ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಶತಮಾನ] ಅಚ್ಯುತದಾಸ 431

                           ಋಷ್ಯಮೂಕಪರ್ವತ 
ಸಮಚರಣದಿಂ ತ್ರಿಪದಿಯಿಂದ ಚೌಪದದಿ ನು |
ತ್ತಮಷಟ್ಟದಿಗಳಿಂದ ಪಲವುದಂಡಕಗಳಿಂ | ಸಮುಚಿತಧ್ವನಿಗಳಳಿಂ ವರಪದಾರ್ಧ೦ಗಳಿ೦ ಸರಸಕಾವ್ಯಂಗಳಂತೆ || ಸುಮತಿದೂರ್ವಾಸನ.ಋಷಿಶೃಂಗರಮ್ಯದಿಂ | 

ವಿಮಲತಾಪಸವೃಂದದಂತೆ ನಿರ್ಝರಘೋಷ | ದಿ ಮನಂಗೊಳಿಸುತಿರ್ದುದಾತ್ರಿ ವಿಷ್ಟಪದಂತೆ ಋಷ್ಯಮೂ ಕಾದ್ರಿ ಚೆಲ್ವಿಂ ||

                                  ಕಿಸ್ಕಿಂಧಗಿರಿ
ಹರನಂತೆ ಚಕ್ಷುಶ್ರವಾನೀಕಭೂಷಣಂ | ಹರನಂತೆ ಸಂತತಶಿವಾಶೋಭಿತಾಂಗನುಂ। ಹರನಂತೆ ನೀಲಕಂಠವಿರಾಜಮಾನನುಂ ಹರನಂತೆ ಸೋಮಧರನುಂ | ಹರನಂತೆ ಗುಹನಂದಿಭೂತಗಣಪರಿವೃತಂ | ಹರನಂತೆ ಗಂಗಾತರಂಗಾವತಂಸನುಂ | ಹರನಂತೆ ಶಾಬರಚರಿತ್ರದಿಂ ಕಿಷ್ಕಿಂಧಗಿರಿ ಮನಂಗೊಳಿಸಿರ್ದುದು |
                                  ರಾಮಲಕ್ಷ್ಮಣರು 

ಬೆಂಗಡೆಯೊಳಮರಿಚಿದ ಡೊಣೆಗಳಿ೦ ಕಣೆಗಳಿಂ | ರಂಗುವಡೆದೆಸೆವ ಕಾರ್ಮುಕಗಳಿ೦ ಮುಖಗಳಿಂ | ಸಂಗಳಿಸಿದಮಳತೇಜಂಗಳಿಂ ಕಂಗಳಿಂ ಪಜ್ಜಳಿಪ ಕಾಂತಿಯಿಂದ | ಮುಂಗೈಯೊಳೆಸೆವ ಬಿಲ್ವೊಡೆಗಳಿಂ ಜಡೆಗಳಿಂ | ಹಿಂಗದೊಪ್ಪುವ ರಾಜತೇಜದಿಂ ಸಾಜದಿಂ ! ಪೊಂಗುವುರುತರದ ಲಾವಣ್ಯದಿಂ ಪುಣ್ಯದಿಂ ಕಂಗೊಳಿಸಿದರ್ ಕುವರರು ||

                                         _  _  _
                          ಅಚ್ಯುತದಾಸ ಸು.1650 

ಈತನು ತುಲಸೀಮಾಹಾತ್ಮವನ್ನು ಬರೆದಿದ್ದಾನೆ. ಇವನು ಬ್ರಾ ಹ್ಮಣಕವಿ ಎಂದು ತೋರುತ್ತದೆ, ತನ್ನ ಹೆಸರನ್ನು ವ್ಯಕ್ತವಾಗಿ ಹೇಳಿಕೊಂಡಿಲ್ಲ. ತೂಲನಸಿಯ ಖ್ಯಾತಿಯನು ಬಲ್ಲಂತೆ ಹೊಗದಳಿದನಚ್ಯುತನದ ಎಂದಿರುವುದರಿಂದ ಈ ಹೆಸರನ್ನೇ ಮೇಳೆ ಕೊಟ್ಟಿದ್ದೇವೆ. ,"ಶಾಸ್ತ್ರದರಿಯ ಯೆ ಕಾವ್ಯದ ನೀತಿಯಳರೆಯೆ, ಅಜ್ಞರಿಗಜ್ಞ" ” ಎಂದು ಹೇಳಿಕೊಂಡಿದ್ದಾ ನೆ. ಇವನ ಕಾಲವು ಸುಮಾರು 1650 ಆಗಿರಬಹುದೆಂದು ತೋರುತ್ತದೆ.