ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ ಗಂಗ 423

                                   ಗಂಗ ಸ.. 1650. 
                        
            ಇವನು ಕುಮಟರಾಮನ ಕಥೆಯನ್ನು ಬರೆದಿದ್ದಾನೆ. ಈತನು ಪಾಂಚಾಳದವನು; ಕನ್ನಡಕವಿಜಾಣ, ಚೆನ್ನಭುಜಂಗನ ಭೃತ್ಯ ಎಂದು ಹೇಳಿಕೊಂಡಿದ್ದಾನೆ. ತಗಡೂರುಕಟ್ಟೆಯಲ್ಲಿರುವ ಗಣೇಶನನ್ನು ಸ್ಮರಿಸು ತಾನೆ; ಅಲ್ಲದೆ ಇವನ ಗ್ರಂಧದಲ್ಲಿ ಅಲ್ಲಲ್ಲಿ ಜಟಂಗಿರಾಮೇಶ್ವರನ ಅಂಕಿತವು ದೊರೆಯುತ್ತದೆ. ಇವನ ಕಾಲವು ಸುಮಾರು 1650 ಆಗಿರಬಹುದು. ಪೂರ್ವಕವಿಗಳಲ್ಲಿ ಭಾಗುರಿ, ಅಗ್ಗಳ, ಹಲಾಯುಧ, ರಾಘವ, ವಾಲ್ಮೀಕಿ, ನಾಗವರ್ಮ ಇವರುಗಳನ್ನು ಸ್ಮರಿಸಿದ್ದಾನೆ, ತನ್ನ ಕವಿತಾಚಾತುರಿಯನ್ನು 

ಈ ಪದ್ಯದಲ್ಲಿ ತಿಳಿಸಿದ್ದಾನೆ

ಸಕ್ಕರೆ ಸವಿಯಂತೆ ಮಧುರ ಮಾವಿನಹಣ್ಣ | ಉಕ್ಕುವ ತನಿರಸದಂತೆ | 
ಮಕ್ಕಳ ನಸುನಗೆಯಂತೆ ಗಂಗನ ಮಾತು | ಸತ್ಕವಿಗಳು ಲಾಲಿವುದು ||
  ಇವನ ಗ್ರಂಥ
                                    
                                      ಕುಮಟರಾಮನಕಥೆ 
 
  ಇದು ಸಾಂಗತ್ಯದಲ್ಲಿ ಬರೆದಿದೆ; ಪದ್ಯ 3128. ಇದರಲ್ಲಿ ಕುಮಾರ ರಾಮನಕಥೆ ಹೇಳಿದೆ. ಕಥಾಗರ್ಭವನ್ನು ಕವಿ ಈಸದ್ಯದಲಿ ಸೂಚಿಸಿದ್ದಾನೆ:
ಮುತ್ತಿನ ಚೆಂಡನಾಡಲು ರಾಮನಾಧಗೆ | ಮೃತ್ಯುವಾದಳು ಪಾಪಿ ರತ್ನಿ | ಮತ್ತೆ ಪ್ರಧಾನಿಗಳಱಸಿ ಕೊಲ್ಲದೆ ಕಾದ | ಚಿತ್ರದ ಕಥೆಯ ಹೇಳಿವೆನು 1 ||
       ಗ್ರಂಧಾವತಾರದಲ್ಲಿ ಗಣೇಶಸ್ತುತಿ ಇದೆ ಬಳಿಕ ಕವಿ ಗರಳಪುರದ ನಂಜುಂಡ, ಬ್ರಹ್ಮ, ಸರಸ್ವತಿ, ನಾರದ ಇವರುಗಳನ್ನು ಸ್ತುತಿಸಿದ್ದಾನೆ. 

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ..

                 ರತ್ನಿಯನ್ನು ಕುರಿತು ಕುಮಾರರಾಮನ ಉಕ್ತಿ 

ಅಂಜೆನು ಪುಲಿಸಿಂಹಶಾರ್ದೂಲರಣಕೆ ನಾ | ನಂಜೆನು ಹರನ ಕರುಣದಲಿ | ಅಂಜುವೆನು ಪರಸತಿಯರಿಗೆ ನಾ | ಕುಂಜರಗಮನೆ ಚಿಕ್ಕಮ್ಮಾ || ತಂದೆಯ ರಾಣಿ ನಿನಗೆ ನಾನು ಕಂದನು | ಚೆಂದವಲ್ಲವೆ ನಿನಗಿದು ಗುಣವೆ | ಬೆಂದ ವಿಷಯಕೊಳಗಾದರೆ ನರಕವು | ಮುಂದೆ ತಪ್ಪದು ಕಾಣಮ್ಮಾ ||

     1   204 ನೆಯ ಪುಟವನ್ನು ನೋಡಿ.