405 ಶತಮಾನ ವೆಂಕಕವಿ ಆಶ್ವಾಸಗಳ ಕೊನೆಯಲ್ಲಿ ಈ ಗದ್ಯವಿದೆ ಇದು ಸಕಲಸುರನಿಕರಮಕುಟಘಟಿತಮಣಿಗಣಕಿರಣಪಟಲದೀಪಿತಚರಣಕಮ ಲಲಕ್ಷ್ಮೀವಲ್ಲಭಪಾದಭಕ್ತಿಯುಕ್ತ ಸುಕವಿವೆಂಕರಚಿತ ವೆಂಕಟೇಶಪ್ರಬಂಧದೊಳ್. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ಪಟ್ಟಣ, ಶ್ರೀಕರಗೋಪುರಮತಿಶೋ | ಭಾಕರಗೋತ್ರಾಂಗನಾಂಫ್ರಿನೂಪುರಮೆನೆ ಚಾ || ವಿಕರಮಯಕೋಟಾವೃತ | ದಾಕೃತಿಪುರಮೆಸೆದುದಿಂದ್ರಪುರಮಂ ನಗುತುಂ || ಉದ್ಯಾನ ,ವನಲಕ್ಷ್ಮೀಮಣೀಯನಾಭಿಯೊ ಸಮಂತುದ್ಯಾನಮೆಂದೆಂಬ ಮಾ | ನಿನಿ ತಾಂ ನಕ್ಕೊಡೆ ತೋರ್ಪ ಬಾಯ್ದೆಳೆಯೊ ಮೇಣಾರಾಮರಾಮಾಎಲೋ || ಕನಲೀಲಾಸ್ಪದವಾದ ದರ್ಪಣವೂ ಪೇಬಂದೆಂಬಿನಂ ರಾಜಿಕುಂ | ಘನಕಾಸಾರಮದೂರ್ವಿ ಪುಷ್ಪಲತಿಕಾಸಾರಂ ಸ್ಪುರಕ್ಕೀಸರಂ || ವಿಕಚವನೇರುಹಾವಳಿಗೆ ಹಾವಳಿಗೆಯ್ಪಳೆರಾಜೆ ರಾಜಿಪಾ | ಸುಕಲಿತದಾಡಿಮಿಾಫಲಮನುರ್ಬುತೆ ದಾಡೆಗಳುಳ್ಳ ಚಂಚುವಿಂ | ಸುಕರಸುಪಕ್ಷವತ್ಛಲದ,ಸತ್ಕದಳೀವನಕೈದಿ ಭುಂಜಿಪಾ | ಶುಕತತಿ ಪಾಡುತುಂ ಗಲಿಪುತುಂ ಮದನಾ ಕಲಿಯಾಗಿರೆಂಬುವೈ | ತೊಳಗುವ ಪೂಗೊಳಂ ಕೊಳದೊಳಾಡುವ ಹಂಸೆ ಹಂಸೆಯಾ | ಕಳರುತಿರಂಜನಂ ಜನಮನೋಹರಕೃತ್ಸುಮರಾಜೆ ರಾಜಿಸಿ | ರ್ಪಳಿಕುಳಝಂಕೃತಂ ಕೃತಕಶೈಲಮಣಿದ್ಯುತಿಶೋಭಿ ಶೋಭನಂ | ಗಳಮಯವಾಗಿ ಮಾಗಿದ ಫಲಾಳಿ ವಿಜೃಂಭಿಸೆ ತೋರ್ಪುದಾವನಂ 1 | ಕಾಡು. ಶುಂಡಾದಂಡಮನೆತ್ತಿಯೊರ್ಮೆ ಪರಿಯುತ್ತುಂ ಪ್ರೋಚ್ಚಿಲಾತಾಡನೋ | ದ್ದಂಡಾರಾವಕೆ ಬೆರ್ಚು ತುಂ ಸರಸಿಯೊಳ್ ಪೊಕ್ಕಬ್ಜ ಷಂಡಂಗಳಂ || 1 ಈ 3 ಪದ್ಯಗಳು ಅಶ್ವಾಸವು ಮುಗಿದಮೇಲೆ ಒಂದು ಬಿಡುಓಲೆಯಲ್ಲಿ ಬರೆ ದಿವೆ, ಈ ಗ್ರಂಥಕ್ಕೆ ಸೇರಿದುವೋ ಅಲ್ಲವೋ ಎಂದು ಸಂದೇಹವಾಗಿದೆ.
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೯೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.