381 ಶತಮಾನ? ಸಿದ್ದನಂಜೇಶ. ಕರೆದುಕೊಂಡು ಬಂದನು. ಆ ಗುರುವನ್ನು ಭೂತಾವಿಷ್ಟವಾದ ಒಂದು ಮನೆಯಲ್ಲಿ ಇಳಿಸಿದರು, ಭೂತವು ಅವನಿಗೆ ನಮಸ್ಕರಿಸಿ ಓಡಿಸೆಗಲು ಹರಿರಾಯನು ಸಂತುಷ್ಟ ನಾಗಿ ಆ ಮನೆಯನ್ನೇ ಮರವನ್ನು ಮಾಡಿ ಮೌಕ್ತಿಕಾವಳಿಗಳಿಂದ ತೆತ್ತಿಸಿದ ಕತೆ ಯನ್ನು ಗುರುವಿಗೆ ಹೊದೆಯಿಸಿ ಪಟ್ಟವನ್ನು ಕಟ್ಟಲು ಆತನಿಗೆ ಮುತ್ತಿನಕಂತೆಯ ಎಂಬ ಹೆಸರಾಯಿತು, ಇವನ ಶಿಷ್ಯರು ಅಲ್ಲಲ್ಲಿ ಮರಗಳನ್ನು ಕಟ್ಟಿ ಕೊಂಡರು, ಅವರಲ್ಲಿ ಒಬ್ಬ ಮಾಹೇಶ್ವರನು ಚಿನ್ನದಿಂದ ಸವೆದ ಕಂತೆಯನ್ನು ಧರಿಸಲು ಅವನ ಶಿಷ್ಯರು ಚಿನ್ನದ ಕಂತೆಯ ಅಂಶವೆಂಬರು, ಹೀಗೆಯೇ ಕಬ್ಬುನದ ಕಂತೆಯ ವರ್ಗ, ಪಟುಗಂತೆಯವಗ೯, ಪಚ್ಚೆಯ ಕಂತೆಯ ವರ್ಗ, ಗೋಣಿಯ ಕಂತೆಯ ವರ್ಗ,ಜಾಳಿಗೆಗಂತೆಯ ವರ್ಗ, ಕುಪ್ಪಸ ಗಂತೆಯ ವರ್ಗ, ಹುಲಿಯಚರ್ಮದ ಕಂತೆಯ ವರ್ಗ, ಮುತ್ತಿನಪೆಂಡೆಯದ ವರ್ಗ, ಎಂಬ ಪಂಗಡಗಳಾದುವು. ಶಿವಗಂಗೆಯ ಬೆಟ್ಟದ ಮೇಲಣಗವಿಯಲ್ಲಿ ಒಬ್ಬಯ್ಯನು ನೆಲಸಲು ಅವನ ಶಿಷ್ಯರು ಮೇಗಇಗವಿಯಬಗೆಯೆಂಬರು ಆ ಸಂಪ್ರದಾಯದ ಮಾಹೇಶ್ವರನೊಬ್ಬನು ಮಖ್ಯಕ್ಕೆ ಹೋಗಿ ಖಾಜೆಯೊಡನೆ ಚದುರಂಗವಾಡುತ್ತಿರುವಾಗ ಕೈನೀಡಿ ಎತ್ತಲು, ಇದೇನೆಂದು ಖಾಜಿ ಕೇಳಲು, ಮುಳುಗಿಹೋಗುತ್ತಿದ್ದ ನಿನ್ನ ಹಡ ಗನ್ನೆ ದೆನೆಂದು ನೆನೆದಿದ್ದ ತನ್ನ ಅಂಗಿಯನ್ನು ತೋರಿದನು, ಒರಗಾಲದಲ್ಲಿ ಮಳೆ ಯನ್ನು ಬರಿಸಿದುದರಿಂದ ಇವನಿಗೆ ಮಳೆಯ ಮಲ್ಲೇಶ ಎಂಬ ಹೆಸರಾಯಿತು. ಇವನ ಶಿಷ್ಯರು ಮಳೆಯಬಗೆಯವರು, ಕಂಬಾಳಮರುಳನು ಕಕುದ್ಧಿರಿಯ ಗಂಗಾಧರೇಶ್ ರನ ತೀರ್ಧಕುಂಡಾಗ್ರದಲ್ಲಿ ಪವಾಡದಿಂದ ಕಲ್ಲಕಂಬವನ್ನು ಬರಿಸಿ ನಿಲಿಸಲು ಅವನಿಗೆ ಕಂಬಾಳಮರುಳಸಿದ್ದೇಶಗುರು ಎಂದು ಹೆಸರಾಯಿತು. ಇವನ ಶಿಷ್ಯರು ಕಂಬಾಳ ಬಗೆಯವರು, ಹೀಗೆ ಹಲವು ಬಗೆಗಳಾದುವು, ಸೀರಶೈವರಲ್ಲಿ ಘನಲಿಂಗಚರ, ಅತೀತಿ ಚರ, ಉದಾಸಿವೈರಾಗ್ಯ ಚರ, ಷಟ್ಟ ಲವಿರಕ್ತಿ ಮೂರ್ತಿ ಎಂದು ನಾಲ್ಕು ಪದ್ಯಾಯ. ಈಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಅಂಗಡಿಬೀದಿ ಸರವ ತಿದ್ದಿಡುವ ಸರವಂದಿಗರ ಗಂದಿಗರ | ಪಿ೦ದ ತೈಲವ ತೆಗೆವ ಗಾಣಿಗರ ಸೇಣಿಗರ | ಇರದೆ ದವಸವನಳೆವ ಆ ಕೊವಟಿಗ ದೀವಟಿಗೆ ಕಲ್ಲಕುಟಿಗ | ಹರದರಂ ಮಚ್ಚಿಸುವ ನರ್ತ ಕರ ವರ್ತಕರ || ಕರಸಗಳ ನೆಯ ಜೇಡರಾ ಲಾಡರಾ ||
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.