ಈ ಪುಟವನ್ನು ಪರಿಶೀಲಿಸಲಾಗಿಲ್ಲ.

389 ಕರ್ಣಾಟಕ ಕವಿಚರಿತೆ. [17 ನೆಯ ಇದುವೆ ಭಾವದ ಪಕ್ಕೆಯಿದುವೆ ನವರಸದಿಕ್ಕೆ | ಯಿದು ಸದಾಚಾರಸುಖಸದನ ಮೋಹನದ ಧನ | ವಿದನೋದಿ ಕೇಳಿ ಲಾಲಿಸದರಾರ್ ಧರೆಯೊಳಗೆ ದಿವ್ಯ ಕಾವ್ಯಾಮೃತವನು || ಗ್ರಂಥಾವತಾರದಲ್ಲಿ ನಂಜೇಶ್ವರಸ್ತುತಿ ಇದೆ. ಬಳಿಕ ಕವಿ ಭೃಂಗಿ ವೀರಭದ್ರರನ್ನು ಸ್ತುತಿಸಿ ಅನಂತರ ಬಸವನೇ ಮೊದಲಾದ ಪುರಾತನರ ನ್ಯೂ 1 ಕರತಳದ ನಾಗಿದೇವನೇ ಮೊದಲಾದ ವಿರಕ್ತರನ್ನೂ ಹೊಗಳಿ ದ್ದಾನೆ.ಕೊನೆಯ ಸಂಧಿಯಲ್ಲಿಯೂ ಕೆಲವರು ವೀರಶೈವಗುರುಗಳನ್ನೂ ಕವಿಗಳನ್ನೂ ಸ್ತುತಿಸಿದ್ದಾನೆ. ಇವರೆಲ್ಲಾ ಪ್ರಾಯಿಕವಾಗಿ ಕವಿಯ ಕಾಲಕ್ಕೆ ಹಿಂದೆ ಇದ್ದವರು ಎಂದು ತಿಳಿಯುತ್ತದೆ. ಈ ಹೆಸರುಗಳಲ್ಲಿ ಕೆಲವನ್ನು ಇಲ್ಲಿ ಬರೆಯುತ್ತೇವೆ:-_

  • ಜಿಗುನಿ ಮರುಳಾರ್ಯ; "ಬಸವಾದಿಗಳ ವಚನಮಂ ಜಂಗಮಕೆ ಮುದದಿಯಾ ಖ್ಯಾನಮಂ ಪೇರ್ದ” ಗುಮ್ಮಳಾಪುರದ ಸಿದ್ದಲಿಂಗಾಚಾರ್ಯ ; “ ಕಲಿಯುಗದೆರಡ ನೆಯ ಈಶ್ವರನೆನಿಸಿ ಮೆಣಿದ ” ಕೊಟ್ಟೂರು ಬಸವಗುರು ; ಚರಚಕ್ರವರ್ತಿ ಜಡೆಯ ಶಿವಲಿಂಗದೇವಾರ್ಯ ; “ ಶಿವತತ್ವಗಳ ಲೇಖ್ಯಮಂ ಮಾರ್ವಿ” ಲೇಖ್ಯದ ಕರಿಯ ಸಿದ್ದ ಬಸವೇಶ : *« ಬಸವಾರಾಧ್ಯನೆರಡನೆಯವಮೂರ್ತಿ ಫಲಾಹಾರನಿಯಮವಾಂತುರು ಮಹಿಮನೊಪ್ಪತ್ತೀಶನಹ” ಚೆನ್ನ ಬಸವೇಶ, “ ವೀರಮಾಹೇಶ್ವರಾವಳಗೆ ಗುರುಬಸವ ಮುಖ್ಯ ಪುರಾತನರೊರೆದ ವಚನಗಳ ಬೋಧಿಸುವ” ಗೂಳೂರು ಸಿದ್ಧ ವೀರೇಶ್ವರ ; ತೋಂಟದಾರ್ಯರ ಕೃಪೆಯ ಪಡೆದು ಮೇಳೀದ ” ಸಪ್ಪೆಯರಾಯಯತಿಪ ; ಶಿವಶಂಕ ರೇಶ ; ಆಚಾರ್ಯ ವರದಹರತಾಳನಂಜೇಶ , ಎಮಲಾಚಾರ್ಯ ; ಸಂಪಾದನೆಯ ಸಿದ್ಧ ವಿರೇಶ್ವರಾಚಾರ್ಯ ; ಮಲ್ಲಿಕಾರ್ಜುನದೇವ ; ಸಿಂಗಳದ ಸಿದ್ದ ಬಸವ ; ಚೆನ್ನ ವೀರೇಶ ; ನಂದೀಶ್ವರ ; ಓದುವ ಅನ್ನದಾನೀಶ್ವರ ; ಪರಮಾನಂದದೇವ ; ನಂದೀಶಕವಿ ; ರಾಚ

ಯಾರಾದ್ಯ. 1, ಬಸವ, ಸಿದ್ದರಾಮ, ಪಂಡಿತಾರಾಧ್ಯ, ರೇವಣ, ರಾಮಿದೇವ, ಮರುಳುಸಿದ್ಧ ,ಮಹಾದೇವಿಯಕ್ಕ, ಮಡಿವಳ, ಕಿನ್ನರ, ಪಡಿಹಾರಿ, ಮುದ್ದಯ್ಯ, ಘಟ್ಟಿವಾಳ, ಮೋಳಿಗಯ್ಯ, ಸಿದ್ಧ, ಬುದ್ಧ, ಸೊಡ್ಡಳ, ನೀಲಲೋಚನೆ, 2. ಕರ ತಳದನಾಗಿದೇವ, ವೀರಣಾಚಾರ್ಯ, ಮಹಾನಿರ್ವಾಣಿ ಬೋಳೇಶ, ಬತ್ತಲೇಶ್ವರ, ಮಕ್ಕಳಾಟಿಕ, ಹೇಟಿಕ, ವಿಡಿವಿಲ್ಲ, ಶುದ್ಧಪ್ರಸಾದಿಮಹಾದೇವಯ್ಯ, ಶಿವಮಂತ್ರ ವಾಣಿಪೂವಡಿಗ.