ಈ ಪುಟವನ್ನು ಪರಿಶೀಲಿಸಲಾಗಿಲ್ಲ.

426 ಕರ್ಣಾಟಕ ಕವಿಚರಿತೆ [17 ನೆಯ

                    ವಿಕ್ರಮವಿಲಾಸ
    ಇದು ಸಾಂಗತ್ಯದಲ್ಲಿ ಬರೆದಿದೆ, ಸಂಧಿ 23, ಪದ್ಯ 1621. ಇದರಲ್ಲಿ

ನೀಲಕಂ‌‌‌‌‌‌‌‌‌‌‌ಠನ ಸದ್ಭಕ್ತನಾದ ಉಜ್ಜಯನೀರಾಜಚಂದ್ರಗುಪ್ತಕುಮಾರ ವಿಕ್ರ ಮನ ಕಥೆ ಹೇಳಿದೆ. ಗ್ರಂಥಾದಿಯಲ್ಲಿ ವಿರೂಪಾಕ್ಷಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇಶ, ವೀರೇಶ, ಭದ್ರಕಾಳಿ, ವಾಣಿ ಇವರುಗಳನ್ನು ಸ್ತುತಿಸಿದ್ದಾನೆ. ಸಂಧಿಗಳ ಕೊನೆಯಲ್ಲಿ ಬೆಳಗೋಡರಸವೀರಭದ್ರೇಶನ ಅಂಕಿತವಿದೆ. ಈಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿಬರೆಯುತ್ತೇವೆ.

                   ಚಂದ್ರ 

ಗರಳದೊಡನೆ ಹುಟ್ಟಲು ಕಣಿಯಾದುದೊ | ವಿರಹಿಜರದ ನಿಟ್ಟು ಸುರ | ಉರಿ ತಾಗಿ ಕಂದಿತೊ ಎನಲು ಕಳಂಕ ಗೋ | ಚರಿಸಿತು ಚಂದ್ರನೆದೆಯೊಳು || ಸ್ಮರಗನಡ್ಡಣವೊ ರತಿಯ ಮುತ್ತಿನ ಬೊಟ್ಟೊ | ಸುರಪನ ವಜದರ್ಪಣವೋ | ವಿರಹಿಗಳೆದೆಗಿಚ್ಚಿನುರಿಯೊ ಎಂದೆನಲ೦ | ಬರವ ಬೆಳಗಿದ ಶಶಾ೦ಕ || ಮಾರನೆ ಬೇಳ್ವೆಯ ಬದಿಯೊ ಮನ್ಮಧ | ವೀರನು ಬೀಸಿದ ಬಲೆಯೋ || ನೀರಜಶರನ ಕರಾರಿಯ ಹೊಳಹನೆ | ಬೀದ ಶಶಿ ಚಂದ್ರಿಕೆಯ ||

                    ಸಮುದ್ರ

ಬೆಳಗುವ ಚಂದ್ರ ತನ್ನೊಳು ಪುಟ್ಟಿಯೆದೆಗವ | ದಳೆದಿರಲಂಬುಧಿ ನೋಡಿ | ತೊಳೆವೆನೆಂದಾಗಸಕೇರ್ವಲು ತೆರೆಗಳು | ಚ್ಚಳಿಪುವು ಗಗನಮಂಡಲಕೆ ||

                    ಸಿಂಧುನದಿ

ಸೆಳವ ತಿರಹು ಮಡು ನೆಲೆಗಾಣದಿಹ ತಾಣ | ಸುಳೇ ಮುರಿದೆತ್ತುವ ಮಲಹು| ಮುಲಿಲ ದಿಣ್ಣೆಗಳನೋಸರಿಸುತಿತ್ತಡಿಗಳ | ನೆಲೆಯುತ ತಟಿನಿ ರಂಜಿಸಿತು ||

                     ಆರಾಮ

ತನುವೆಂಬ ಕುಲುಮೆ ತಂಬೆಲರಿನ ತಿದಿ ಕೆ೦ | ಗೊನರಗ್ನಿಯಲಿ ನನೆಸರಳ | ಮೊನೆಮಾಡಿ ಚೈತ್ರಕಾರುಕ ಮದನನಿಗೀವ | ಮನೆಯೆನಲೊಪ್ಪಿತಾರಾಮ ||

                 ಸ್ತ್ರೀವರ್ಣನೆ

ತಿಲಕಕುಸುಮವೊ ಚೆಂದುಟಿತೊಂಡೆವಣ್ಣನು | ಮೆಲಿಟವೆಳಗಿಳಿಗೊಕ್ಕೋ | ಅಳಿವಗೆಯಾಗದ ಸಂಪಗೆಯರೆಬಿರಿ | ದಲರೊ ಕೋಮಲೆಯ ನ ಸಿಕವೋ ||

                ___ ___ ___ ___