ಈ ಪುಟವನ್ನು ಪರಿಶೀಲಿಸಲಾಗಿಲ್ಲ.
409 ಶತಮಾನ]
ತಿಮ್ಮರಸ ತನ್ನ ಕವಿತಾಚಾತುರಿಯನ್ನು ಹೀಗೆ ಹೇಳಿಕೊಂಡಿದಾನೆ ಭರಿತಲಾವಣ್ಯಾಂಗದಂತೆ ಬಂಧಂ ಸುಧಾ | ಕರನಂತಿರಮೃತಬಂಧುರಕಲಾಲಕ್ಷಣಂ | ಸುರುಚಿರಾಲಂಕಾರಗೀರ್ವಾಣಗಾನದಂತಂಗಭವನಂತೆ ಭಾವಂ || ಪರಿಮಳದಿ ಬರ್ಪ ತಣ್ಣೆಲರ ದಟ್ಟಡಿಯಂತೆ | ಪರಿಯಾಯಮಾರ್ಗಂ ಸುಜನರಂತೆ ಶಬ್ದವಿ| ಸ್ತರ . . . . . . . . ಶೃತಿಚಮತ್ಕೃತಿ ಧರಾತಳದೊಳು ||
ಕಾಂತೆಯಕ್ಕ ಱ ನೇಹದಂತೆ ತಂಗಾಳಿಯಂತೆಸೆವ ನೆಳದಿಂಗಳಂತೆ ಕಾಲೋ ಚಿತದಸಂತುಷ್ಟಿಯಂತೆ ಸಕ್ಕರೆಜೇನುವೆರಸಿದ ಸವಿಯಂತೆನ್ನ ಮೆಲ್ನುಡಿಗಳು.
ಇವನ ಗ್ರಂಥ. ಮಾರ್ಕಂಡೇಯ ರಾಮಾಯಣ. ಇದು ವಾರ್ಧಕ ಷಟ್ಪದಿಯಲ್ದಿ ಬರೆದಿದೆ, ನಮಗೆ ದೊರೆತ ಅಸಮ ಗ್ರಪ್ರತಿಯಲ್ಲಿ ಸಂಧಿ 30, ಸುಮಾರು 1500 ಪದ್ಯಗಳು ಇವೆ, ಇದರೆಳೊಗೆ ಯುಧಿಷ್ಠಿರನಿಗೆ ಮಾರ್ಕಂಡೇಯನು ಹೇಳಿದ ರಾಮಾಯಣದ ಕಥೆ ಯನ್ನು ಕವಿ ಕನ್ನಡದಲ್ಲಿ ಹೇಳಿದ್ದಾನೆ, ಗ್ರಂಥಾವತಾರದಲ್ಲಿ ಗಣೇಶಸ್ತುತಿ ಇದೆ. ಬಳಿಕ ಕವಿ ಯದುಗಿರಿನಾರಾಯಣ, ಯದುಗಿರಿನರಸಿಂಹ, ಬ್ರಹ್ಮ, ಸರಸ್ವತಿ, ಈಶ್ವರ, ಆಂಜನೇಯ, ವಾಲ್ಮೀಕಿ ಇವರುಗಳನ್ನು ಸ್ತುತಿಸಿ ದ್ದಾನೆ. ಗ್ರಂಥದಲ್ಲಿ ಯಮಕ, ಪ್ರಾಸ ವರ್ಣಾವೃತ್ತಿ ಇವುಗಳನ್ನು ವಿಶೇಷವಾಗಿ ಉಪಯೋಗಿಸಿದ್ದಾನೆ. ಇದರಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ - ಕಾಡು. ಸೋಮಸಂಚಾರಮಿರ್ದು೦ ನಭಸ್ತಳ ಮಲ್ತು| ಸೋಮೋದ್ಭವಸ್ಥಾನ ಮಾನಸ ಮಲ್ತು| ಸೋಮಕ್ಷಯಂ ತಾನೇನಿಸಿ ರಾಹುವಲ್ತು ಭುವನಂ ನೋಡೆ ಭುವನಮಲ್ತು|| ಸೋಮಾಶ್ರಯಮದಾಗಿ ಸೋಮಧರನಲ್ತೆನಿಸಿ | ಸೋಮನುತಮಶಾಂತಿಗುಣ ತನ್ನೊಳೊಪ್ಪಿರ್ಮ | ಸೋಮನಲ್ತೆಂದೆನಿಸಿ ಸೋಮಾಭಿರಾಮದಿಂ ಕಾನನಂ ಕಣ್ಗೆಸೆದುದು||
52