉದಾಹರಣಪದ್ಯಗಳಲ್ಲಿ ಒಂದುಕಡೆ ರಂಗಪುರವನ್ನು ಹೇಳಿ ಮತ್ತೊಂದುಕಡೆ ಚಾ ಮರಾಜನು ಶಕ 1559 ರಲ್ಲ ಎಂದರೆ 1637ರಲ್ಲಿ ಮೃತನಾದನು ಎಂಬಂಶವನ್ನು ತಿಳಿಸಿ ಏಳೆಂಟುಕಡೆ ಒಬ್ಬ ನರಸಭೂಪನನ್ನು ಹೇಳಿದ್ದಾನೆ, ಈ ರಂಗಪುರವು ಶ್ರೀರಂಗ ಪಟ್ಟಣವಾಗಿರಬೇಕು; ಈ ಚಾಮರಾಜನು 1637 ರಲ್ಲಿ ಗತಿಸಿದ ರಾಜಒಡೆಯರ ಮಮ್ಮಗನಾದ ಚಾಮರಾಜನೇ ಆಗಿರಬೇಕು; ನರಸಭೂಪನು ಚಾಮರಾಜನ ತರ್ರ ವಾಯ ಆಳಿದ ಕಂಠೀರವನರಸುಚನೇ ಆಗಿರಬೇಕು. ಈ ದೊರೆಯ ಆಳಿಕೆಯಲ್ಲಿ (1638-1659) ಕವಿ ಇದ್ದಂತೆ ತೋರುವುದರಿಂದ ಅವನ ಕಾಲವು ಸುಮಾರು1650 ' ಆಗಬಹುದು, ಇನ್ನು ಕೆಲವುಕಡೆ ಒಬ್ಬ ದೇವರಾಜನ ಹೆಸರು ದೊರೆಯುತ್ತದೆ. ಇವನಾರೋ ತಿಳಿಯದು. ಇವನ ಗ್ರಂಧದಲ್ಲಿ ಅಲ್ಲಲ್ಲಿ ಪದ್ಮನಾಭೋಕ್ತಿಯಿಂ, ಅಬ್ಬನ ಮತದಿ೦, ಪದುಮಂ ಪೇಳ್ದಂ; ನಾಗರಾಜೋಕ್ಕಿಯಿಂದಂ, ಸೌಂದರನಾಗನಿಷ್ಟದಿಂ, ನಾಗನನುಮತದಿಂ ಎಂದು ಹೇಳಿದೆ ಪದ್ಮ, ನಾಗ ಎಂಬ ಹೆಸರುಗಳು ಪೂರ್ವಗ್ರಂಧಕಾರರುಗಳಿಗೆ ಅನ್ವಯಿಸಬಹುದೆಂದು ತೋರುತ್ತದೆ.ಪೇಳ್ದಂ